ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ (Katrina Kaif and Vicky Kaushal) ಮದುವೆ (wedding) ಮುಗಿದು ವಾರ ಕಳೆದರೂ, ಅಭಿಮಾನಿಗಳಲ್ಲಿ ಅವರ ಮದುವೆಯ ಕುರಿತ ಚರ್ಚೆಗಳು ನಡೆಯುತ್ತಲೇ ಇವೆ. ಹಾಗೆಯೇ, ವಿಕಿ- ಕ್ಯಾಟ್ ಮದುವೆಗೆ ಸಂಬಂಧಿಸಿದ ಸುದ್ದಿಗಳಿಗೂ ಬರವಿಲ್ಲ. ಇದೀಗ ಆ ಕುರಿತು ಹೊಸದೊಂದು ಸುದ್ದಿಯಿದ್ದು, ಅದರಲ್ಲಿ ವಿಕ್ಕಿ – ಕ್ಯಾಟ್ ಮಾತ್ರವಲ್ಲ ಸಲ್ಮಾನ್ ಖಾನ್ ಕೂಡ ಇದ್ದಾರೆ. ಹೌದು, ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ (Salman Khan), ತಮ್ಮ ಆತ್ಮೀಯ ಗೆಳತಿ ಕತ್ರೀನಾರ ಮದುವೆಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರಂತೆ. ಆ ಉಡುಗೊರೆ ಏನು ಗೊತ್ತೆ? ಒಂದು ದುಬಾರಿ (Expensive car) ಕಾರು!
3 ಕೋಟಿ ರೂ. ಬೆಲೆ ಬಾಳುವ ಕಾರು
ಮಾಧ್ಯಮ ವರದಿಯೊಂದರ ಪ್ರಕಾರ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ 3 ಕೋಟಿ ರೂ. ಬೆಲೆ ಬಾಳುವ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಕತ್ರೀನಾ ಕೈಫ್ ಮತ್ತು ವಿಕ್ಕಿ ಮದುವೆ ಡಿಸೆಂಬರ್ 9ಕ್ಕೆ ನಡೆಯಿತು. ಅವರ ಮದುವೆ, ರಾಜಸ್ಥಾನದ ಬರ್ವಾರ ಕೋಟೆಯ ಸಿಕ್ಸ್ ಸೆನ್ಸಸ್ ರೆಸಾರ್ಟ್ನಲ್ಲಿ ನಡೆಯಿತು.
ಇದನ್ನೂ ಓದಿ: Salman Khan: ಆರ್ಥಿಕ ಸಂಕಷ್ಟದಲ್ಲಿ ಬಾಲಿವುಡ್ ಬ್ಯಾಡ್ ಬಾಯ್?
3 ದಿನಗಳ ಕಾಲ ಅತ್ಯಂತ ಖಾಸಗಿಯಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ವಧು ಮತ್ತು ವರರ ಹತ್ತಿರದ ಬಂಧುಗಳು ಮತ್ತು ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಬಾಲಿವುಡ್ನಿಂದ ನಿರ್ದೇಶಕ ಕಬೀರ್ ಖಾನ್ ಮತ್ತು ಅವರ ಪತ್ನಿ ಮಿನಿ ಮಾಥುರ್, ನೇಹಾ ಧೂಪಿಯಾ ಮತ್ತು ಆಕೆಯ ಪತಿ ಅಂಗದ್ ಬೇಡಿ ಮದುವೆಯಲ್ಲಿ ಭಾಗವಹಿಸಿದ್ದರು.
ರಿಯಾದ್ಗೆ ಪ್ರಯಾಣ
ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ, ಸಲ್ಮಾನ್ ಖಾನ್ ಹೋಗುತ್ತಾರೆಯೇ ಇಲ್ಲವೇ ಎಂಬುದರ ಕುರಿತು ಅಭಿಮಾನಿಗಳ ನಡುವೆ ವಾರಗಟ್ಟಲೆ ಚರ್ಚೆ ನಡೆದಿತ್ತು. ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡತೊಡಗಿದ್ದರಿಂದ, ವದಂತಿ ಪ್ರಿಯರಲ್ಲಿ ಇನ್ನಷ್ಟು ಉತ್ಸಾಹ ಹೆಚ್ಚಿತ್ತು.
ಆದರೆ, ಅದು ನಿಜಕ್ಕೂ ವದಂತಿಯೇ ಆಗಿತ್ತು. ಏಕೆಂದರೆ ಸಲ್ಮಾನ್ ಖಾನ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡದ್ದು, ಸವಾಯಿ ಮಾಧೋಪುರ್ವುರ್ಗೆ ಹೊಗುವುದಕ್ಕಲ್ಲ, ಬದಲಿಗೆ ರಿಯಾದ್ಗೆ ಪ್ರಯಾಣ ಬೆಳೆಸಲು. ಸೌದಿ ಅರೇಬಿಯಾದ ರಾಜಧಾನಿಯಲ್ಲಿ ದಬಾಂಗ್ ಟೂರ್ ರೀಲೋಡೆಡ್ ಕಾರ್ಯಕ್ರಮದಲ್ಲಿ ಸಲ್ಮಾನ್ ಭಾಗವಹಿಸಲಿದ್ದರು.
ವರ್ಷದ ಮದುವೆ ಎಂಬ ಹೆಗ್ಗಳಿಕೆ
ಸಲ್ಮಾನ್ ಖಾನ್ ಅಥವಾ ಬಾಲಿವುಡ್ನ ದಿಗ್ಗಜರು ಭಾಗವಹಿಸದಿದ್ದರೂ, ಚೆಲುವೆ ಕತ್ರೀನಾರ ಮದುವೆ ವರ್ಷದ ಮದುವೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂಬುವುದರಲ್ಲಿ ತಪ್ಪಿಲ್ಲ ಅಲ್ಲವೇ? ಕ್ಯಾಟ್ – ವಿಕ್ಕಿ ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿವೆ. ಸ್ವತಃ ವಿಕ್ಕಿ ಮತ್ತು ಕತ್ರೀನಾ ತಮ್ಮ ಮದುವೆಯ ಪೋಟೋಗಳನ್ನು ಪೋಸ್ಟ್ ಮಾಡಿದ್ದು, ಆ ಪೋಸ್ಟ್ಗೆ ಇಬ್ಬರೂ ಕೂಡ, “ ನಮ್ಮನ್ನು ಈ ಕ್ಷಣಕ್ಕೆ ಕರೆದು ತಂದ ಎಲ್ಲದಕ್ಕೂ ನಮ್ಮ ಹೃದಯದಲ್ಲಿ ಪ್ರೀತಿ ಮತ್ತು ಕೃತಜ್ಞತೆ ಮಾತ್ರ ಇದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಕೋರಿ, ನಾವು ಈ ನೂತನ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತೇವೆ” ಎಂದು ಅಡಿಬರಹ ನೀಡಿದ್ದಾರೆ.
ಇದನ್ನೂ ಓದಿ: Katrina Kaif - Vicky Kaushal : ಗ್ರ್ಯಾಂಡ್ ವೆಡ್ಡಿಂಗ್ ಆಯ್ತು.. ಈಗ ಅದ್ಧೂರಿ ರಿಸೆಪ್ಷನ್ಗೆ ಸಿದ್ಧತೆ!
ಕತ್ರೀನಾ ಕೈಫ್ ಮದುವೆಯಲ್ಲಿ ಕೆಂಪು ಬಣ್ಣದ ಲೆಹಂಗಾ ಧರಿಸಿ ಮದುವಣಗಿತ್ತಿಯಾಗಿ ಮಿಂಚುತ್ತಿದ್ದರೆ, ವಿಕ್ಕಿ ಕೌಶಲ್ ಅತ್ಯಂತ ಮನೋಹರ ಶೇರ್ವಾನಿ ಧರಿಸಿದ್ದರು. ಅವರ ಮದುವೆಯ ಉಡುಪನ್ನು ಸೆಲೆಬ್ರಿಟಿ ಫ್ಯಾಷನ್ ವಸ್ತ್ರ ವಿನ್ಯಾಸಕ ಸಬ್ಯಸಾಚಿ ವಿನ್ಯಾಸ ಮಾಡಿದ್ದರು. ಇದೇ ಸಂದರ್ಭದಲ್ಲಿ, ಕತ್ರೀನಾ ತಮ್ಮ ಇನ್ಸ್ಟಾಗ್ರಾಂ ಡಿಸ್ಪ್ಲೇ ಫೋಟೋವನ್ನು ಕೂಡ ಬದಲಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ