Salman Khan: ಅಭಿಮಾನಿಗಳಿಗೆ ಕಿಕ್ ಏರಿಸಿದ​ ಸಲ್ಮಾನ್ ಖಾನ್ ಸೈಕಲ್ ಸ್ಟಂಟ್: ವಿಡಿಯೋ ವೈರಲ್

ಈ ಹಿಂದೆ ಕಿಕ್ ಚಿತ್ರದಲ್ಲಿ ಸೈಕಲ್ ಮೂಲಕ ಟ್ರೈನ್ ದಾಟುವ ಸಲ್ಲು ಸೀನ್ ಭಾರೀ ವೈರಲ್ ಆಗಿತ್ತು. ಅದೇ ಮಾದರಿಯಲ್ಲಿ ಸೈಕಲ್​ಯಿಂದ ಇಳಿಯುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

zahir | news18
Updated:June 27, 2019, 7:13 PM IST
Salman Khan: ಅಭಿಮಾನಿಗಳಿಗೆ ಕಿಕ್ ಏರಿಸಿದ​ ಸಲ್ಮಾನ್ ಖಾನ್ ಸೈಕಲ್ ಸ್ಟಂಟ್: ವಿಡಿಯೋ ವೈರಲ್
Salman Khan
  • News18
  • Last Updated: June 27, 2019, 7:13 PM IST
  • Share this:
ಬಾಲಿವುಡ್​ನಲ್ಲಿ ಭಾಯಿಜಾನ್ ಸಲ್ಮಾನ್ ಖಾನ್ ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್ ಸೀನ್​ಗಳ ಮೂಲಕ ಬಾಕ್ಸಾಫೀಸ್​ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಅದರಲ್ಲೂ 'ಕಿಕ್'​ ಸಿನಿಮಾದಲ್ಲಿ ಭರ್ಜರಿ ಸಾಹಸಗಳಿಂದ ಸಿನಿಪ್ರಿಯರಿಗೆ ಒಂಚೂರು ಜಾಸ್ತಿನೇ ಕಿಕ್ಕೇರಿಸಿದ್ದರು. ಅದು ರೀಲ್ ಆದರೆ ಅದೇ ಮಾದರಿಯಲ್ಲಿ ಈಗ 'ದಬಂಗ್' ಖಾನ್ ರಿಯಲ್​ನಲ್ಲಿ ಸೈಕಲ್ ಸರ್ಕಸ್ ಮಾಡಿದ್ದಾರೆ.

ಮುಂಬೈನ ಟ್ರಾಫಿಕ್ ರಸ್ತೆಯಲ್ಲಿ ಸೈಕಲ್​ನಲ್ಲಿ ಸಂಚರಿಸುತ್ತಿರುವ ವಿಡಿಯೋವನ್ನು ಸಲ್ಲು ಮಿಯಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫಾಸ್ಟ್​ ಫಾರ್ವರ್ಡ್​ ಮಾದರಿಯಲ್ಲಿ ಚಿತ್ರೀಕರಿಸಲಾಗಿರುವ ಈ ವಿಡಿಯೋ ಝಲಕ್​ನಲ್ಲಿ ಸಣ್ಣ ಪುಟ್ಟ ಸಾಹಸಗಳನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ 'ಕಿಕ್' ಚಿತ್ರದಲ್ಲಿ ಸೈಕಲ್ ಮೂಲಕ ಟ್ರೈನ್ ದಾಟುವ ಸಲ್ಲು ಸೀನ್ ಭಾರೀ ವೈರಲ್ ಆಗಿತ್ತು. ಅದೇ ಮಾದರಿಯಲ್ಲಿ ಸೈಕಲ್​ಯಿಂದ ಇಳಿಯುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹಾಗೆಯೇ ಸೈಕಲ್​ನಲ್ಲಿ ಹೋಗುವಾಗ ಅಭಿಮಾನಿಗಳಿಗೂ ಹಸ್ತ ಚಾಚುವ ಮೂಲಕ ಫ್ಯಾನ್ಸ್​ ಫೇವರೇಟ್ ಎನಿಸಿಕೊಂಡಿದ್ದಾರೆ.

ಈ ಹಿಂದೆ ಕೂಡ ಸೈಕಲ್ ಸವಾರಿಯ ವಿಡಿಯೋಗಳನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದರು. ಇಂತಹ ವಿಡಿಯೋಗಳ ಮುಖಾಂತರ ಫಿಟ್ನೆಸ್ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹಿಂದೊಮ್ಮೆ ತಿಳಿಸಿದ್ದರು. ಅಷ್ಟೇ ಅಲ್ಲದೆ ವಿಶ್ವ ಪರಿಸರ ದಿನಾಚರಣೆಯ ದಿನ ತಮ್ಮದೇ ಎಲೆಕ್ಟ್ರಿಕ್‌ ಬ್ಯಾಟರಿ ಚಾಲಿತ ಸೈಕಲ್‌ ಬ್ರ್ಯಾಂಡ್‌ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರು.'ಭಾರತ್' ಚಿತ್ರದ ಸಕ್ಸಸ್​ ಖುಷಿಯಲ್ಲಿರುವ  ದಬಂಗ್​ ಖಾನ್​ರ ಸೈಕಲ್ ಸ್ಟಂಟ್ ವಿಡಿಯೋ ಭಾರೀ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಸಲ್ಲು ಫ್ಯಾನ್ಸ್​ ಮತ್ತೊಮ್ಮೆ 'ಕಿಕ್'​ ಸಿನಿಮಾದ ದೃಶ್ಯವನ್ನು ಕಿಕ್ಕೇರಿಸಿಕೊಳ್ಳುತ್ತಿದ್ದಾರೆ.

View this post on Instagram
 

Time flies and life passes by v quickly so learn how to appreciate it ..


A post shared by Salman Khan (@beingsalmankhan) on
First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ