Munna Badnaam Huva: ಮುನ್ನಿ ಆಯ್ತು ಈಗ ಬದ್ನಾಮ್​ ಆದ ಮುನ್ನ: ಐಟಂ ಬಾಯ್​ ಸಲ್ಮಾನ್​ ಖಾನ್​..!

Munna Badnaam Huva: ದಬಾಂಗ್​ 3 ಚಿತ್ರದ ಒಂದೊಂದೇ ಹಾಡುಗಳು ರಿಲೀಸ್​ ಆಗುತ್ತಿದ್ದಂತೆಯೇ, ಅವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೆ ಮುನ್ನ ಬದ್ನಾಮ್​ ಹುವ... ಹಾಡು ಬಿಡುಗಡೆಯಾಗಿದ್ದು, ಇದು ಟ್ರೆಂಡ್​ ಸೆಟ್ ಮಾಡುತ್ತಿದೆ.

Anitha E | news18-kannada
Updated:December 4, 2019, 1:28 PM IST
Munna Badnaam Huva: ಮುನ್ನಿ ಆಯ್ತು ಈಗ ಬದ್ನಾಮ್​ ಆದ ಮುನ್ನ: ಐಟಂ ಬಾಯ್​ ಸಲ್ಮಾನ್​ ಖಾನ್​..!
ದಬಾಂಗ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​
  • Share this:
ಸಲ್ಮಾನ್​ ಖಾನ್​ ತಮ್ಮ ಬಹು ನಿರೀಕ್ಷಿತ ಸಿನಿಮಾ 'ದಬಾಂಗ್​ 3'ಯಿಂದಾಗಿ ಸಖತ್​ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಸಲ್ಲು ಮಾಡಿರುವ ಡಾನ್ಸ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ. ತಮಮ್ ವಯಸ್ಸನ್ನೂ ಲೆಕ್ಕಿಸದೆ ಸಲ್ಮಾನ್​ ಈ ಚಿತ್ರಕ್ಕಾಗಿ ತುಂಬಾ ಶ್ರಮ ಪಟ್ಟಿದ್ದಾರೆ.

'ದಬಾಂಗ್​ 3' ಚಿತ್ರದ ಒಂದೊಂದೇ ಹಾಡುಗಳು ರಿಲೀಸ್​ ಆಗುತ್ತಿದ್ದಂತೆಯೇ, ಅವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೆ 'ಮುನ್ನ ಬದ್ನಾಮ್​ ಹುವ...' ಹಾಡು ಬಿಡುಗಡೆಯಾಗಿದ್ದು, ಇದು ಟ್ರೆಂಡ್​ ಸೆಟ್ ಮಾಡುತ್ತಿದೆ.'ಮುನ್ನ ಬದ್ನಾಮ್​ ಹುವ' ಹಾಡಿನಲ್ಲಿ ಸಲ್ಲು ಐಟಂ ಬಾಯ್​ ಆಗಿ ಕಾಣಿಸಿಕೊಂಡಿದ್ದು, ನಾಯಕ ನಟರೂ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸಾಬೀತು ಮಾಡಿದ್ದಾರೆ. ಸದ್ಯ ಈ ಹಾಡು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ. ಈ ಹಾಡಿನಲ್ಲಿ ಸಲ್ಮಾನ್​ ಮಾಡಿರುವ ಬೆಲ್ಟ್​ ಸ್ಟೆಪ್​ ಸಖತ್​ ಕಿಕ್​ ಕೊಡುವಂತಿದೆ.

ಇದನ್ನೂ ಓದಿ: Prabhas: ಧೂಮ್​ ಸರಣಿ ಸಿನಿಮಾದಲ್ಲಿ ಪ್ರಭಾಸ್​: ಬಾಲಿವುಡ್​ನ ಖ್ಯಾತ ನಿರ್ಮಾಪಕನಿಂದ ಡಾರ್ಲಿಂಗ್​ಗೆ ಸಿಕ್ಕಿದೆ ನೂರು ಕೋಟಿ ಬಂಪರ್​ ಆಫರ್..!

ಈ ಹಿಂದೆ 'ದಬಾಂಗ್​' ಸಿನಿಮಾ ಮೊದಲ ಬಾರಿಗೆ ಬಂದಾಗ ಅದರಲ್ಲಿ 'ಮಿನ್ನಿ ಬದ್ನಾಮ್​ ಹುಯಿ' ಅನ್ನೋ ಐಟಂ ಟ್ರ್ಯಾಕ್​ಗೆ ಸಲ್ಮಾನ್​ ಅತ್ತಿಗೆಯಾಗಿದ್ದ ಮಲೈಕಾ ಸೊಂಟ ಬಳುಕಿಸಿದ್ದರು. ಆಗಿನ ಕಾಲಕ್ಕೆ ಈ ಹಾಡು ಸೂಪರ್​ ಹಿಟ್​ ಆಗಿತ್ತು. ಆಗ ಎಲ್ಲಿನೋಡಿದರೂ ಮುನ್ನಿಯೇ ...

ಈಗ ಇದೇ ಹಾಡಿನ ಟ್ಯೂನ್ ಕೊಂಚ ಬದಲಾಯಿಸಿದ್ದು, ಸಾಹಿತ್ಯ ಬೇರೆ ಬರೆದು ಈ ಹಾಡಿಗೆ ಮೇಲ್​ ವರ್ಷನ್​ ಟಚ್​ ಕೊಡಲಾಗಿದೆ. ಈ ಹಾಡು ಸಹ ಹಳೆಯ ಹಾಡಿನಂತೆ ಸಿನಿ ಪ್ರಿಯರಿಗೆ ಇಷ್ಟವಾಗುತ್ತಿದೆ.

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published: December 4, 2019, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading