ಸಾಮಾನ್ಯವಾಗಿ ನಾವು ಯಾರದ್ದೋ ಸಂಬಂಧಿಕರ ಮದುವೆಯಲ್ಲಿ (Marriage) ಅಥವಾ ಸ್ನೇಹಿತರ ಮದುವೆಯಲ್ಲಿ ಹೋದಾಗ, ಅಲ್ಲಿ ನಾವು ಕೆಲವೊಮ್ಮೆ ಅನಿರೀಕ್ಷಿತವಾಗಿ ಕೆಲವು ಸಿನೆಮಾ ನಟ-ನಟಿಯರನ್ನು (Actors) ನೋಡುತ್ತೇವೆ. ಅಪರೂಪಕ್ಕೆ ಎಂಬಂತೆ ಸಿನೆಮಾ ನಟರು ನಮಗೆ ಕೆಲವೊಂದು ಮದುವೆಗಳಲ್ಲಿ ನೋಡಲು ಸಿಗುತ್ತಾರೆ ಅಂತ ಹೇಳಬಹುದು. ಹೀಗೆ ನೋಡಲು ಸಿಕ್ಕ ನಟ-ನಟಿಯರನ್ನು ನೋಡುವುದಕ್ಕೆ ಅವರ ಅಭಿಮಾನಿಗಳಂತೂ ತುಂಬಾನೇ ಹಾತೊರೆಯುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅವರ ಜೊತೆಯಲ್ಲಿ ನಿಂತು ಒಂದೇ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮತ್ತು ಆ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದು ಎಂದರೆ ಅಭಿಮಾನಿಗಳಿಗೆ ತುಂಬಾನೇ ಪ್ರೀತಿಯ ಕೆಲಸ.
ಆ ಸಿನೆಮಾ ನಟರು ಸಹ ಯಾರದಾದರೂ ಮದುವೆಗೆ ಬರುವಾಗ ಚೆನ್ನಾಗಿ ನೀಟಾಗಿ ಡ್ರೆಸ್ ಮಾಡಿಕೊಂಡು ಬರುತ್ತಾರೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಮತ್ತು ನಟಿಯರ ಡಿಫರೆಂಟ್ ಲುಕ್ ಅನ್ನು ಎಂದರೆ ಸಿನೆಮಾದಲ್ಲಿ ಮುಖಕ್ಕೆ ತುಂಬಾನೇ ಮೇಕಪ್ ಮಾಡಿಕೊಂಡು ತುಂಬಾನೇ ಗ್ರ್ಯಾಂಡ್ ಆಗಿರುವ ಬಟ್ಟೆಗಳನ್ನು ಧರಿಸಿರುವುದನ್ನು ನೋಡಿದ ಅಭಿಮಾನಿಗಳಿಗೆ ಅವರ ನೆಚ್ಚಿನ ನಟ-ನಟಿಯರ ಸ್ವಲ್ಪ ಬೇರೆಯದ್ದೆ ಎಂದರೆ ನೈಜವಾದ ಲುಕ್ ನೋಡಲು ಸಿಗುತ್ತದೆ ಎಂದು ಹೇಳಬಹುದು.
ಪೊಲೀಸ್ ಕಮಿಷನರ್ ಮಗಳ ಮದುವೆಗೆ ಬಂದ ಬಾಲಿವುಡ್ ತಾರೆಯರು
ಮುಂಬೈ ಪೊಲೀಸ್ ಕಮಿಷನರ್ ವೊಬ್ಬರ ಮಗಳ ಮದುವೆಗೆ ಬಾಲಿವುಡ್ ನ ಇಬ್ಬರು ಸ್ಟಾರ್ ನಟರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್ ಮತ್ತು ನಟಿ ಶಿಲ್ಪಾ ಶೆಟ್ಟಿ ಬಂದಿದ್ದರು. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರ ಮಗಳು ಮೈತ್ರೇಯಿ ಫನ್ಸಾಲ್ಕರ್ ಅವರ ವಿವಾಹ ಆರತಕ್ಷತೆಯಲ್ಲಿ ಉಪಸ್ಥಿತಿ ಇರುವುದರೊಂದಿಗೆ ಈ ಮದುವೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು ಎಂದು ಹೇಳಬಹುದು.
ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ವಿಭಿನ್ನವಾಗಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಮದುವೆಗೆ ಹಾಜರಾಗುವುದು ಅಷ್ಟೇ ಅಲ್ಲದೆ, ನಟ ರಣವೀರ್ ವೇದಿಕೆಯ ಮೇಲೆ ಹೋಗಿ ಡ್ಯಾನ್ಸ್ ಮಾಡಿ ಪ್ರದರ್ಶನ ನೀಡಿದರು. ಮದುವೆ ಆರತಕ್ಷತೆಯ ಕೆಲವು ಫೋಟೋಗಳು ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಮದುವೆಗೆ ಗ್ಲ್ಯಾಮರ್ ಸೇರಿಸಿದ ಸಲ್ಮಾನ್ ಮತ್ತು ರಣವೀರ್
ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರ ಮಗಳು ಮೈತ್ರೇಯಿ ಫನ್ಸಾಲ್ಕರ್ ಅವರ ವಿವಾಹದಲ್ಲಿ ಸಲ್ಮಾನ್ ಖಾನ್ ಮತ್ತು ರಣವೀರ್ ಸಿಂಗ್ ಅವರು ಸ್ಟಾರ್ ಆಗಿ ಕಾಣಿಸಿಕೊಂಡರು.
ಶಿಲ್ಪಾ ಶೆಟ್ಟಿ ಕೂಡ ಅವರೊಂದಿಗೆ ಸೇರಿಕೊಂಡರು. ಸಲ್ಮಾನ್ ಕಪ್ಪು ಸೂಟ್ ಧರಿಸಿ ವಧು ಮತ್ತು ವರರ ಮಧ್ಯದಲ್ಲಿ ನಿಂತು ಫೋಟೋಗೆ ಪೋಸ್ ನೀಡಿದಾಗ ತುಂಬಾನೇ ಡ್ಯಾಶಿಂಗ್ ಆಗಿ ಕಾಣುತ್ತಿದ್ದರು.
ನಟ ರಣವೀರ್ ಸಿಂಗ್ ನಿರ್ದೇಶಕ ರೋಹಿತ್ ಶೆಟ್ಟಿ ಅವರೊಂದಿಗೆ ಸೇರಿಕೊಂಡು ಮದುವೆಗೆ ಬಂದಿದ್ದರು. ಅವರು ಮದುವೆಯ ವೇದಿಕೆಯ ಮೇಲೆ ಹೋಗಿ ಹಾಡಿಗೆ ಡ್ಯಾನ್ಸ್ ಮಾಡಿ ಅಲ್ಲಿದ್ದ ಅತಿಥಿಯರನ್ನು ರಂಜಿಸಿದರು.
ಕೆಂಪು ಸೀರೆಯನ್ನುಟ್ಟುಕೊಂಡು ಮದುವೆಗೆ ಬಂದ ನಟಿ ಶಿಲ್ಪಾ ಶೆಟ್ಟಿ..
ಇವರಿಬ್ಬರು ನಟರಲ್ಲದೆ, ನಟಿ ಶಿಲ್ಪಾ ಶೆಟ್ಟಿ ಸಹ ಹೊಳೆಯುವ ಕೆಂಪು ಸೀರೆಯನ್ನು ಉಟ್ಟುಕೊಂಡು ಸಂತೋಷದಿಂದ ಈ ವಧು-ವರರನ್ನು ಅಭಿನಂದಿಸಲು ಮದುವೆಗೆ ಆಗಮಿಸಿದ್ದರು.
ಇದನ್ನೂ ಓದಿ: Salman Khan: ಆ ಒಂದು ಕೇಸ್ಗಾಗಿ ಸಲ್ಮಾನ್ ಖಾನ್ ಸುರಿದ ಕೋಟಿಗಳೆಷ್ಟು ಗೊತ್ತೇ?
ಇನ್ನೂ ಕೆಲಸದ ವಿಷಯಕ್ಕೆ ಬಂದಾಗ, ನಟ ರಣವೀರ್ ಸಿಂಗ್ ತಮ್ಮ ಚಿತ್ರ ‘ಸರ್ಕಸ್’ ನ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದು ನಿರ್ದೇಶಕ ರೋಹಿತ್ ಶೆಟ್ಟಿ ಅವರೊಂದಿಗಿನ ಅವರ ನಾಲ್ಕನೇ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಎಂಬ ಚಿತ್ರವನ್ನು ಸಹ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ