Salman Khan: ಪಾರ್ಟಿಗೆ ಹೋಗುವಾಗ ಪ್ಯಾಂಟ್ ಜೇಬಿನಲ್ಲಿ ಗಾಜಿನ ಲೋಟ ಇಟ್ಕೊಂಡು ಹೋದ ಸಲ್ಮಾನ್ ಖಾನ್! ವಿಡಿಯೋ ಫುಲ್ ವೈರಲ್!

ನಿರ್ಮಾಪಕರ ಹುಟ್ಟುಹಬ್ಬದ ಪಾರ್ಟಿಗೆಂದು ತನ್ನ ಐಷಾರಾಮಿ ಕಾರಿನಲ್ಲಿ ಬಂದಿಳಿದ ಸಲ್ಮಾನ್​ ಖಾನ್​, ಕಾರಿನಿಂದ ಕೆಳಗಿಳಿಯುವಾಗಲೇ ಕೈಯಲ್ಲಿ ಒಂದು ಗ್ಲಾಸ್ ಹಿಡಿದಿದ್ರು. ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಸಲ್ಲು ಕೈಯಲ್ಲಿದ್ದ ಗ್ಲಾಸ್​ ಅನ್ನು ಪ್ಯಾಂಟ್ ಜೇಬಿನಲ್ಲಿ ಹಾಕಿಕೊಂಡಿದ್ದಾರೆ.

ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​

  • Share this:
ಬಾಲಿವುಡ್ (Bollywood) ಬ್ಯಾಡ್​ ಬಾಯ್​ ಸಲ್ಮಾನ್ ಖಾನ್​ಗೆ (Salman Khan) ಪಾರ್ಟಿಗಳೇನು ಹೊಸದಲ್ಲ. ಆದ್ರೆ ​ಇದೀಗ ಪಾರ್ಟಿಗೆ ಹೋದ ಸಲ್ಲು ಸಖತ್​ ವೈರಲ್ ಆಗಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಮುರಾದ್​ ಖೇತನಿ (Producer Murad Khetani) ಅವರ ಹುಟ್ಟುಹಬ್ಬದ ಪಾರ್ಟಿಕ್ಕೆ ಸಲ್ಮಾನ್​ ಖಾನ್​ ಹಾಜರಾಗಿದ್ರು. ಈ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪಾರ್ಟಿಗೆ ಬರುವಾಗ ತಮ್ಮದೇ ಗಾಜಿನ ಲೋಟವನ್ನು ಪ್ಯಾಂಟ್​ ಜೇಬಿನಲ್ಲಿ (Pant Pocket) ಇಟ್ಟುಕೊಂಡು ಬಂದಿದ್ದಾರೆ. ಕಾರಿನಿಂದ ಇಳಿದ ಬಳಿಕ ಲೋಟವನ್ನು ಪ್ಯಾಂಟ್​​ನ ಜೇಬಿನಲ್ಲಿ ಹಾಕಿಕೊಂಡು ಬಂದ ದೃಶ್ಯ ಇದೀಗ ವೈರಲ್​ ಆಗಿದೆ. ಸಲ್ಲು ವರ್ತನೆಗೆ ನೆಟ್ಟಿಗರು ಬಗೆಬಗೆಯ ಕಮೆಂಟ್​ಗಳನ್ನು ಮಾಡ್ತಿದ್ದಾರೆ.

ಸಲ್ಲು ಪ್ಯಾಂಟ್​ ಜೇಬಿನಲ್ಲಿ ಗ್ಲಾಸ್​​

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಏನೇ ಮಾಡಿದ್ರು ಸುದ್ದಿಯಾಗ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಸಲ್ಮಾನ್ ಖಾನ್​ ಬಿಡುವಿನ ಸಮಯದಲ್ಲಿ ಫಾರ್ಟಿ, ಮೋಜು ಮಸ್ತಿ ಮಾಡೋದು ಕಾಮನ್​. ನಿರ್ಮಾಪಕರ ಹುಟ್ಟುಹಬ್ಬದ ಪಾರ್ಟಿಗೆಂದು ತನ್ನ ಐಷಾರಾಮಿ ಕಾರಿನಲ್ಲಿ ಬಂದಿಳಿದ ಸಲ್ಮಾನ್​ ಖಾನ್​, ಕಾರಿನಿಂದ ಕೆಳಗಿಳಿಯುವಾಗಲೇ ಕೈಯಲ್ಲಿ ಒಂದು ಗ್ಲಾಸ್ ಹಿಡಿದಿದ್ರು. ಗ್ಲಾಸ್​ನಲ್ಲಿ ನೀರಿನ ರೀತಿ ಕಾಣುತ್ತಿದ್ದ ಪಾನೀಯ ಇತ್ತು. ಬಳಿಕ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಸಲ್ಲು ಕೈಯಲ್ಲಿದ್ದ ಗ್ಲಾಸ್​ನನ್ನು ಪ್ಯಾಂಟ್ ಜೇಬಿನಲ್ಲಿ ಹಾಕಿಕೊಂಡಿದ್ದಾರೆ.

ಸಲ್ಲು ವಿಡಿಯೋ ಫುಲ್ ವೈರಲ್​

ಕೈಯಲ್ಲಿ ಹಿಡಿದುಕೊಂಡಿದ್ದ ಗಾಜಿನ ಲೋಟವನ್ನು ಸಲ್ಮಾನ್​ ಖಾನ್​ ಅವರು ತಮ್ಮ ಪ್ಯಾಂಟ್​ ಜೇಬಿನಲ್ಲಿ ತುರುಕಿಕೊಂಡಿದ್ದಾರೆ. ಬಾಡಿಗಾರ್ಡ್​ಗಳು ಸಲ್ಲು ವರ್ತನೆಯನ್ನು ಮರೆಮಾಚಲು ಯತ್ನಿಸಿದ್ರು. ಕ್ಯಾಮೆರಾಗೆ ಅಡ್ಡ ಬಂದು ನಿಂತಿದ್ದಾರೆ. ಆದ್ರೆ ಎಷ್ಟೇ ಪ್ರಯತ್ನ ಪಟ್ಟರು ಸಲ್ಲು ಪ್ಯಾಂಟ್ ನ ಜೇಬಿನಲ್ಲಿ ಗ್ಲಾಸ್ ಬಚ್ಚಿಟ್ಟ ದೃಶ್ಯ ಮರೆಮಾಚಲು ಯತ್ನಿಸಿದ್ದಾರೆ. ಸದ್ಯಕ್ಕಂತೂ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಷ್ಟಕ್ಕೂ ಸಲ್ಮಾನ್​ ಖಾನ್​ ಅವರು ಪಾರ್ಟಿಗೆ ತಮ್ಮ ಸ್ವಂತ ಗಾಜಿನ ಲೋಟ ಹಿಡಿದುಕೊಂಡು ಬಂದಿದ್ದು ಯಾಕೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಸಲ್ಲು ಗ್ಲಾಸ್​ ತಂದಿದ್ದು ಹೊಸದಲ್ಲ

ಸಲ್ಮಾನ್​ ಖಾನ್​ ಅವರು ಈ ರೀತಿ ಗಾಜಿನ ಲೋಟವನ್ನು ಪ್ಯಾಂಟ್​ ಜೇಬಿನಲ್ಲಿ ತುಂಬಿಕೊಂಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ಬಿಗ್​ ಬಾಸ್​ ಕಾರ್ಯಕ್ರಮದ ವೀಕೆಂಡ್​ ಎಪಿಸೋಡ್​ ನಡೆಸಿಕೊಡುವಾಗಲೂ ಇದೇ ರೀತಿ ಮಾಡಿದ್ದರು. ವೇದಿಕೆಯಲ್ಲಿ ನೀರು ಕುಡಿದ ಬಳಿಕ ಆ ಲೋಟವನ್ನು ಅವರು ತಮ್ಮ ಪ್ಯಾಂಟ್​ ಜೇಬಿನಲ್ಲಿ ತುರುಕಿಕೊಂಡಿದ್ದರು. ಈಗ ಆ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಿಸಿ ಕಾ ಭಾಯ್​​, ಕಿಸಿ ಕಾ ಜಾನ್​, ಟೈಗರ್​ 3 ಮುಂತಾದ ಸಿನಿಮಾಗಳಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ. ಗಾಡ್​ ಫಾದರ್​, ಪಠಾಣ್ ಮತ್ತಿತ್ತರ ಚಿತ್ರಗಳಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ.
Published by:Pavana HS
First published: