Salman Khan ಫಾರ್ಮ್​ ಹೌಸ್​ನಲ್ಲಿ ಸುಡ್ತಾರಂತೆ ಸೆಲೆಬ್ರಿಟಿಗಳ ಶವ.. ಇನ್ನೂ ಏನೇನೋ​ ನಡೆಯುತ್ತೆ ಅಂದಿದ್ಯಾರು?

ಸಲ್ಮಾನ್ ಖಾನ್ ಫಾರ್ಮ್‌ ಹೌಸ್‌ನಲ್ಲಿ ಅಕ್ರಮಗಳು ನಡೆಯುತ್ತಿದೆ. ಹಾಗೂ ಸಲ್ಮಾನ್ ಖಾನ್ ಅವರ ಫಾರ್ಮ್‍ಹೌಸ್‍ನಲ್ಲಿ ಸಿನಿಮಾ ತಾರೆಯರ ಶವಗಳನ್ನು ಹೂಳಲಾಗುತ್ತಿದೆ. ಅದು ಅಲ್ಲದೇ ಇಲ್ಲಿ ಮಕ್ಕಳ ಕಳ್ಳಸಾಗಣೆ ಕೂಡ ನಡೆಯುತ್ತದೆ ಎಂದು ಆರೋಪಿಸಿದ್ದಾರೆ.

ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​

  • Share this:
ಸಲ್ಮಾನ್​ ಖಾನ್​(Salman Khan).. ಸಲ್ಲು ಭಾಯ್​.. ಬಜರಂಗಿ ಭಾಯ್​ಜಾನ್.. ಬಾಲಿವುಡ್​ ಸುಲ್ತಾನ.. ಹೌದು, ಸಲ್ಲು ಸಿನಿಮಾಗಳು ಅಂದರೆ ಅಲ್ಲಿ ಭರ್ಜರಿ ಕಲೆಕ್ಷನ್​(Collection)ಗೆ ಕಮ್ಮಿ ಇಲ್ಲ.. ಸಿನಿಮಾ ಚೆನ್ನಾಗಿಲ್ಲ ಅಂದರೂ ದುಡ್ಡಿನ ಹೊಳೆ ಹರಿಯುತ್ತೆ. ಹೀಗಾಗಿ ಸಲ್ಲು ಭಾಯ್​ ಜೊತೆ ಸಿನಿಮಾ ಮಾಡಲು ನಿಮಾರ್ಪಕ(Producers)ರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೂ, ಸಲ್ಮಾನ್​ ಖಾನ್​ ಅವರು ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸಖತ್​ ಸುದ್ದಿ ಮಾಡಿದವರೆ. ಅಪಘಾತ(Accident) ಪ್ರಕರಣ, ಕೃಷ್ಣ ಮೃಗ ಬೇಟೆ(Hunting), ಹೀಗೆ ಒಂದಲ್ಲ ಒಂದು ಸಲ್ಮಾನ್​ ಖಾನ್​ ಅವರ ಕೊರಳಿಗೆ ಸುತ್ತಿಕೊಂಡಿರುತ್ತೆ.  ಸಲ್ಮಾನ್​ ಖಾನ್​ ಪನ್ವೇಲ್​ ಬಳಿ ಫಾರ್ಮ್​ ಹೌಸ್(Panvel Farmhouse) ಹೊಂದಿದ್ದಾರೆ. ಇತ್ತೀಚೆಗೆ ಇದೇ ಫಾರ್ಮ್​ ಹೌಸ್​ನಲ್ಲಿ ಸಲ್ಮಾನ್​ ಖಾನ್​ಗೆ ಹಾವು ಕಚ್ಚಿತ್ತು, ಮಾರನೇ ದಿನ ತಮ್ಮ ಹುಟ್ಟುಹಬ್ಬವನ್ನು ಇಲ್ಲಿಯೇ ಆಚರಿಸಿಕೊಂಡಿದ್ದರು. ಇದೀಗ ಇವರ ಪನ್ವೇಲ್​ ಫಾರ್ಮ್​ ಹೌಸ್​ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಕೇತನ್​ ಕಕ್ಕಡ್​​ (Ketan Kakkad) ಎಂಬ ವ್ಯಕ್ತಿ ಸಲ್ಮಾನ್ ಖಾನ್‌ರ ಪನ್ವೇಲ್ ಫಾರ್ಮ್​ ಹೌಸ್ ಬಳಿಯಲ್ಲಿಯೇ ಜಮೀನು ಹೊಂದಿದ್ದರು.  ಸಲ್ಮಾನ್ ಖಾನ್‌ ತಮ್ಮ ಜಮೀನು ಕಬಳಿಸಿದ್ದಾರೆಂದು ಅವರು ಆರೋಪಿಸಿದ್ದರು. ಸಲ್ಮಾನ್‌ರ ಧರ್ಮದ ಬಗ್ಗೆಯೂ ನಿಂದನೆ ಮಾಡಿದ್ದರು. ಸಲ್ಮಾನ್ ವ್ಯಕ್ತಿತ್ವದ ಬಗ್ಗೆಯೂ ಟೀಕೆಗಳನ್ನು ಮಾಡಿದ್ದರು. ಈ ಬಗ್ಗೆ ವಕೀಲರ ಮೂಲಕ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಉತ್ತರಿಸಿದ್ದರು.

ಫಾರ್ಮ್​ ಹೌಸ್​​ನಲ್ಲಿ ಸುಡ್ತಾರಂತೆ ತಾರೆಯರ ಶವ!

ಇದೀಗ ಮತ್ತೊಂದು ಗಂಭೀರ ಆರೋಪವನ್ನು ಕೇತನ್​ ಕಕ್ಕಡ್​ ಮಾಡಿದ್ದಾರೆ. ಸಲ್ಮಾನ್ ಖಾನ್ ಫಾರ್ಮ್‌ ಹೌಸ್‌ನಲ್ಲಿ ಅಕ್ರಮಗಳು ನಡೆಯುತ್ತಿದೆ. ಹಾಗೂ ಸಲ್ಮಾನ್ ಖಾನ್ ಅವರ ಫಾರ್ಮ್‍ಹೌಸ್‍ನಲ್ಲಿ ಸಿನಿಮಾ ತಾರೆಯರ ಶವಗಳನ್ನು ಹೂಳಲಾಗುತ್ತಿದೆ. ಅದು ಅಲ್ಲದೇ ಇಲ್ಲಿ ಮಕ್ಕಳ ಕಳ್ಳಸಾಗಣೆ ಕೂಡ ನಡೆಯುತ್ತದೆ ಎಂದು ಆರೋಪಿಸಿದ್ದಾರೆ. ಕಕ್ಕಡ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ ಪರ ವಕೀಲ ಪ್ರದೀಪ್ ಗಾಂಧಿ, ಈ ಆರೋಪಗಳಿಗೆ ಯಾವುದೇ ಸಾಕ್ಷಿಗಳು ಇಲ್ಲ. ಇದು ಸಲ್ಮಾನ್ ಖಾನ್ ಅವರ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ : Kareena Kapoorಗಾಗಿ 25,000 ರೂ ಸೀರೆ ಖರೀದಿಸಿದ Aamir Khan, ವಿಡಿಯೋ ನೋಡಿ

ಜಮೀನು ಕಬಳಿಸಿದ್ದಾರೆ ಎಂದಿದ್ದ ಕೇತನ್​ ಕಕ್ಕಡ್​!
ಕೆಲ ದಿನಗಳ ಹಿಂದೆ ಕೂಡ ಕೇತನ್ ಕಕ್ಕಡ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ್ದರಯ. ಸಲ್ಮಾನ್ ಖಾನ್‌ ತಮ್ಮ ಜಮೀನು ಕಬಳಿಸಿದ್ದಾರೆಂದು ಆರೋಪ ಮಾಡಿದ್ದರು. ಸಲ್ಮಾನ್‌ ಖಾನ್ ಅವರ ಧರ್ಮದ ಬಗ್ಗೆಯೂ ನಿಂದನೆ ಮಾಡಿದ್ದರು. ಸಲ್ಮಾನ್ ವ್ಯಕ್ತಿತ್ವದ ಬಗ್ಗೆಯೂ ಟೀಕೆಗಳನ್ನು ಮಾಡಿದ್ದರು. ಈಗ ಈ ರೀತಿ ಗಂಭಿರ ವಿಚಾರದ ಬಗ್ಗೆ ಆರೋಪ ಮಾಡುತ್ತಿರುವುದಕ್ಕೆ ಸಲ್ಮಾನ್ ಖಾನ್ ಮತ್ತು ಕುಟುಂಬಸ್ತರು ಆಕ್ರೋಶ ಭರಿತರಾಗಿದ್ದಾರೆ. ಸಲ್ಮಾನ್ ಖಾನ್ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾರೆ. ಆದರೆ ಮಧ್ಯಂತರ ಆದೇಶದಿಂದ ಸಲ್ಮಾನ್ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.




150 ಎಕರೆ,  150 ಕೋಟಿ ಖರ್ಚು ಮಾಡಿರುವ ಸಲ್ಲು ಭಾಯ್​


ಸಲ್ಮಾನ್‌ ಖಾನ್‌ ಅವರ ಪನ್ವೆಲ್ ಫಾರ್ಮ್‌ ಹೌಸ್‌ ಒಟ್ಟು ವಿಸ್ತೀರ್ಣ 150 ಎಕರೆ. 150 ಎಕರೆಯ ವಿಶಾಲ ಜಾಗದಲ್ಲಿ ಸಲ್ಮಾನ್‌ ಖಾನ್‌ ಅವರು ಫಾರ್ಮ್‌ ಹೌಸ್‌ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ಮನೆ, ತೋಟ, ಸೇರಿದಂತೆ ಅಗತ್ಯ ಇರುವ ಎಲ್ಲವನ್ನು ಸಲ್ಲು ನಿರ್ಮಾಣ ಮಾಡಿಕೊಂಡಿದ್ದಾರೆ. 150 ಎಕರೆ ಜಾಗದಲ್ಲಿ ನಿರ್ಮಾಣ ಆಗಿರುವ ಈ ಫಾರ್ಮ್‌ ಹೌಸ್‌ ಬೆಲೆ 80 ಕೋಟಿ ಎಂದು ವರದಿ ಆಗಿದೆ.

Published by:Vasudeva M
First published: