HOME » NEWS » Entertainment » SALMAN KHAN OPENS ABOUT KISSING SCENE WITH DISHA PATANI IN RADHE MOVIE AE

ರಾಧೆ ಸಿನಿಮಾದಲ್ಲಿ ಚುಂಬನದ​ ದೃಶ್ಯ: ಕಿಸ್​ ದಿಶಾ ಜೊತೆ ಅಲ್ಲ ಟೇಪ್​ ಮೇಲೆ ಎಂದ ಸಲ್ಮಾನ್​ ಖಾನ್​

ಸಲ್ಮಾನ್​ ಅವರ ಸಿನಿಮಾಗಳಲ್ಲಿ ಇಂಟಿಮೇಟ್​ ದೃಶ್ಯಗಳಿರುತ್ತವೆ ಆದರೆ ಚುಂಬನದ ದೃಶ್ಯಗಳು ಇರುವುದಿಲ್ಲ. ರಾಧೆ ಟ್ರೇಲರ್​ ರಿಲೀಸ್​ ಆದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಇದರದ್ದೇ ಚರ್ಚೆ. ಇದಕ್ಕೆ ಈಗ ಸಲ್ಮಾನ್​ ಖಾನ್​ ತೆರೆ ಎಳೆದಿದ್ದಾರೆ.

Anitha E | news18-kannada
Updated:May 3, 2021, 8:23 AM IST
ರಾಧೆ ಸಿನಿಮಾದಲ್ಲಿ ಚುಂಬನದ​ ದೃಶ್ಯ: ಕಿಸ್​ ದಿಶಾ ಜೊತೆ ಅಲ್ಲ ಟೇಪ್​ ಮೇಲೆ ಎಂದ ಸಲ್ಮಾನ್​ ಖಾನ್​
ಸಲ್ಮಾನ್ ಖಾನ್ ಅಭಿನಯದ ರಾಧೆ
  • Share this:
ಪ್ರಭುದೇವ ನಿರ್ದೇಶನದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾ ಇನ್ನೇನು ರಿಲೀಸ್​ ಆಗಲಿದೆ. ಸಲ್ಮಾನ್ ಖಾನ್ ಹಾಗೂ ದಿಶಾ ಪಟಾಣಿ ಅಭಿನಯದ ಈ ಚಿತ್ರದ ಟ್ರೇಲರ್​ ಇತ್ತೀಚೆಗೆಷ್ಟೆ ಬಿಡುಗಡೆಯಾಗಿದೆ., ಇನ್ನು ಸಲ್ಮಾನ್  ಹಾಗೂ ದಿಶಾ ಪಟಾಣಿ ಅವರ ಚುಂಬನದ ದೃಶ್ಯದಿಂದಾಗಿ ಟ್ರೇಲರ್​ ಸಖತ್ ಸದ್ದು ಮಾಡುತ್ತಿದೆ. ದಿನಕ್ಕೊಂದು ಸುದ್ದಿ ಸಿನಿಮಾದ ಸೆಟ್​ನಿಂದ ಹೊರ ಬೀಳುತ್ತಿದೆ. ಬಾಲಿವುಡ್​ ಬ್ಯಾಡ್​ ಬಾಯ್​ ನೋ ಕಿಸ್ ನೀತಿ ಕುರಿತಾದ ವಿಷಯ ಇನ್ನೂ ಮುಕ್ತಾಯವಾಗಿಲ್ಲವೆಂಬುದು ಸ್ಪಷ್ಟವಾಗಿದೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ರಾಧೆ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಈ ಸಿನಿಮಾ ಸಲ್ಮಾನ್ ಖಾನ್ ಅವರ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾವಾಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಬ್ಬ ಮಾಡಿದ್ದರು. ಇದರ ಜೊತೆಗೆ ಸಲ್ಮಾನ್​ ಖಾನ್​ ರಾಧೆ ಸಿನಿಮಾದಲ್ಲಿ ಲಿಪ್​ ಕಿಸ್​ ಮಾಡಿದ್ದು, ಇದು ಚಿತ್ರ ರಸಿಕರು ಹಾಗೂ ಸಲ್ಮಾನ್​ ಅಭಿಮಾನಿಗಳ ಹುಬ್ಬೇರುವಂತೆ ಮಾಡಿತ್ತು.

ಸಲ್ಮಾನ್​ ಅವರ ಸಿನಿಮಾಗಳಲ್ಲಿ ಇಂಟಿಮೇಟ್​ ದೃಶ್ಯಗಳಿರುತ್ತವೆ ಆದರೆ ಚುಂಬನದ ದೃಶ್ಯಗಳು ಇರುವುದಿಲ್ಲ. ರಾಧೆ ಟ್ರೇಲರ್​ ರಿಲೀಸ್​ ಆದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಇದರದ್ದೇ ಚರ್ಚೆ.

When Arbaaz Khan revealed why Salman Khan never kissed onscreen
ಸಲ್ಮಾನ್ ಖಾನ್ (Photo: Google)


'ಮೋಸ್ಟ್ ವಾಂಟೆಡ್ ಭಾಯ್ ರಾಧೆ ಬೆಳ್ಳಿತೆರೆ ಮೇಲಿನ ನೋ ಕಿಸ್​ ಶಪಥವನ್ನು ಮುರಿದು ಹಾಕಿದ್ದಾರೆಯೇ?' ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಆಶ್ಚರ್ಯಪಟ್ಟಿದ್ದರು. ಆದರೆ, ಸಲ್ಮಾನ್ ಅವರ ಮುತ್ತಿನ ಶಪಥವನ್ನು ಗಂಭೀರವಾಗಿ ಪರಿಗಣಿಸಿರುವ ಅಭಿಮಾನಿಗಳ ಮತ್ತೊಂದು ವರ್ಗ ಸಲ್ಮಾನ್ ಖಾನ್ ಅವರ ಪರ ನಿಂತಿದೆ.
ಸಲ್ಮಾನ್ ಖಾನ್ ಇಂದಿಗೂ ತಮ್ಮ ಮುತ್ತಿನ ಶಪಥಕ್ಕೆ ಬದ್ಧರಾಗಿದ್ದಾರೆ ಎಂದು ಹೇಳುತ್ತಿದ್ದಾರೆ ಬ್ಯಾಡ್​ ಅಭಿಮಾನಿಗಳು. ಇದಕ್ಕೆ ಅನುಗುಣವಾಗಿ ಲಿಪ್ ಕಿಸ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ ಎಂದಿದ್ದಾರೆ. ಏಕೆಂದರೆ 'ಲಿಪ್ ಕಿಸ್ ದೃಶ್ಯದಲ್ಲಿ ದಿಶಾ ಪಟಾನಿ ಅವರ ಬಾಯಿಯನ್ನು ಟೇಪ್‌ನಿಂದ ಮುಚ್ಚಲಾಗಿದೆ. ಟೇಪ್ ಮೇಲೆ ಸಲ್ಮಾನ್​ ಖಾನ್​ ಮುತ್ತಿಟ್ಟಿದ್ದಾರೆ. ಆದ್ದರಿಂದ ಭಾಯ್ ಇನ್ನೂ ತಮ್ಮ ಶಪಥ ಕಾಪಾಡಿಕೊಂಡಿದ್ದಾರೆ' ಎನ್ನುತ್ತಿದ್ದಾರೆ ಫ್ಯಾನ್ಸ್​.

ಇದನ್ನೂ ಓದಿ: R Madhavan: ಪತ್ನಿಯ ಮುಂದೆ ನನ್ನ ಜೀವನ ಅಪೂರ್ಣ ಎನಿಸುತ್ತಿದೆ: ನಟ ಮಾಧವನ್

ದಿಶಾ ಪಟಾನಿ ಬಾಯಿಗೆ ಟೇಪ್​ ಹಾಕಿರುವ ಸುದ್ದಿ ವೈರಲ್​ ಆಗುತ್ತಿದೆ. ಈ ಕುರಿತಾಗಿ ಕಮೆಂಟ್​ ಮಾಡಿರುವ ಟ್ವೀಟಿಗರೊಬ್ಬರು 'ಟೇಪ್ ಹಾಕಿಕೊಂಡು ನೀಡಿದ ಮೊದಲ ತೆರೆಯ ಮೇಲಿನ ದೃಶ್ಯ' ಎಂದಿದ್ದಾರೆ. 'ದಿಶಾ ಪಟಾನಿ ಸಲ್ಮಾನ್ ಕಾರಣಕ್ಕೆ ತಮ್ಮ ತುಟಿಗೆ ಟೇಪ್ ಹಾಕಿಕೊಂಡಿದ್ದಾರೆ' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
RADHE, SALMAN KHAN, ZEE5, DISHA PATANI, SOCIAL MEDIA, ರಾಧೆ, ಸಲ್ಮಾನ್ ಖಾನ್, ಝೀ5, ದಿಶಾ ಪಠಾನಿ, ಸಾಮಾಜಿಕ ಮಾಧ್ಯಮ
ರಾಧೆ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ದಿಶಾ ಪಟಾಣಿ


ಕಿಸ್ ಅಥವಾ ನೋ ಕಿಸ್ ಏನೇ ಇರಲಿ ಟ್ರೇ ಲರ್ ನೋಡಿದ ಜನರು ಕೆಮಿಸ್ಟ್ರಿ, ಬಯಾಲಜಿ ಎನ್ನುತ್ತಾ ಮೀಮ್ಸ್ ಸೃಷ್ಟಿಸುತ್ತಿದ್ದಾರೆ. ಮತ್ತೊಬ್ಬ ಬಳಕೆದಾರರು ರಾಧೆ ಟ್ರೇಲರ್ ನೋಡಿದ ನಂತರ ದಿಶಾ ಪಟಾನಿ ಇನ್ನೊಬ್ಬ ನಟಿಯ ಜತೆ ಕುಸ್ತಿ ಆಡಿದಂತೆ ಇರುವ ಮೀಮ್ಸ್ ಕ್ರಿಯೇಟ್ ಮಾಡಿದ್ದಾರೆ. ಮತ್ತೊಬ್ಬರು 'ಇದ್ಯಾವ ನಶೆ?' ಎಂದಿದ್ದಾರೆ.

ಇದನ್ನೂ ಓದಿ: John Abraham: ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಎನ್‌ಜಿಒಗೆ ನೀಡಿದ ಜಾನ್ ಅಬ್ರಹಾಂ: ಕೊರೋನಾ ಹತೋಟಿಗೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ನಟ

ಇದರ ಬೆನ್ನಲ್ಲೇ ಸಿನಿಮಾ ಮೇಕಿಂಗ್​ ವಿಡಿಯೋ ರಿಲೀಸ್​ ಆಗಿದ್ದು, ಅದರಲ್ಲಿ ಖುದ್ದು ಸಲ್ಮಾನ್​ ಅವರೇ ಈ ಚಿತ್ರದಲ್ಲಿನ ಚುಂಬನ್ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ರೊಮ್ಯಾನ್ಸ್​ ಹಾಗೂ ಕಿಸ್​ ಇದೆ. ಆದರೆ ಈ ಕಿಸ್​ ದಿಶಾ ಜೊತೆ ಅಲ್ಲ ಟೇಪ್​ ಮೇಲೆ ಮಾಡಲಾಗಿದೆ ಎಂದು ಸಲ್ಮಾನ್​ ಖಾನ್​ ಸ್ಪಷ್ಟಪಡಿಸಿದ್ದಾರೆ. (ಕಿಸ್​ ಬಗ್ಗೆ ಸಲ್ಮಾನ್ ಖಾನ್​ ಮಾತನಾಡಿದ್ದು ವಿಡಿಯೋದಲ್ಲಿ 1:47ರಿಂದ 1:55ರವರೆಗೆ)



ಪ್ರಭುದೇವ ಅವರ ನಿರ್ದೇಶನವಿರುವ ಈ ಸಿನಿಮಾದಲ್ಲಿ ಜಾಕಿ ಶ್ರಾಫ್ ಮತ್ತು ರಣದೀಪ್ ಹೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Published by: Anitha E
First published: May 3, 2021, 8:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories