Salman Khan: ಸಲ್ಮಾನ್ ಖಾನ್ ಈಗ ಯಾರ ಭಾಯ್, ಯಾರ ಜಾನ್ ?

ಬಾಲಿವುಡ್ ನಾಯಕ ನಟ ಸಲ್ಮಾನ್ ಖಾನ್ ಬಾಕ್ಸ್ ಆಫೀಸ್ ಸುಲ್ತಾನ್ ಅಂತ ಗೊತ್ತೇ ಇದೆ. ಈ ನಾಯಕನ ಸಿನಿಮಾಗಳು ಸೋತಿರೋದು ಕಡಿಮೇನೆ. ಇಂತಹ ನಾಯಕನ ಮತ್ತೊಂದು ಸಿನಿಮಾದ ಟೈಟಲ್ ಈಗ ಅನೌನ್ಸ್ ಆಗಿದೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

  • Share this:
ಬಾಲಿವುಡ್ ನಾಯಕ ನಟ ಸಲ್ಮಾನ್ ಖಾನ್ (Salman Khan) ಬಾಕ್ಸ್ ಆಫೀಸ್ ಸುಲ್ತಾನ್ (Box Office Sultan) ಅಂತ ಗೊತ್ತೇ ಇದೆ. ಈ ನಾಯಕನ ಸಿನಿಮಾಗಳು ಸೋತಿರೋದು ಕಡಿಮೇನೆ. ಇಂತಹ ನಾಯಕನ ಮತ್ತೊಂದು ಸಿನಿಮಾದ ಟೈಟಲ್ ಈಗ ಅನೌನ್ಸ್ (Title Announce) ಆಗಿದೆ. ಚಿತ್ರದ ಈ ಟೈಟಲ್ ಅನೌನ್ಸ್​ಮೆಂಟ್​ಗೆ  ಮಾಡಿರೋ ಒಂದು ಟೀಸರ್ ಕೂಡ ಅಷ್ಟೇ ವಿಶೇಷ ಅನಿಸುತ್ತದೆ. ಲಾಂಗ್​ ಹೇರ್ ಬಿಟ್ಟುಕೊಂಡು ಸಲ್ಮಾನ್ ಖಾನ್  ಸಖತ್ ವಾಕ್ ಅನ್ನೇ ಈ ಒಂದು ಟೀಸರ್ ನಲ್ಲಿ ಮಾಡಿದ್ದಾರೆ. ಇದಕ್ಕೂ ಹೆಚ್ಚಾಗಿ ಈ ಚಿತ್ರದ ಟೈಟಲ್ ಕೂಡ ಮಜವಾಗಿಯೇ ಇದೆ. ಇದರ ಸುತ್ತ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಸಲ್ಮಾನ್ ಖಾನ್ ಅಭಿನಯದ ಸಿನಿಮಾಗಳು ಬಂದು ಬಹಳ ದಿನಗಳೇ ಕಳೆದಿದೆ. ಆದರೆ, ಈಗ ಇದೇ ಸಲ್ಮಾನ್ ಖಾನ್ ಅಭಿನಯದ Kisi ka Bhai Kisi ki Jaan ಸಿನಿಮಾದ ಟೈಟಲ್ ಈಗ ಅನೌನ್ಸ್ ಆಗಿದೆ. ಸಲ್ಮಾನ್ ಖಾನ್ ನಿರ್ಮಾಣದ ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರವನ್ನ ನಿರ್ಮಿಸಲಾಗುತ್ತಿದೆ. ವಿಶೇಷವಾಗಿ ಈ ಚಿತ್ರಕ್ಕೆ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಸಂಗೀತ ಕೊಡ್ತಿದ್ದಾರೆ.

ಚಿತ್ರದ ಪೋಸ್ಟರ್


ಸಲ್ಮಾನ್ ಖಾನ್ ಚಿತ್ರಕ್ಕೆ ಕೆಜಿಎಫ್ ರವಿ ಬಸ್ರೂರು ಸಂಗೀತ ನಿರ್ದೇಶನ
ರವಿ ಬಸ್ರೂರು ಸಂಗೀತ ನಿರ್ದೇಶನದ ಅಂದ್ರೆ ಕೇಳಬೇಕೆ? ಅವರ ಸಂಗೀತದ ಕೆಜಿಎಫ್ ಸಿನಿಮಾ ಎಲ್ಲೆಡೆ ಹೋಗಿದೆ. ರವಿ ಬಸ್ರೂರು ಸಂಗೀತವನ್ನ ಮೆಚ್ಚುವಂತೆನೂ ಮಾಡಿದೆ. ಅಂತಹ ರವಿ ಬಸ್ರೂರು ಈಗ ಸಲ್ಮಾನ್ ಖಾನ್ ನಿರ್ಮಾಣದ Kisi ka Bhai Kisi ki Jaan ಚಿತ್ರಕ್ಕೆ ಸಂಗೀತ ಮಾಡ್ತಿದ್ದಾರೆ.

ಸಲ್ಮಾನ್ ಖಾನ್


ಸಲ್ಮಾನ್ ಖಾನ್ ಚಿತ್ರದಲ್ಲಿ ದಕ್ಷಿಣದ ಪ್ರತಿಭೆಗಳದ್ದೇ ಕಾರುಬಾರು
ಇದಂತು ಸತ್ಯ ಬಿಡಿ. ದಕ್ಷಿಣದ ಕಥೆಗಳನ್ನೆ ಅತಿ ಹೆಚ್ಚು ಬಾಲಿವುಡ್ ಮಂದಿ ಈಗ ಇಷ್ಟಪಡ್ತಾಯಿದ್ದಾರೆ. ಅದರಂತೆ  ಸಲ್ಮಾನ್ ಖಾನ್ ಒಂದು ಹೆಜ್ಜೆ ಮುಂದೆ ಹೋದಂತಿದೆ. ತಮ್ಮ ಈ ಚಿತ್ರದಲ್ಲಿ  ದಕ್ಷಿಣದ ಹೆಸರಾಂತ ಕಲಾವಿದರನ್ನೇ ಹಾಕಿಕೊಂಡಿದ್ದಾರೆ. ಆ ಲೆಕ್ಕದಲ್ಲಿ ನಾಯಕ ನಟ ವೆಂಕಟೇಶ್, ವಿಲನ್ ಪಾತ್ರಧಾರಿ ಜಗಪತಿ ಬಾಬು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: Ragini Prajwal: ಟಿಪ್ಪು ಸುಲ್ತಾನ್ ಕುರಿತ ಸಿನಿಮಾದಲ್ಲಿ ರಾಗಿಣಿ! ಪಾತ್ರ ಏನು?

ಸಲ್ಮಾನ್ ಖಾನ್​ಗೆ ಪೂಜಾ ಹೆಗಡೆ ಜೋಡಿ-ಮೋಡಿ
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಸಲ್ಮಾನ್ ಖಾನ್​ಗೆ ಪೂಜಾ ಹೆಗಡೆ ಜೋಡಿ ಆಗಿದ್ದಾರೆ. ಇಲ್ಲಿ ಜಾನ್ ಪೂಜಾ ಹೆಗಡೆ ಅಂತ ಗೆಸ್ ಮಾಡಬಹುದು. ಆದರೆ ಸಲ್ಮಾನ್ ಇಲ್ಲಿ ಯಾರ್ ಭಾಯ್ ಅನ್ನೋದು ಸದ್ಯಕ್ಕೆ ರಿವೀಲ್ ಆಗಿಲ್ಲ.ಆದರೆ, ಟೈಟಲ್ ನಲ್ಲಿಯೇ ಕಥೆಯ ಎಳೆಯನ್ನ ಬಿಟ್ಟುಕೊಟ್ಟಂತಿದೆ.

ಈ ಚಿತ್ರಕ್ಕೆ ಈ ಮೊದಲು ಬೇರೆ ಶೀರ್ಷಿಕೆ ಇತ್ತು, ಅದ್ಯಾವುದು ಗೊತ್ತೇ ?
ಸಲ್ಮಾನ್ ಅಭಿನಯದ ಈ ಚಿತ್ರಕ್ಕೆ ಈ ಮೊದಲು ಕಭಿ ಈದ್ ಕಭಿ ದಿವಾಲಿ (Kabhi Eid Kabhi Diwali) ಅಂತಲೇ  ಶೀರ್ಷಿಕೆ ಇತ್ತು. ಇದೇ ಶೀರ್ಷಿಕೆಯಲ್ಲಿಯೇ ಚಿತ್ರ ಅನೌನ್ಸ್ ಆಗಿತ್ತು. ಆದರೆ, ಈಗ ಈ ಟೈಟಲ್ ಬದಲಾಗಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್  ಅಂತಲೇ ಇಡಲಾಗಿದೆ.

ಇದನ್ನೂ ಓದಿ: Puneeth Rajkumar: ಗುರುವಾರವೇ ಲಕ್ಕಿಮ್ಯಾನ್ ದರ್ಶನ; ಟಿಕೆಟ್​ಗೆ ಭರ್ಜರಿ ಡಿಮ್ಯಾಂಡ್!

ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಡೈರೆಕ್ಟರ್ ಯಾರು ?
ಸಲ್ಮಾನ್ ಖಾನ್ ತಮ್ಮ ಈ ಚಿತ್ರಕ್ಕೆ ಒಳ್ಳೆ ಟೀಮ್ ಆಯ್ಕೆ ಮಾಡಿದ್ದು, ಫರ್ಹಾದ್ ಸಾಮ್ಜಿ (Farhad Samji) ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.  ಸಾಜಿದ್ ನಾಡಿಯಾಡ್ವಾಲಾ ಕಥೆ ಬರೆದಿದ್ದಾರೆ. ವಿ.ಮಣಿಕಂಠನ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.  ಉಳಿದಂತೆ ಚಿತ್ರ ಡಿಸೆಂಬರ್-30 ಕ್ಕೆ ರಿಲೀಸ್ ಆಗುತ್ತಿದ್ದು ಸಿನಿ ಪ್ರೇಮಿಗಳಲ್ಲಿ ಈಗಲೇ ಒಂದು ಕುತೂಹಲ ಮೂಡಿಸಿದೆ.
First published: