ಬಾಲಿವುಡ್ ನಲ್ಲಿ (Bollywood) ಮೋಸ್ಟ್ ಎಲಿಜೆಬಲ್ ಬ್ಯಾಚ್ಯುಲರ್ ಎಂದರೆ ಅದು ನಟ ಸಲ್ಮಾನ್ ಖಾನ್ ಅಂತ ಎಲ್ಲರಿಗೂ ಗೊತ್ತು. ಇವರ ಅಭಿಮಾನಿಗಳಿಗಂತೂ ತಮ್ಮ ನೆಚ್ಚಿನ ನಟ ಸಲ್ಮಾನ್ ಖಾನ್ (Salman Khan) ಯಾವಾಗಪ್ಪಾ ಮದುವೆ ಮಾಡಿಕೊಳ್ಳುತ್ತಾರೆ ಅನ್ನೋದೆ ಒಂದು ದೊಡ್ಡ ಕುತೂಹಲದ ಪ್ರಶ್ನೆ. ಯಾವೊಬ್ಬ ನಟಿಯ ಜೊತೆ ಸಲ್ಮಾನ್ ಖಾನ್ ಅವರ ಹೆಸರು ಸ್ವಲ್ಪ ಸುದ್ದಿಯಲ್ಲಿ ಕಾಣಿಸಿಕೊಂಡರೂ ಆ ನಟಿಯನ್ನು ಮದುವೆ ಆಗ್ತಿದ್ದಾರ ಸಲ್ಮಾನ್ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಆದರೆ ಈಗ ಸಲ್ಮಾನ್ ಮದುವೆಯ ಬಗ್ಗೆ ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ, ಇವರಿಗೆ ಮಗುವಿಗೆ ತಂದೆಯಾಗುವ ಆಸೆಯಂತೆ. ಈ ಮಾತನ್ನು ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ. ತಂದೆಯಾಗುವುದು ಎಂದರೆ ಮದುವೆ (Marriage) ಮಾಡಿಕೊಂಡು ಮಗುವಿಗೆ ತಂದೆಯಾಗುವುದಲ್ಲ, ಇದರ ಬಗ್ಗೆ ಏನು ಹೇಳಿದ್ದಾರೆ ನೋಡಿ ನಟ.
ತಂದೆಯಾಗುವ ಆಸೆಯಂತ ಖುದ್ದು ಸಲ್ಮಾನ್ ಅವರೇ ಹೇಳಿಕೊಂಡಿದ್ದಾರೆ ನೋಡಿ..
ಇತ್ತೀಚೆಗೆ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಲ್ಮಾನ್ ಅವರು ತಂದೆಯಾಗುವ ತಮ್ಮ ಬಯಕೆಯನ್ನು ಮುಚ್ಚು ಮರೆಯಿಲ್ಲದೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಸಲ್ಮಾನ್ ಅವರ ಸಿನೆಮಾ ಮತ್ತು ವೈಯಕ್ತಿಕ ಜೀವನವು ಯಾವಾಗಲೂ ತಮ್ಮ ಪ್ರೀತಿಯ ಅಭಿಮಾನಿಗಳ ಪ್ರೀತಿಯಿಂದ ತುಂಬಿದೆ. ಆದರೆ ನಟನಿಗೆ ಮದುವೆಯಾಗದಿದ್ದರೂ, ಒಂದು ಮಗುವಿಗೆ ತಂದೆ ಆಗಬೇಕೆಂಬ ಬಯಕೆ ಇತ್ತಂತೆ. ಆದರೆ ಭಾರತೀಯ ಕಾನೂನು ಅದಕ್ಕೆ ಅನುಮತಿಸುವುದಿಲ್ಲ ಎಂದು ನಟ ಹೇಳಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಒಂದು ಹಂತದಲ್ಲಿ, ನಟ ಸಲ್ಮಾನ್ ಅವರನ್ನು ಅವರ ಪೋಷಕರ ಬಯಕೆ ಎಂದರೆ ಮದುವೆಯಾಗುವ ಬಯಕೆಯನ್ನು ಈಡೇರಿಸುವ ಬಗ್ಗೆ ಕೇಳಲಾಗಿತ್ತು.ಅದಕ್ಕೆ ಸಲ್ಮಾನ್ ಅವರು ಮದುವೆಯ ಬಗ್ಗೆ ಇನ್ನೂ ಖಚಿತವಾಗಿಲ್ಲದಿದ್ದರೂ, ಅವರು ನಿಜವಾಗಿಯೂ ತಂದೆಯಾಗುವ ಯೋಜನೆಗಳನ್ನು ಹೊಂದಿದ್ದರು ಎಂದು ನಟ ಹೇಳಿದರು.
ಇದನ್ನೂ ಓದಿ: ಎಲೆಕ್ಷನ್ ಇದ್ರೂ ಎಲ್ಲೆಡೆ ಅಪ್ಪು ಪೋಸ್ಟರ್, ಒಂದೂವರೆ ವರ್ಷವಾದ್ರೂ ಮುಗಿದಿಲ್ಲ 'ರಾಜಕುಮಾರ'ನ ಜಾತ್ರೆ!
"ನಾನು ತಂದೆ ಆಗಬೇಕೆಂದಿದ್ದು ನಮ್ಮ ಮನೆಗೆ ಒಬ್ಬಳು ಸೊಸೆಯನ್ನು ತರುವುದಕ್ಕೆ ಅಲ್ಲ, ಬದಲಾಗಿ ಒಂದು ಮಗುವಿಗೆ ತಂದೆಯಾಗುವುದಕ್ಕೆ ಅಂತ ನಟ ಹೇಳಿದರು. ಆದರೆ ಈಗಿನ ಭಾರತದ ಕಾನೂನಿನ ಪ್ರಕಾರ, ಇದು ಸಾಧ್ಯವಿಲ್ಲ. ಈಗ ನಾನು ಏನು ಮಾಡಬೇಕೆಂದು ನೋಡ್ತೀನಿ” ಅಂತ ನಟ ಹೇಳಿದರು.
ಅನೇಕ ಬಾರಿ ಪ್ರೀತಿಯಲ್ಲಿ ಬಿದ್ದರೂ, ಮದುವೆ ಮಾತ್ರ ಆಗ್ಲಿಲ್ಲ
ಸಲ್ಮಾನ್ ಅವರ ಸಂಬಂಧದ ಸ್ಥಿತಿ ಯಾವಾಗಲೂ ಸಾರ್ವಜನಿಕ ಆಸಕ್ತಿಯ ವಿಷಯವಾಗಿದೆ. 1994 ರಲ್ಲಿ ನಟಿ ಸಂಗೀತಾ ಬಿಜ್ಲಾನಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಾಗ ನಟ ಇನ್ನೇನು ಮದುವೆ ಮಾಡಿಕೊಳ್ಳುತ್ತಾರೆ ಅನ್ನೋವಷ್ಟರಲ್ಲಿ ಮದುವೆಗೆ ಒಂದು ತಿಂಗಳ ಮೊದಲು ಆ ಮದುವೆಯನ್ನು ರದ್ದುಮಾಡಿಕೊಂಡರು ಅಂತ ವರದಿಯಾಗಿತ್ತು. ನಂತರ ಸಹ ಅನೇಕ ನಟಿಯರ ಜೊತೆ ಸಲ್ಮಾನ್ ಪ್ರೀತಿ ಮಾಡಿದ್ದಾರೆ, ಆದರೆ ಮದುವೆಯಾಗಲಿಲ್ಲ.
ಬಾಡಿಗೆ ತಾಯ್ತನದ ಮೂಲಕ ತನ್ನ ಅವಳಿ ಮಕ್ಕಳನ್ನು ಸ್ವಾಗತಿಸಿದ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಉದಾಹರಣೆಯನ್ನು ನೀಡಿದಾಗ, ಸಲ್ಮಾನ್ ಅವರು ಮಕ್ಕಳನ್ನು ತುಂಬಾನೇ ಪ್ರೀತಿಸುವುದರಿಂದ ಈ ವಿಷಯದ ಬಗ್ಗೆ ಇನ್ನೂ ಯೋಚಿಸುತ್ತಿದ್ದಾರೆ ಅಂತ ಹೇಳಿದರು.
ಮಕ್ಕಳು ಅಂದ್ರೆ ಸಲ್ಮಾನ್ ಗೆ ತುಂಬಾ ಇಷ್ಟವಂತೆ
“ನಾನು ಮಕ್ಕಳನ್ನು ತುಂಬಾ ಇಷ್ಟಪಡುತ್ತೇನೆ, ಆದರೆ ಮಕ್ಕಳು ಬಂದಾಗ ಅವರ ತಾಯಿಯೂ ಬರುತ್ತಾರೆ. ತಾಯಿ ಆ ಮಗುವಿಗೆ ಒಳ್ಳೆಯದು, ಆದರೆ ನಾವು ಮನೆಯಲ್ಲಿ ಅನೇಕ ತಾಯಂದಿರನ್ನು ಈಗಾಗಲೇ ಹೊಂದಿದ್ದೇವೆ.
ಇದನ್ನೂ ಓದಿ: ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಲು ಬೆಕ್ಕಿನೊಂದಿಗೆ ತಯಾರಿ ನಡೆಸ್ತಿರೋ ಆಲಿಯಾ
ಆ ಮಗುವನ್ನು ನಮ್ಮ ಮನೆಯಲ್ಲಿರುವ ತಾಯಂದಿರು ನೋಡಿಕೊಳ್ಳುತ್ತಾರೆ. ಆದರೆ ನನ್ನ ಮಗುವಿನ ನಿಜವಾದ ತಾಯಿ ಎಂದರೆ ನನ್ನ ಹೆಂಡತಿಯೇ ಆಗುತ್ತಾಳೆ” ಅಂತ ನಟ ಹೇಳಿದರು.
ತನ್ನ ಪ್ರೀತಿಯ ಹುಡುಗಿ ಬಗ್ಗೆ ಮಾತನಾಡಿದ ಸಲ್ಮಾನ್, ತನ್ನನ್ನು ಜಾನ್ ಅಂತ ಕರೆಯಬೇಕಾದ ಹುಡುಗಿ ಈಗ ತನ್ನನ್ನು ಭಾಯ್ ಅಂತ ಕರೆಯಲು ಶುರು ಮಾಡಿದ್ದಾಳೆ ಅಂತ ಇತ್ತೀಚೆಗೆ ಬಿಡುಗಡೆಯಾದ ತನ್ನ ಚಿತ್ರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ನ ಶೀರ್ಷಿಕೆಯೊಂದಿಗೆ ತಮಾಷೆ ಮಾಡಿದರು. ಸಲ್ಮಾನ್ ಜೊತೆ ನಟಿ ಪೂಜಾ ಹೆಗ್ಡೆ ಅವರು ಇತ್ತೀಚೆಗೆ ಬಿಡುಗಡೆಯಾದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ