Mannat: ಶಾರುಖ್​ಗಿಂತ ಮೊದಲು ಸಲ್ಮಾನ್ ಖಾನ್​ಗೆ ‘ಮನ್ನತ್’ ಖರೀದಿಸುವ ಆಫರ್ ಬಂದಿತ್ತಂತೆ! ಮತ್ಯಾಕೆ ಖರೀದಿಸಿಲ್ಲ?

ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ ಸಲ್ಮಾನ್ ನಟ ಶಾರುಖ್ ಅವರ ಒಂದು ವಿಷಯದ ಬಗ್ಗೆ ತುಂಬಾನೇ ಮಾತನಾಡಿದರು. ಆ ವಿಷಯ ಏನೆಂದರೆ ಶಾರುಖ್ ಅವರು ವಾಸವಾಗಿದ್ದ ಮುಂಬೈ ಬಂಗಲೆಯಾದ ‘ಮನ್ನತ್’ ಬಗ್ಗೆ ಅಂತ ಹೇಳಿದರೆ ಸುಳ್ಳಲ್ಲ. ಏಕೆಂದರೆ ಸಲ್ಮಾನ್ ಅವರಿಗೆ ಈ ಮನೆಯನ್ನು ಖರೀದಿಸುವಂತೆ ಆಫರ್ ಅನ್ನು ನೀಡಲಾಗಿತ್ತಂತೆ.

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್

  • Share this:
ಬಾಲಿವುಡ್ ನ (Bollywood) ಜನಪ್ರಿಯ ನಟ ಶಾರುಖ್ ಖಾನ್ (Shah Rukh Khan) ಅವರು ಈಗ ವಾಸವಾಗಿರುವ ‘ಮನ್ನತ್’ ಬಂಗಲೆಯನ್ನು ('Mannat' Bungalow) ಖರೀದಿಸುವಂತೆ ಮೊದಲು ಬಾಲಿವುಡ್ ನ ಇನ್ನೊಬ್ಬ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಆಫರ್ ನೀಡಲಾಗಿತ್ತಂತೆ ಎಂದು ಹೇಳಲಾಗುತ್ತಿದೆ. ನಟ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಿಬ್ಬರು ಸದಾ ಒಂದಲ್ಲ ಒಂದು ಕಾರಣಕ್ಕೆ ತುಂಬಾನೇ ಸುದ್ದಿಯಲ್ಲಿರುವ ನಟರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ, ಶಾರುಖ್ ತಮ್ಮ ಮುಂಬರುವ ಚಿತ್ರ ಪಠಾನ್ ನಲ್ಲಿ (Pathaan) ಸಲ್ಮಾನ್ ಒಂದು ಹಾಡಿನಲ್ಲಿ ಭಾಗವಾಗಬಹುದು ಎಂದು ಸುಳಿವು ನೀಡಿದರು ಮತ್ತು ಅವರೊಂದಿಗೆ ಕೆಲಸ ಮಾಡುವುದು 'ಸಹೋದರ ಅನುಭವ' ಎಂದು ಸಹ ಹೇಳಿದರು.

ಸಲ್ಮಾನ್ ಅವರಿಗೆ ಮನ್ನತ್ ಮನೆ ಖರೀದಿಸುವಂತೆ ಆಫರ್ 
ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ ಸಲ್ಮಾನ್ ನಟ ಶಾರುಖ್ ಅವರ ಒಂದು ವಿಷಯದ ಬಗ್ಗೆ ತುಂಬಾನೇ ಮಾತನಾಡಿದರು. ಆ ವಿಷಯ ಏನೆಂದರೆ ಶಾರುಖ್ ಅವರು ವಾಸವಾಗಿದ್ದ ಮುಂಬೈ ಬಂಗಲೆಯಾದ ‘ಮನ್ನತ್’ ಬಗ್ಗೆ ಅಂತ ಹೇಳಿದರೆ ಸುಳ್ಳಲ್ಲ. ಏಕೆಂದರೆ ಸಲ್ಮಾನ್ ಅವರಿಗೆ ಈ ಮನೆಯನ್ನು ಖರೀದಿಸುವಂತೆ ಆಫರ್ ಅನ್ನು ನೀಡಲಾಗಿತ್ತಂತೆ. ಆದರೆ ಆಗ ಸಲ್ಮಾನ್ ‘ಮನ್ನತ್’ ಬಂಗಲೆಯನ್ನು ಖರೀದಿಸಲು ನಿರಾಕರಿಸಿದರು. ಆದರೆ ಇವತ್ತು ಸಲ್ಮಾನ್ ಅವರು ಆ ಬಂಗಲೆಯನ್ನು ಆಗ ಖರೀದಿಸಬೇಕಿತ್ತು ಅಂತ ಹೇಳುತ್ತಾರೆ.

ಹೇಗಿದೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಫ್ರೆಂಡ್ಶಿಪ್ 
ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಪರಸ್ಪರರ ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಿದ್ದಾರೆ ಮತ್ತು 1995 ರ ಕರಣ್ ಅರ್ಜುನ್ ಚಿತ್ರದಲ್ಲಿ ಸಹ ಇಬ್ಬರು ಒಟ್ಟಿಗೆ ಸಹೋದರರ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ, ನಟರು ಶೀಘ್ರದಲ್ಲಿಯೇ ಚಲನಚಿತ್ರ ನಿರ್ಮಾಪಕ ಆದಿತ್ಯಾ ಚೋಪ್ರಾ ಅವರ ಥ್ರಿಲ್ಲರ್ ನಲ್ಲಿ ನಟಿಸಬಹುದು. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಿಕಟ ಸ್ನೇಹವನ್ನು ಹಂಚಿಕೊಂಡಿದ್ದಾರೆ, ಆದರೆ ಕೆಲವು ವರ್ಷಗಳ ಹಿಂದೆ ಎಂದರೆ 2008 ರಲ್ಲಿ ನಟಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳವಾಡಿದ ನಂತರ ಅವರು ಇಬ್ಬರು ಪರಸ್ಪರರ ಮುಖ ನೋಡಿಕೊಳ್ಳದ ಮತ್ತು ಮಾತನಾಡದ ಒಂದು ಸಮಯ ಸಹ ಇತ್ತು.

ಇದನ್ನೂ ಓದಿ:  Aamir Khan: ನಟ ಆಮಿರ್ ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿಲ್ವಂತೆ, ಕಾರಣ ಕೇಳಿ

ಶಾರುಖ್ ಅವರ ಬಗ್ಗೆ ಬಯಸಿದ್ದ ಒಂದು ವಿಷಯದ ಬಗ್ಗೆ ಸಲ್ಮಾನ್ ಅವರನ್ನು ಕೇಳಿದಾಗ ಒಂದು ಸಂದರ್ಶನದಲ್ಲಿ ನಟ "ಆ ‘ಮನ್ನತ್’ ಬಂಗಲೆಯನ್ನು ಖರೀದಿಸುವಂತೆ ಮೊದಲು ನನಗೆ ಕೇಳಿದ್ದರು, ಆದರೆ ನಾನು ಆಗತಾನೆ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದೆ. ನನ್ನ ತಂದೆ ಸಲೀಂ ಖಾನ್ ಅವರು ಸಹ ಈ ಮನೆಯ ಬಗ್ಗೆ “ ಇಷ್ಟು ದೊಡ್ಡ ಮನೆಯಲ್ಲಿ ನೀವು ಏನು ಮಾಡುತ್ತೀರಿ” ಎಂದು ಹೇಳಿದರು. ಈಗ ನಾನು ಅದೇ ಮಾತನ್ನು ಶಾರುಖ್ ಅವರನ್ನು ಕೇಳಲು ಬಯಸುತ್ತೇನೆ, ಅಷ್ಟೊಂದು ದೊಡ್ಡ ಮನೆಯಲ್ಲಿ ಅವರು ಏನು ಮಾಡುತ್ತಾರೆ ಅಂತ" ಎಂದು ಸಲ್ಮಾನ್ ಹೇಳಿದರು.

ಮನ್ನತ್ ಬಂಗಲೆ ಹೇಗಿದೆ
ಮುಂಬೈನ ಬಾಂದ್ರಾದಲ್ಲಿರುವ ‘ಮನ್ನತ್’ ಬಂಗಲೆಯಲ್ಲಿ ನಟ ಶಾರುಖ್ ಅವರು ತಮ್ಮ ಪತ್ನಿ ಗೌರಿ ಖಾನ್ ಮತ್ತು ಅವರ ಮೂವರು ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಜೊತೆಯಲ್ಲಿ ವಾಸವಾಗಿದ್ದಾರೆ.

ಇದನ್ನೂ ಓದಿ:  Aamir Khan: ಬಾಲಿವುಡ್ ಸಿನಿಮಾಗಳು ಸದ್ದು ಮಾಡದಿರಲು ಆಮಿರ್ ಖಾನ್ ಕಾರಣವಂತೆ, ಕರಣ್ ಜೋಹರ್ ಹೀಗೆ ಅಂದಿದ್ಯಾಕೆ?

ಆರು ಅಂತಸ್ತಿನ ಈ ಬಂಗಲೆಯ ಒಳಾಂಗಣವನ್ನು ಸಂಪೂರ್ಣವಾಗಿ ಶಾರುಖ್ ಅವರ ಪತ್ನಿ ಗೌರಿ ಅವರೇ ವಿನ್ಯಾಸಗೊಳಿಸಿದ್ದಾರೆ ಮತ್ತು ಇದು ಬಾಲಿವುಡ್ ನ ಅತ್ಯಂತ ಅಪ್ರತಿಮ ಸೆಲೆಬ್ರಿಟಿ ಮನೆಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಇದು ಐಷಾರಾಮಿ ಸೌಲಭ್ಯಗಳು ಮತ್ತು ಕಲಾ ಸಂಗ್ರಹಗಳು ಮತ್ತು ಕುಟುಂಬ ಸ್ಮರಣಿಕೆಗಳನ್ನು ಒಳಗೊಂಡಿದೆ ಮತ್ತು ಇದರ ಮೌಲ್ಯ ಸುಮಾರು 200 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಸಲ್ಮಾನ್ ಒಬ್ಬ ಸಹೋದರನಿದ್ದಂತೆ: ಶಾರುಖ್
ಜೂನ್ ನಲ್ಲಿ ಶಾರುಖ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಲೈವ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ತಮ್ಮ 30 ವರ್ಷಗಳ ಬಾಲಿವುಡ್ ಪ್ರಯಾಣವನ್ನು ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಶಾರುಖ್ "ಸಲ್ಮಾನ್ ಒಬ್ಬ ಸಹೋದರನಿದ್ದಂತೆ. ನಮ್ಮಲ್ಲಿ ಯಾರು ಹಿರಿಯರು ಎಂದು ನಮಗೆ ತಿಳಿದಿಲ್ಲ. ನಮ್ಮಲ್ಲಿ ಇಬ್ಬರು ಬೇರೆ ಬೇರೆ ದಿನಗಳಲ್ಲಿ ಹಿರಿಯ ಸಹೋದರನಂತೆ ವರ್ತಿಸುತ್ತೇವೆ. ಯಾರೇ ತಪ್ಪು ಮಾಡಿದರೂ, ಇನ್ನೊಬ್ಬರು ಅಣ್ಣನ ಪಾತ್ರದಲ್ಲಿ ನಿಂತು ಅದನ್ನು ಸರಿ ಮಾಡುತ್ತಾರೆ" ಎಂದು ಹೇಳಿದ್ದರು.
Published by:Ashwini Prabhu
First published: