Dabangg 3 Kannada Movie: ದಬಂಗ್​ 3 ಮೋಷನ್​ ಪೋಸ್ಟರ್​ ರಿಲೀಸ್​: ಕನ್ನಡದಲ್ಲಿ ಸಲ್ಮಾನ್​ ಡೈಲಾಗ್ ಹೇಗಿದೆ ಗೊತ್ತಾ..?​

Salman Khan: ಹಿಂದಿ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಈ ಸಲ ಚುಲ್​ಬುಲ್​ ಪಾಂಡೆ ರಂಜಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದ ಪ್ರೇಕ್ಷಕರು ಸಲ್ಮಾನ್​ ಖಾನ್​ ಹೇಳುವ ಕನ್ನಡದ ಡೈಲಾಗ್​ ಅನ್ನು ಕೇಳಿ, ನೋಡಿ ಆನಂದಿಸಬಹುದಾಗಿದೆ.

Anitha E | news18-kannada
Updated:September 11, 2019, 2:16 PM IST
Dabangg 3 Kannada Movie: ದಬಂಗ್​ 3 ಮೋಷನ್​ ಪೋಸ್ಟರ್​ ರಿಲೀಸ್​: ಕನ್ನಡದಲ್ಲಿ ಸಲ್ಮಾನ್​ ಡೈಲಾಗ್ ಹೇಗಿದೆ ಗೊತ್ತಾ..?​
ದಬಂಗ್​ 3 ಚಿತ್ರದ ಕನ್ನಡದ ಮೋಷನ್ ್ಪೋಸ್ಟರ್​ನಲ್ಲಿ ಸಲ್ಮಾನ್​ ಖಾನ್​
  • Share this:
- ಅನಿತಾ ಈ, 

ಬಾಲಿವುಡ್​ನ ಬ್ಲಾಕ್​ಬಸ್ಟರ್​ 'ದಬಂಗ್'​ ಸಿನಿಮಾದ ಮೂರನೇ ಭಾಗ 'ದಬಂಗ್​ 3'ರ ಚಿತ್ರೀಕರಣ ಜೋರಾಗಿ ಸಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಸಲ್ಲು ಮತ್ತು ಅವರ ತಂಡ ಎರಡನೇ ಹಂತದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಕಿಚ್ಚ ಸಲ್ಲು ಮುಂದೆ ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್​ ಮುಂದೆ ತೊಡೆ ತಟ್ಟಿ ನಿಲ್ಲುವ ಪವರ್​ಫುಲ್​ ಖಳನ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿರುವ ವಿಷಯ ತಿಳಿದೇ ಇದೆ.

Salman Kahan in Dabangg 3 sets
'ದಬಂಗ್​ 3' ಸಿನಿಮಾದಲ್ಲಿ ಸಲ್ಮಾನ್​ ಖಾನ್​


ಹಿಂದಿ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಈ ಸಲ ಚುಲ್​ಬುಲ್​ ಪಾಂಡೆ ರಂಜಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದ ಪ್ರೇಕ್ಷಕರು ಸಲ್ಮಾನ್​ ಖಾನ್​ ಹೇಳುವ ಕನ್ನಡದ ಡೈಲಾಗ್​ ಅನ್ನು ಕೇಳಿ, ನೋಡಿ ಆನಂದಿಸಬಹುದಾಗಿದೆ.

ಅದಕ್ಕಾಗಿಯೇ ಬ್ಯಾಡ್​ ಬಾಯ್ ಸಲ್ಮಾನ್​ ಕನ್ನಡದ ಪ್ರೇಕ್ಷಕರಿಗೆಂದೇ ಇಂದು 'ದಬಂಗ್ 3' ಸಿನಿಮಾದ ಮೋಷನ್​ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲೂ ಒಂದು ವಿಶೇಷತೆ ಇದೆ.


Loading...

ಅದು ಸಲ್ಮಾನ್​ ಅವರೇ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ಸಲ್ಲು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಡೈಲಾಗ್​ ಹೇಳಿದ್ದಾರೆ. 'ಟೈಮು ನಂದು.. ತಾರೀಖು ನಂದು...' ಎಂದು ಸಲ್ಲು ಹೇಳಿರುವ ಈ ಡೈಲಾಗ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: 'ಪೈಲ್ವಾನ್'​ ಚಿತ್ರಕ್ಕಾಗಿ ಕಿಚ್ಚ ಸುದೀಪ್​ ಜಿಮ್​ನಲ್ಲಿ ಬೆವರಿಳಿಸಿದ ವಿಡಿಯೋ ಇಲ್ಲಿದೆ..!

ಇನ್ನು ಈ ಸಿನಿಮಾದಲ್ಲಿ ಕಿಚ್ಚನ ಪಾತ್ರಕ್ಕೆ ಖುದ್ದು ಸುದೀಪ್​ ಅವರೇ ಡಬ್​ ಮಾಡುತ್ತಿದ್ದಾರೆ. ಉಳಿದಂತೆ ಸಲ್ಮಾನ್​ ಪಾತ್ರಕ್ಕೆ ಯಾರು ಕಂಠದಾನ ಮಾಡಲಿದ್ದಾರೆ ಎಂದು ಇನ್ನೂ ಬಹಿರಂಗವಾಗಿಲ್ಲ.

ಸಲ್ಮಾನ್​ ಮಾಡಿರುವ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಕಿಚ್ಚ, 'ಕನ್ನಡಿಗರು ತುಂಬು ಹೃದಯದಿಂದ ನಿಮ್ಮನ್ನು ಸ್ವಾಗತಿಸುತ್ತಾರೆ. ಕನ್ನಡಿಗರು ನಿಮ್ಮನ್ನು ಇಷ್ಟಪಡುತ್ತಾರೆ. ನೀವು ಕನ್ನಡದಲ್ಲಿ ಮಾತನಾಡಿರುವುದಕ್ಕೆ ಮತ್ತಷ್ಟು ಹೆಚ್ಚಾಗಿ ಇಷ್ಟಪಡುತ್ತಾರೆ' ಎಂದು ಬರೆದುಕೊಂಡಿದ್ದಾರೆ.



ಸಲ್ಮಾನ್​ ಖಾನ್​, ಅರ್ಬಾಜ್​ ಖಾನ್​ ಹಾಗೂ ನಿಖಿಲ್​ ದ್ವಿವೇದಿ ನಿರ್ಮಾಣದ ಈ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಇದು ಇದೇ ವರ್ಷ 20 ಡಿಸೆಂಬರ್​ಗೆ ತೆರೆ ಕಾಣಲಿದ್ದು, ಇನ್ನೂ ನೂರು ದಿನಗಳು ಕಾಯಬೇಕು.

Evelyn Sharma: ವೈರಲ್​ ಆಯ್ತು 'ಸಾಹೋ' ಬ್ಯೂಟಿಯ ಬಿಕಿನಿ ಫೋಟೋಗಳು



 
First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...