VIDEO: ಭಾರತ್​ನಲ್ಲಿ ಸಲ್ಮಾನ್​ ಖಾನ್​ಗೆ ಇಷ್ಟೊಂದು ಗೆಟಪ್​?; ಹೌದೆನ್ನುತ್ತಿದೆ ಟೀಸರ್​

ಭಾರತ-ಪಾಕಿಸ್ತಾನ ಇಬ್ಭಾಗದ ದೃಶ್ಯದ ಮೂಲಕ ‘ಭಾರತ್​’ ಟೀಸರ್​ ತೆರೆದುಕೊಳ್ಳುತ್ತದೆ. ‘ಭಾರತ್​’  ವ್ಯಕ್ತಿ ಹಾಗೂ ದೇಶ ಒಟ್ಟಿಗೆ ಸಾಗುವ ಕಥೆಯನ್ನು ಹೇಳಲಿದೆಯಂತೆ. ಹಾಗಾಗಿ, ಅವರು ಭಿನ್ನ ಭಿನ್ನ ಗೆಟಪ್​ ತಾಳಿದ್ದಾರಂತೆ ಸಲ್ಲು.

Rajesh Duggumane | news18
Updated:January 25, 2019, 6:10 PM IST
VIDEO: ಭಾರತ್​ನಲ್ಲಿ ಸಲ್ಮಾನ್​ ಖಾನ್​ಗೆ ಇಷ್ಟೊಂದು ಗೆಟಪ್​?; ಹೌದೆನ್ನುತ್ತಿದೆ ಟೀಸರ್​
ಭಾರತ್​ನಲ್ಲಿ ಸಲ್ಮಾನ್​ ಗೆಟಪ್​​
  • News18
  • Last Updated: January 25, 2019, 6:10 PM IST
  • Share this:
ಸಲ್ಮಾನ್​ ಖಾನ್​ ನಟಿಸಿದ ಬಹುತೇಕ ಚಿತ್ರಗಳಲ್ಲಿ ಅವರು ಒಂದೇ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಭಾರತ್​ ಚಿತ್ರದಲ್ಲಿ ಅವರು ಭಿನ್ನ ಭಿನ್ನ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಈ ವಿಚಾರ ಈ ಮೊದಲೇ ಹರಿದಾಡಿತ್ತು. ಈಗ ಟೀಸರ್​ ಅದಕ್ಕೆ ಸಾಕ್ಷ್ಯ ನೀಡಿದೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ‘ಭಾರತ್​’ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಸಲ್ಲು ಹಿಂದೆಂದೂ ಕಾಣಿಸಿಕೊಳ್ಳಲದ ಗೆಟಪ್​ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಟೀಸರ್​ ನೋಡಿದವರು ಹೀರೋನ ಗೆಟಪ್ ಸಿನಿಮಾದಲ್ಲಿ​ ಹೀಗಿರುತ್ತದೆ ಎಂದು ಊಹಿಸಬಹುದು. ಆದರೆ, ‘ಭಾರತ್​’ ಚಿತ್ರದಲ್ಲಿ ಈ ಲೆಕ್ಕಾಚಾರ ತಪ್ಪುತ್ತದೆ. ಒಮ್ಮೆ ನೌಕಾ ಪಡೆಯ ಅಧಿಕಾರಿಯಾಗಿ ಅವರು ಕಾಣಿಸಿಕೊಂಡರೆ, ಮತ್ತೊಮ್ಮೆ ಮುದುಕನ ಅವತಾರ ತಾಳುತ್ತಾರೆ.

ಭಾರತ-ಪಾಕಿಸ್ತಾನ ಇಬ್ಭಾಗದ ದೃಶ್ಯದ ಮೂಲಕ ‘ಭಾರತ್​’ ಟೀಸರ್​ ತೆರೆದುಕೊಳ್ಳುತ್ತದೆ. ಚಿತ್ರದಲ್ಲಿ ಸಲ್ಮಾನ್ ಸರ್ಕಸ್​ ಒಂದರಲ್ಲಿ ​ ಸ್ಟಂಟ್​ ಕಲಾವಿದ. ಅಷ್ಟಕ್ಕೂ ಅವರು ಭಿನ್ನ ಭಿನ್ನ ಅವತಾರ ಏಕೆ ತಾಳುತ್ತಾರೆ ಎಂಬುದಕ್ಕೆ ಚಿತ್ರದಲ್ಲೇ ಉತ್ತರ ಕಂಡುಕೊಳ್ಳಬೇಕು. ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್​ ವಿಚಾರಗಳು ಇರಲಿವೆಯಂತೆ.ಇದನ್ನೂ ಓದಿ: 'ಕಲ್ಯಾಣ'ದ ಊಟದಲ್ಲಿ ಖಾದ್ಯಕ್ಕಿಂತ ಉಪ್ಪಿನಕಾಯಿಯೇ ಹೆಚ್ಚು

ಕೊರಿಯಾ ಭಾಷೆಯ ‘ಆ್ಯನ್​ ಆಡ್​ ಟು ಮೈ ಫಾದರ್​’ ನಾಟಕದ ಪ್ರೇರಣೆಯಿಂದ ಕಥೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲಿ ಅಬ್ಬಾಸ್​ ಜಫರ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ವರ್ಷದ ಈದ್​​ ಪ್ರಯುಕ್ತ ಸಿನಿಮಾ ಬಿಡುಗಡೆ ಆಗುತ್ತಿದೆ. ಸಲ್ಮಾನ್​ ಖಾನ್​  ‘ರೇಸ್​ 3’ ಚಿತ್ರ ವಿಮರ್ಷೆಯಲ್ಲಿ ಸೋತಿತ್ತು. ಹಾಗಾಗಿ ಈ ಬಾರಿ ಅವರಿಗೆ ಗೆಲ್ಲುವ ಅಗತ್ಯ ಎದುರಾಗಿದೆ.

First published:January 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading