Salman Khan: ದಕ್ಷಿಣ ಭಾರತದ ನಿರ್ದೇಶಕನತ್ತ ಸಲ್ಮಾನ್​ ಖಾನ್ ಚಿತ್ತ

Salman Khan: ಸದ್ಯ ಮತ್ತೆ ಸಲ್ಮಾನ್ ಖಾನ್​​ ಸೋಲಿನ ಸುಳಿಗೆ ಸಿಲುಕಿದ್ದಾರೆ. ಇತ್ತೀಚಿನ ಅವರ ಯಾವ ಸಿನಿಮಾ ಕೂಡ ಮೋಡಿ ಮಾಡುತ್ತಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿಲ್ಲ. ಅದರಲ್ಲೂ ಕಳೆದ ವರ್ಷ ಬಿಡುಗಡೆಯಾದ ‘ದಬಾಂಗ್-3‘ ಸಿನಿಮಾ ನಿರೀಕ್ಷೆ ಮೀರಿದಷ್ಟು ಪ್ರದರ್ಶನ ಕಾಣಲಿಲ್ಲ.

news18-kannada
Updated:May 22, 2020, 8:16 PM IST
Salman Khan: ದಕ್ಷಿಣ ಭಾರತದ ನಿರ್ದೇಶಕನತ್ತ ಸಲ್ಮಾನ್​ ಖಾನ್ ಚಿತ್ತ
ಸಲ್ಮಾನ್​ ಖಾನ್
  • Share this:
ಬಾಲಿವುಡ್ ಮನಿಮಿಷನ್‌‌ ಸಲ್ಮಾನ್ ಖಾನ್ ಸತತ ಸೋಲುಗಳನ್ನ ಕಾಣುತ್ತಾ, ಇನ್ನೇನು ಕೆರಿಯರ್ ಮುಗಿದೇ ಹೋಯಿತು ಎಂಬ ಸಂದರ್ಭದಲ್ಲಿ  ಅವರಿಗೆ ಬ್ರೇಕ್ ಕೊಟ್ಟಿದ್ದು ಸೌತ್ ಇಂಡಿಯಾನ್ ಡೈರೆಕ್ಟರ್ ಪ್ರಭುದೇವ.  ‘ವಾಂಟೆಡ್‘ ಸಿನಿಮಾ‌ ‌ಮೂಲಕ ಸಲ್ಮಾನ್ ಗೆ ಒಂದು ಬಿಗ್ ಬ್ರೇಕ್ ಸಿಕ್ಕಿತು. ತೆಲುಗಿನ ಪೋಕಿರಿಯ ಈ ಹಿಂದಿ ರಿಮೇಕ್ ಸಿನಿಮಾ ರಿಲೀಸ್ ಆದ ಮೇಲೆ ಸಲ್ಮಾನ್ ಮತ್ತೆ ಹಿಂದಿರುಗಿ‌ ನೋಡಲೇ ಇಲ್ಲ. ಸತತ 9 ವರ್ಷಗಳ ಕಾಲ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡುಕೊಂಡರು. ಬಾಲಿವುಡ್ ಬಾಕ್ಸ್​​ ಆಫೀಸ್ ಸುಲ್ತಾನ್ ಎಂದು ಕರೆಸಿಕೊಂಡರು.

ಸದ್ಯ ಮತ್ತೆ ಸಲ್ಮಾನ್ ಖಾನ್​​ ಸೋಲಿನ ಸುಳಿಗೆ ಸಿಲುಕಿದ್ದಾರೆ. ಇತ್ತೀಚಿನ ಅವರ ಯಾವ ಸಿನಿಮಾ ಕೂಡ ಮೋಡಿ ಮಾಡುತ್ತಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿಲ್ಲ. ಅದರಲ್ಲೂ ಕಳೆದ ವರ್ಷ ಬಿಡುಗಡೆಯಾದ ‘ದಬಾಂಗ್-3‘ ಸಿನಿಮಾ ನಿರೀಕ್ಷೆ ಮೀರಿದಷ್ಟು ಪ್ರದರ್ಶನ ಕಾಣಲಿಲ್ಲ.

ಈ ಎಲ್ಲಾ ಕಾರಣಗಳಿಂದ ಸಲ್ಲುಮಿಯಾಗೆ ಅವಶ್ಯಕ ಗೆಲುವೊಂದು ಬೇಕಾಗಿದೆ. ಹೀಗಾಗಿ ಸೌತ್ ಮತ್ತೊಬ್ಬ ಸೆನ್ಸೇಷನಲ್ ನಿರ್ದೇಶಕನತ್ತ ಸಲ್ಮಾನ್​ ಖಾನ್​ ಚಿತ್ತ ಹರಿಸಿದ್ದಾರೆ ಎನ್ನಲಾಗುತ್ತಿದೆ. ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾಗಳ ಸರದಾರ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಸಲ್ಮಾನ್ ಖಾನ್​ ನಟಿಸಲು ಉತ್ಸುಕರಾಗಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಮಾಹಿತಿ.

‘ಕೆ.ಜಿ.ಎಫ್‘ ಈ​ ನಟಿಯ ಜೊತೆ ಇರುವುದು ನಾಲ್ಕೇ ಬಟ್ಟೆಯಂತೆ!

ಪೂರಿ ಜಗನ್ನಾಥ್ ಸದ್ಯ ಬಾಲಿವುಡ್ ನಲ್ಲಿ ‘ಫೈಟರ್‘ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೂ‌ ಮುನ್ನ ಅಮಿತಾಭ್ ಗಾಗಿ ‘ಬುಡ್ಡ ಹೋಗಯಾ ತೇರಾ ಬಾಪ್‘‌ ಸಿನಿಮಾ ಮಾಡಿದ್ದರು. ಅದಾದ ನಂತರ ಬಿ-ಟೌನ್ ನತ್ತ ಮುಖ‌ ಮಾಡಿರಲಿಲ್ಲ. ಈಗ ಫೈಟರ್ ಮೂಲಕ ವಿಜಯ್ ದೇವರಕೊಂಡರನ್ನ ನ್ಯಾಷನಲ್ ಲೆವೆಲ್ ನಲ್ಲಿ ಪ್ರಾಜೆಕ್ಟ್ ಮಾಡಲು ಹೊರಟಿರುವ ಪೂರಿ, ಅದಾದ ನಂತರ ಸಲ್ಮಾನ್ ಗೊಂದು ಬಿಗ್ ಬ್ರೇಕ್ ಕೊಡಲು ಸಜ್ಜಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

Maruti Suzuki Offers: ಮಾರುತಿ ಸುಜುಕಿ ಕಂಪೆನಿ ನೀಡುತ್ತಿದೆ ‘ಮೊದಲು ಖರೀದಿಸಿ ನಂತರ ಹಣ ನೀಡಿ‘ ಆಫರ್​​!
First published: May 22, 2020, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading