• Home
  • »
  • News
  • »
  • entertainment
  • »
  • Salman Khan: ಸಲ್ಮಾನ್‌ ಖಾನ್‌ಗೆ ಒಂದು ಕಾಲದಲ್ಲಿ ಬಟ್ಟೆ ಖರೀದಿಸೋಕೂ ಹಣ ಇರ್ಲಿಲ್ವಂತೆ! ಆಗ ಸಹಾಯ ಮಾಡಿದ್ದು ಇದೇ ಕನ್ನಡಿಗನಂತೆ!

Salman Khan: ಸಲ್ಮಾನ್‌ ಖಾನ್‌ಗೆ ಒಂದು ಕಾಲದಲ್ಲಿ ಬಟ್ಟೆ ಖರೀದಿಸೋಕೂ ಹಣ ಇರ್ಲಿಲ್ವಂತೆ! ಆಗ ಸಹಾಯ ಮಾಡಿದ್ದು ಇದೇ ಕನ್ನಡಿಗನಂತೆ!

ಸಲ್ಮಾನ್​ ಖಾನ್​ ಮತ್ತು ಸುನೀಲ್ ಶೆಟ್ಟಿ

ಸಲ್ಮಾನ್​ ಖಾನ್​ ಮತ್ತು ಸುನೀಲ್ ಶೆಟ್ಟಿ

Salman Khan: ಇತ್ತೀಚೆಗೆ, ಅಬುಧಾಬಿಯಲ್ಲಿ ನಡೆದ IIFA ಕಾರ್ಯಕ್ರಮದಲ್ಲಿ, ಸಲ್ಮಾನ್ ನಿರ್ಮಾಪಕ ಬೋನಿ ಕಪೂರ್ ತನ್ನ ಕಷ್ಟದ ಸಮಯದಲ್ಲಿ ಹೇಗೆ ಸಹಾಯ ಮಾಡಿದರು ಎಂಬುದನ್ನು ಬಹಿರಂಗಪಡಿಸಿದ್ದರು.

  • Share this:

ದಶಕಗಳಿಂದ ಇಂಡಸ್ಟ್ರಿಯಲ್ಲಿರುವ ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan) ಅವರ ಬಗ್ಗೆ ಹಲವರಲ್ಲಿ ಹಲವಾರು ರೀತಿಯ ಅಭಿಪ್ರಾಯಗಳಿದೆ. ಅವರನ್ನು ಅಹಂಕಾರಿ ಎಂದು ಕೆಲವರು ಅಂದುಕೊಂಡರೆ, ಕೆಲವರಿಗೆ ಅವರು ಸಹನೂಭೂತಿಯ ಮೂರ್ತಿ. ಸಾಮಾನ್ಯವಾಗಿ ನಾವು ಸಲ್ಮಾನ್​ ಖಾನ್​ ಬೇರೆಯವರಿಗೆ ಸಹಾಯ ಮಾಡಿರುವುದನ್ನ ಕೇಳಿರುತ್ತೇವೆ. ಆದರೆ ಅವರು ಜೀವನದಲ್ಲಿ ಅನುಭವಿಸಿದ ನೋವಿನ ಬಗ್ಗೆ ಹಾಗೂ ಕಷ್ಟದ ಸಮಯದ ಬಗ್ಗೆ ಕೇಳಿಲ್ಲ. ಆದರೆ ಈ ಬಾರಿ ಅವರು ಒಂದು ಶರ್ಟ್ ಮತ್ತು ಜೀನ್ಸ್ ಅನ್ನು ಖರೀದಿಸಲು ಸಹ ಕಷ್ಟಪಟ್ಟ ದಿನಗಳನ್ನು ನೆನೆಸಿಕೊಂಡಿದ್ದು, ಆಗ ಸಹಾಯಕ್ಕೆ ಬಂದ ನಟ ಸುನೀಲ್ ಶೆಟ್ಟಿ (Suniel Shetty) ಬಗ್ಗೆ ಹೇಳಿಕೊಂಡಿದ್ದಾರೆ.


ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಯಾವ ರೀತಿ ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದೆ ಎಂಬುದನ್ನ ವಿವರಿಸಿದ್ದು, ಒಂದು ಜೊತೆ ಬಟ್ಟೆ ಖರೀದಿಸಲು ಪರದಾಡಿದ್ದೇನೆ ಎಂದು ನೆನೆಸಿಕೊಂಡಿದ್ದಾರೆ.  ಅಲ್ಲದೇ ಆ ದಿನಗಳಲ್ಲಿ ಬಹಳಷ್ಟು ಕಷ್ಟಪಟ್ಟಿದ್ದೇನೆ. ನನ್ನ ಬಳಿ ಹೆಚ್ಚಿನ ಹಣ ಇರಲಿಲ್ಲ. ಆ ಸಮಯದಲ್ಲಿ, ಹೊಸ ಫ್ಯಾಶನ್ ಟ್ರೆಂಡ್ ಬಂದಿತು ಮತ್ತು ಅದು ಸ್ಟೋನ್​ ಜೀನ್ಸ್ ಆಗಿತ್ತು. ನಾನು ಶಾಪಿಂಗ್ ಮಾಡುತ್ತಿದ್ದೆ ಮತ್ತು ಅತ್ಯಂತ ಜನಪ್ರಿಯ ಅಂಗಡಿಯಲ್ಲಿ ನಾನು ಜೀನ್ಸ್ ಮತ್ತು ಶರ್ಟ್ ಅನ್ನು ನೋಡಿದೆ. ನನ್ನ ಬಳಿ ಜೀನ್ಸ್ ಖರೀದಿಸಲು ಸಾಕಾಗುವಷ್ಟು ಮಾತ್ರ ಹಣ ಇತ್ತು ಮತ್ತು ನಾನು ಶರ್ಟ್ ಅನ್ನು ಬಿಟ್ಟುಬಿಟ್ಟೆ ಎಂದಿದ್ದಾರೆ. ಅಲ್ಲದೇ ಆ ಸಮಯದಲ್ಲಿ ಆಗ ಸುನೀಲ್ ಶೆಟ್ಟಿ ಹೇಗೆ ಸಹಾಯ ಮಾಡಿದರು ಎಂಬುದನ್ನ ಸಹ ಹೇಳಿದ್ದಾರೆ.


ಬಟ್ಟೆ ಗಿಫ್ಟ್ ನೀಡಿದ ಸುನೀಲ್ ಶೆಟ್ಟಿ


ಆ ಸಮಯದಲ್ಲಿ ನನ್ನ ಜೊತೆ ಶಾಪಿಂಗ್ ಬಂದಿದ್ದ ನಟ ಸುನೀಲ್ ಶೆಟ್ಟಿ, ನನ್ನ ಬಳಿ ಹಣವಿಲ್ಲ ಎಂಬುದನ್ನ ಗಮನಿಸಿ, ಆ ಶರ್ಟ್ ಖರೀದಿಸಿ ನನಗೆ ಗಿಫ್ಟ್​ ನೀಡಿದ್ದರು ಎಂದು ಸಲ್ಲು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ನನಗೆ ಅಲ್ಲಿದ್ದ ವ್ಯಾಲೆಟ್​ ಬಹಳ ಇಷ್ಟವಾಗಿತ್ತು. ಅದನ್ನು ಸಹ ನೋಡಿ ಸುಮ್ಮನಾಗಿದ್ದೆ. ಆದರೆ ಇದನ್ನೂ ಸಹ ಗಮನಿಸಿದ ಸುನೀಲ್ ಅವರು ಆ ವ್ಯಾಲೆಟ್​ ಅನ್ನು ಸಹ ನನಗೆ ಗಿಫ್ಟ್​ ನೀಡಿದ್ದರು ಎಂದ ಆ ದಿನಗಳನ್ನು ನೆನೆಸಿಕೊಂಡಿದ್ದಾರೆ.


ಇದನ್ನೂ ಓದಿ: ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮೇಘಾ ಶೆಟ್ಟಿ, ಚಿತ್ರದ ಫಸ್ಟ್​ಲುಕ್​ ರಿಲೀಸ್​


ಇತ್ತೀಚೆಗೆ, ಅಬುಧಾಬಿಯಲ್ಲಿ ನಡೆದ IIFA ಕಾರ್ಯಕ್ರಮದಲ್ಲಿ, ಸಲ್ಮಾನ್ ನಿರ್ಮಾಪಕ ಬೋನಿ ಕಪೂರ್ ತನ್ನ ಕಷ್ಟದ ಸಮಯದಲ್ಲಿ ಹೇಗೆ ಸಹಾಯ ಮಾಡಿದರು ಎಂಬುದನ್ನು ಬಹಿರಂಗಪಡಿಸಿದ್ದರು. ಅವರು ಕಷ್ಟದ ಸಮಯದಲ್ಲಿದ್ದಾಗ, ಆರ್ಥಕ ಪರಿಸ್ಥಿತಿ ಹದಗೆಟ್ಟಿದ್ದಾಗ  ಬೋನಿ ಅವರಿಗೆ ವಾಂಟೆಡ್ ಚಿತ್ರ ನೀಡಿ ಸಹಾಯ ಮಾಡಿದ್ದನ್ನ ಬಹಿರಂಗಪಡಿಸಿದ್ದಾರೆ. "ಬೋನಿ ಜಿ ನನ್ನ ಜೀವನದುದ್ದಕ್ಕೂ ನನಗೆ ಸಹಾಯ ಮಾಡಿದ್ದಾರೆ. ನನ್ನ ವೃತ್ತಿಜೀವನವು ಕಷ್ಟಕರ ಸಮಯದಲ್ಲಿದ್ದಾಗ ಸಹ, ಬೋನಿ ಜಿ ನನಗೆ ವಾಂಟೆಡ್ ಎಂಬ ಚಲನಚಿತ್ರವನ್ನು ನೀಡಿ ಸಹಾಯ ಮಾಡಿದ್ದು. ಆ ಚಿತ್ರ ನನ್ನ ಬದುಕಿಗೆ ತಿರುವು ನೀಡಿತು ಎಂದಿದ್ದಾರೆ.
ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ


ಸದ್ಯ ಸಲ್ಮಾನ್​ ಖಾನ್​ ಬೆದರಿಕೆ ಪತ್ರವಾಗಿ ಸುದ್ದಿಯಲ್ಲಿದ್ದು, ಸಲ್ಮಾನ್ ಒಮ್ಮೆ ಲಾರೆನ್ಸ್ ಬಿಷ್ಣೋಯ್ ಅವರ ಹಿಟ್​ ಲಿಸ್ಟ್​ನಲ್ಲಿದ್ದರು ಎಂಬ ಸುದ್ದಿ ವರದಿಯಾಗಿತ್ತು. 2018 ರಲ್ಲಿ, ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್  ಸಹಚರ ಒಬ್ಬನನ್ನು ಬಂಧಿಸಲಾಗಿತ್ತು.  “ನಾವು ಸಲ್ಮಾನ್ ಖಾನ್ ಅವರ ಒಟ್ಟಾರೆ ಭದ್ರತೆಯನ್ನು ಹೆಚ್ಚಿಸಿದ್ದೇವೆ. ರಾಜಸ್ಥಾನದ ಗ್ಯಾಂಗ್‌ನಿಂದ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಸಲ್ಮಾನ್ ಖಾನ್ ಅಪಾರ್ಟ್‌ಮೆಂಟ್‌ನ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಿದ್ದು, ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳೆದ ವಾರ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದರು.


ಇದನ್ನೂ ಓದಿ: ಬಿಡುಗಡೆಗೆ ಸಿದ್ಧವಾಯ್ತು ಭೈರಾಗಿ, ಶಿವಣ್ಣ ಅಭಿಮಾನಿಗಳಲ್ಲಿ ಹೆಚ್ಚಿದ ಕಾತುರ


ಈ ಮಧ್ಯೆ, IIFA 2022 ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದ ನಟ ಸಲ್ಮಾನ್ ಮೊನ್ನೆಯಷ್ಟೇ ಅಬುಧಾಬಿಯಿಂದ ಹಿಂದಿರುಗಿದ್ದಾರೆ. ಇನ್ನು ಅವರ ಚಿತ್ರಗಳ ವಿಚಾರಕ್ಕೆ ಬಂದರೆ ಸಲ್ಮಾನ್ ಬಳಿ ಕೆಲವು ಚಲನಚಿತ್ರಗಳಿವೆ. ಅವರು ಕತ್ರಿನಾ ಕೈಫ್ ಜೊತೆಗೆ ಟೈಗರ್ 3 ಮತ್ತು ಕಭಿ ಈದ್ ಕಭಿ ದಿವಾಲಿ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ ಇನ್ನೂ ಹಲವಾರು ಕತೆಗಳನ್ನು ಕೇಳುತ್ತಿದ್ದು, ನಟ ಶಾರುಖ್ ಖಾನ್ ಅವರ ಪಠಾನ್‌ನಲ್ಲಿ ಅತಿಥಿ ಪಾತ್ರವನ್ನು ಸಹ ಮಾಡಲಿದ್ದಾರೆ.

Published by:Sandhya M
First published: