HOME » NEWS » Entertainment » SALMAN KHAN MOVIE DABANGG 3 TROLLS IN TWITTER BOYCOTT DABANGG 3

Dabangg 3: ಮತ್ತೊಮ್ಮೆ ಸಂಕಟದಲ್ಲಿ ಸಲ್ಮಾನ್​ ಖಾನ್​: ವಿವಾದದಲ್ಲಿ ದಬಾಂಗ್ 3!

Dabangg 3 Controversy: ರಿಲೀಸ್​ಗೂ ಮುನ್ನವೇ ದಬಾಂಗ್ 3 ವಿವಾದಕ್ಕೀಡಾಗಿದೆ. ಹೌದು, ಚಿತ್ರದ ಟೈಟಲ್​ ಟ್ರ್ಯಾಕ್​ ಹುಡ್ ಹುಡ್ ದಬಾಂಗ್... ಸಾಂಗ್​ನಲ್ಲಿ ಹಿಂದೂ ಧರ್ಮದ ದೇವತೆಗಳನ್ನು ಹಿಯಾಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Anitha E | news18-kannada
Updated:November 30, 2019, 8:40 AM IST
Dabangg 3: ಮತ್ತೊಮ್ಮೆ ಸಂಕಟದಲ್ಲಿ ಸಲ್ಮಾನ್​ ಖಾನ್​: ವಿವಾದದಲ್ಲಿ ದಬಾಂಗ್ 3!
ದಬಂಗ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​
  • Share this:
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ಕನ್ನಡದ ಪೈಲ್ವಾನ್ ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ದಬಾಂಗ್ 3'. ಸೂಪರ್​ ಹಿಟ್​ ಸರಣಿಯ ಈ ಮೂರನೇ ಚಿತ್ರಕ್ಕೆ ಡ್ಯಾನ್ಸ್ ಕಿಂಗ್ ಪ್ರಭುದೇವಾ ಆ್ಯಕ್ಷನ್ ಕಟ್ ಹೇಳಿದ್ದು, ಇದೇ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ.

ಆದರೆ ರಿಲೀಸ್​ಗೂ ಮುನ್ನವೇ 'ದಬಾಂಗ್ 3' ವಿವಾದಕ್ಕೀಡಾಗಿದೆ. ಹೌದು, ಚಿತ್ರದ ಟೈಟಲ್​ ಟ್ರ್ಯಾಕ್​ 'ಹುಡ್ ಹುಡ್ ದಬಾಂಗ್...' ಸಾಂಗ್​ನಲ್ಲಿ ಹಿಂದೂ ಧರ್ಮದ ದೇವತೆಗಳನ್ನು ಹಿಯಾಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

#BoycottDabangg3ಅಷ್ಟೇಅಲ್ಲದೆ ನಾಯಕನ ಹಿಂದೆ ಹೆಜ್ಜೆ ಹಾಕುವ ನೃತ್ಯಗಾರರಿಗೆ ಸಾಧು ಸಂತರ ವೇಷ ಹಾಕಿ ನಾಯಕನ ಹಿಂದೆ ಕುಣಿಸಲಾಗಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.ಇದೇ ಕಾರಣಕ್ಕೆ 'ದಬಾಂಗ್ 3' ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಬಾರದು ಎಂದು ಮನವಿ ಮಾಡಿದೆ. ಜೊತೆಗೆ ಬಾಯ್ಕಾಟ್ ದಬಾಂಗ್ ಅನ್ನೋ ಹ್ಯಾಶ್​ಟ್ಯಾಗ್​ ಮೂಲಕ ಟ್ವಿಟರ್​ನಲ್ಲಿ ಟ್ವೀಟಿಗರು, ಟ್ರೆಂಡ್​ ಮಾಡಿದ್ದಾರೆ.

ಇದನ್ನೂ ಓದಿ: Dabangg 3: ಕಿಚ್ಚ-ಸಲ್ಲು ಅಭಿನಯದ ದಬಾಂಗ್​ 3 ಸೂಪರ್ ಫ್ಲಾಪ್​ ಆಗಲಿದೆ ಎನ್ನುತ್ತಿದ್ದಾರೆ ಈ ನಟ..!

ಆದರೆ ಸಲ್ಮಾನ್​ ಅಭಿಮಾನಿಗಳೂ 'ದಬಾಂಗ್​ 3' ಚಿತ್ರಕ್ಕೆ ಬೆಂಬಲ ನೀಡುವಲ್ಲಿ ಹಿಂದೆ ಬಿದ್ದಿಲ್ಲ.

During Raees time no SALMAN fan stood with SRKians but we r standing with SALMAN becoz we know what pain we SRKians went through when BHAKTS protested against Raees ಈ ಸಿನಿಮಾದ ಚಿತ್ರೀಕರಣ ಆರಂಭವಾದ ದಿನಗಳಲ್ಲೂ ಶಿವಲಿಂಗವನ್ನು ಅವಮಾನಿಸಿದ ಕಾರಣಕ್ಕೆ ವಿವಾದಕ್ಕೀಡಾಗಿತ್ತು. ಆಗಲೂ ಕೆಲ ಸಮಯ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು.

Bikini Photo: ಬಿಕಿನಿ ತೊಟ್ಟು ಬೆಂಕಿ ಹೊತ್ತಿಸಿದ ದಿಶಾ: ಪರೀಕ್ಷೆ ಇದೆ ಅಕ್ಕ ನನಗೆ ಓದಲು ಬಿಡು ಎಂದ ಅಭಿಮಾನಿ..!


  

 
First published: November 30, 2019, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories