news18-kannada Updated:July 21, 2020, 3:03 PM IST
ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಬಾಲಿವುಡ್ನ ಬ್ಯಾಡ್ ಬಾಯ್ ಎಂದೇ ಖ್ಯಾತರಾದ ನಟ. ಒಂದಿಲ್ಲೊಂದು ವಿವಾದಗಳಿಂದಾಗಿ ಸುದ್ದಿಯಲ್ಲಿರುತ್ತಾರೆ. ಸುಶಾಂತ್ ಮೃತಪಟ್ಟಾಗಿನಿಂದ ಸಲ್ಮಾನ್ ಖಾನ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಸುಶಾಂತ್ ಸಾವಿಗೆ ಸಲ್ಮಾನ್ ಖಾನ್ ಸಹ ಕಾರಣ ಎಂದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿಟ್ಟು ಹೊರ ಹಾಕುತ್ತಿದ್ದಾರೆ.
ಸಲ್ಮಾನ್ ಖಾನ್ ಲಾಕ್ಡೌನ್ನಲ್ಲಿ ಪನ್ವೇಲ್ನಲ್ಲಿರುವ ತೋಟದ ಮನೆಯಲ್ಲೇ ಇದ್ದು, ಅಲ್ಲಿ ಕುದುರೆಗಳ ಆರೈಕೆ ಹಾಗೂ ಸೈಕ್ಲಿಂಗ್ ಅಂತ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಜಾಕ್ವೆಲಿನ್ ಜೊತೆ ಆಲ್ಬಂ ಹಾಡಿನ ಚಿತ್ರೀಕರಣ ಸಹ ಮುಗಿಸಿದ್ದಾರೆ. ಇಷ್ಟೇ ಅಲ್ಲ ತಮ್ಮ ಹೊಲದಲ್ಲಿ ಕೃಷಿ ಮಾಡುತ್ತಿರುವ ಕೆಲವು ವಿಡಿಯೋ ಹಾಗೂ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.
View this post on Instagram
Farminggg
A post shared by Salman Khan (@beingsalmankhan) on
ಸಲ್ಮಾನ್ ಖಾನ್ ಯಾವಾಗ ಕೃಷಿ ಸಂಬಂಧಿತ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ಪೋಸ್ಟ್ ಮಾಡಲು ಆರಂಭಿಸಿದರೋ, ಆಗಿನಿಂದ ನೆಟ್ಟಿಗರು ಮತ್ತೆ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಇದನ್ನೂ ಓದಿ: Prem: ನೆನಪಿರಲಿ ಪ್ರೇಮ್ಗೆ ಜಾಕ್ ಪಾಟ್ ಹೊಡೆಯಲಿದೆಯಂತೆ: ಅದಕ್ಕೆ ಕಾರಣ ಏನು ಗೊತ್ತಾ..?
ಇತ್ತೀಚೆಗಷ್ಟೆ ಮೈಗೆಲ್ಲ ಮಣ್ಣು ಮೆತ್ತಿಕೊಂಡ ಫೋಟೋ ಪೋಸ್ಟ್ ಮಾಡಿದ್ದ ಸಲ್ಮಾನ್, ರೈತರನ್ನು ಗೌರವಿಸಿ ಎಂದು ಶೀರ್ಷಿಕೆ ಕೊಟ್ಟಿದ್ದರು. ಈ ಫೋಸ್ಟ್ ಸಾಕಷ್ಟು ಟ್ರೋಲ್ ಆಗಿತ್ತು. ಇದಾದ ನಂತರ ಮತ್ತೆ ತಮ್ಮ ಹೊಲದಲ್ಲಿ ಭತ್ತದ ನಾಟಿ ಮಾಡಿದ ಹಾಗೂ ಟ್ರ್ಯಾಕ್ಟರ್ ಹತ್ತು ಉಳುಮೆ ಮಾಡಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಈಗ ಈ ವಿಡಿಯೋಗಳಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ ನಿಜ. ಆದರೆ ಸಾಕಷ್ಟು ಮಂದಿ ನೆಟ್ಟಿಗರು ಮಾತ್ರ ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. ಇಂತಹ ವಿಡಿಯೋಗಳನ್ನು ಪೋಸ್ಟ್ ಮಾಡಿ ಓವರ್ ಆ್ಯಕ್ಷನ್ ಮಾಡಬೇಡಿ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಮತ್ತೆ ಕೆಲವರು ಕೆಲವೇ ನಿಮಿಷಗಳ ವಿಡಿಯೋ ಹಾಕಲು ಇದನ್ನೆಲ್ಲ ಮಾಡಬೇಕಾ ಎನ್ನುತ್ತಿದ್ದಾರೆ. ಇದು ರೈತರಿಗೆ ಮಾಡುವ ಅವಮಾನ ಅಂತ ಮತ್ತೆ ಕೆಲವು ಗರಂ ಆಗಿದ್ದಾರೆ.
ಸಲ್ಮಾನ್ ಖಾನ್ ಯಾವ ಕಾರಣಕ್ಕೆ ಈ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೋ, ಆದರೆ ಟ್ರೋಲಿಗರು ಮಾತ್ರ ಹಬ್ಬ ಮಾಡುತ್ತಿದ್ದಾರೆ. ಇನ್ನು ಅಭಿಮಾನಿಗಳು ಸಲ್ಮಾನ್ ಮಾಡುತ್ತಿರುವ ಕೆಲಸದಿಂದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.
ಇದನ್ನೂ ಓದಿ: Nithiin Marriage: ಕೊನೆಗೂ ಫಿಕ್ಸ್ ಆಯ್ತು ಟಾಲಿವುಡ್ ನಟ ನಿತಿನ್ ಮದುವೆ ದಿನಾಂಕ: ಕೆಸಿಆರ್ ಮನೆ ತಲುಪಿತು ಲಗ್ನ ಪತ್ರಿಕೆ..!
Published by:
Anitha E
First published:
July 21, 2020, 3:03 PM IST