ಸಾಮಾನ್ಯವಾಗಿ ನಮ್ಮಲ್ಲಿ ಜನರು ತಮ್ಮ ಪಕ್ಕದಲ್ಲಿ ಇರುವ ವ್ಯಕ್ತಿಯು ಅವರಿಗಿಂತಲೂ ಸ್ವಲ್ಪ ಹೆಚ್ಚಿಗೆ ದುಡ್ಡು ಮಾಡಿದರೆ ಅಥವಾ ಅದೇ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದರೆ, ಅದನ್ನು ನೋಡಿ ಎಷ್ಟೋ ಬಾರಿ ಹೊಟ್ಟೆಕಿಚ್ಚು ಪಡೋದನ್ನು ನಾವೆಲ್ಲಾ ನೋಡಿರುತ್ತೇವೆ. ಅಷ್ಟೇ ಏಕೆ ಇಬ್ಬರು ವ್ಯಕ್ತಿಗಳು ಒಂದೇ ಕ್ಷೇತ್ರದಲ್ಲಿ ಅಥವಾ ಒಂದೇ ಕಂಪನಿಯಲ್ಲಿ (Company) ಕೆಲಸ ಮಾಡುತ್ತಿದ್ದಾಗ ಸಹ ಒಬ್ಬರ ಏಳಿಗೆ ಮತ್ತು ಯಶಸ್ಸು ಸಾಮಾನ್ಯವಾಗಿ ಇನ್ನೊಬ್ಬರಿಗೆ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ ಬಿಡಿ, ಏಕೆಂದರೆ ಕೆಲವರು ಬೇರೆಯವರ ಯಶಸ್ಸಿನ, ಏಳಿಗೆಯ ಬಗ್ಗೆ ಅಷ್ಟಾಗಿ ತಲೆ ಕೆಡೆಸಿಕೊಳುವುದಿಲ್ಲ. ಬದಲಾಗಿ ಎಲ್ಲರ ಯಶಸ್ಸನ್ನು (Success) ಸಂಭ್ರಮಿಸುವ ಮನಸ್ಸು ಸಹ ಇನ್ನೂ ಕೆಲವರಿಗೆ ಇರುತ್ತದೆ.
ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಈ ಸಿನೆಮಾರಂಗದಲ್ಲಿ ಒಬ್ಬ ನಟ ತುಂಬಾನೇ ಜನಪ್ರಿಯವಾಗುತ್ತಿದ್ದರೇ, ದೊಡ್ಡ ನಟರು ಏನೋ ಒಂದು ಮಸಲತ್ತು ಮಾಡಿ ಆ ಬೆಳೆಯುತ್ತಿರುವ ನಟನಿಗೆ ಯಾವುದೇ ಚಿತ್ರಗಳು ಸಿಗದಂತೆ ಮಾಡಿ ಅವರ ಕರಿಯರ್ ಅನ್ನೇ ಹಾಳು ಮಾಡುತ್ತಾರೆ ಅನ್ನೋ ಮಾತುಗಳು ಸದಾ ಹರಿದಾಡುತ್ತಲೇ ಇರುತ್ತವೆ.
ಬಾಲಿವುಡ್‌ನಲ್ಲಂತೂ ಈ ಖಾನ್‌ಗಳದ್ದೇ ಕಾರುಬಾರು
ಅದರಲ್ಲೂ ಈ ಬಾಲಿವುಡ್ ನಲ್ಲಿ ಖಾನ್ ಗಳದ್ದೆ ಕಾರುಬಾರು ಅಂತ ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ. ಎಂದರೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಅಂತಹ ಜನಪ್ರಿಯ ನಟರು ಸುಮಾರು ಮೂರು ದಶಕಗಳಿಂದ ಉದ್ಯಮವನ್ನು ಆಳುತ್ತಿದ್ದಾರೆ ಮತ್ತು ಇನ್ನೂ, ಅವರ ಸ್ಟಾರ್ಡಮ್ ಸ್ವಲ್ಪವೂ ಸಹ ಕಡಿಮೆಯಾಗಿಲ್ಲ.
ಇದನ್ನೂ ಓದಿ: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಅದರಲ್ಲೂ ಈ ಮೂವರು ಖಾನ್ ಗಳಲ್ಲಿ ನಟ ಸಲ್ಮಾನ್ ಖಾನ್ ತುಂಬಾನೇ ಆರಾಮಾಗಿ ಕೆಲಸ ಮಾಡಿಕೊಂಡು ಹೋಗುವ ಮನೋಭಾವನೆಯನ್ನು ಹೊಂದಿರುವವರು. ಇದೇ ವ್ಯಕ್ತಿತ್ವಕ್ಕೆ ಸಲ್ಮಾನ್ ಖಾನ್ ಅವರಿಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ.
ಸಲ್ಮಾನ್ ಬಾಲಿವುಡ್ ನ ಬ್ಯಾಡ್ ಬಾಯ್ ಅಂತೆ
ಆದರೆ ಈ ಹಿಂದೆ, ಸಲ್ಮಾನ್ ಖಾನ್ ಬಾಲಿವುಡ್ ನ ಬ್ಯಾಡ್ ಬಾಯ್, ಅವರು ತಮ್ಮ ಜೊತೆ ಯಾರು ಚೆನ್ನಾಗಿರುವುದಿಲ್ಲವೋ, ಅವರನ್ನು ಸಿನೆಮಾರಂಗದಲ್ಲಿ ಮೂಲೆ ಗುಂಪು ಮಾಡುತ್ತಾರೆ ಅನ್ನೋ ಮಾತುಗಳು ಸಹ ತುಂಬಾನೇ ಕೇಳಿ ಬಂದಿದ್ದವು. ಇವರನ್ನು ಎದುರು ಹಾಕ್ಕೊಂಡಿರುವ ನಟರ ಕರಿಯರ್ ಅನ್ನು ಸರ್ವನಾಶ ಮಾಡಿ ಬಿಡುತ್ತಾರೆ ಅಂತೆಲ್ಲಾ ಆರೋಪಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ಪತಿ ಜೊತೆಗಿನ ಫೋಟೋ ಶೇರ್ ಮಾಡಿದ ಶುಭಾ ಪೂಂಜಾ, ಗುಡ್‌ನ್ಯೂಸ್ ಇದೆಯಾ ಎಂದ ಫ್ಯಾನ್ಸ್!
ನಟರಾದ ವಿವೇಕ್ ಒಬೆರಾಯ್ ಮತ್ತು ಅರಿಜಿತ್ ಸಿಂಗ್ ಅವರಂತಹ ಹೆಸರುಗಳನ್ನು ಒಳಗೊಂಡಂತೆ ನಟರ ಕರಿಯರ್ ಅನ್ನು ಹಾಳು ಮಾಡಿದ್ದಾರೆ ಅಂತ ಹೇಳುವ ಪಟ್ಟಿ ತುಂಬಾನೇ ಉದ್ದವಾಗಿದೆ. ಆದರೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ನಟ ಸಲ್ಮಾನ್ ಮಾತ್ರ ಅನೇಕ ವರ್ಷಗಳಿಂದ ಕೇಳಿ ಬರುತ್ತಿರುವ ಇಂತಹ ಎಲ್ಲಾ ಆರೋಪಗಳ ಬಗ್ಗೆ ಮೌನವಾಗಿದ್ದರು.
ಇಂತಹ ಆರೋಪಗಳಿಗೆಲ್ಲಾ ಸಲ್ಮಾನ್ ಏನಂತ ಉತ್ತರ ಕೊಟ್ರು ನೋಡಿ
ಇತ್ತೀಚೆಗೆ ಇಂಡಿಯಾ ಟಿವಿಯ ‘ಆಪ್ ಕಿ ಅದಾಲತ್’ ನಲ್ಲಿ ಮಾತನಾಡುವಾಗ, ಸಲ್ಮಾನ್ ಖಾನ್ ತಮ್ಮ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದರಿಂದ ಪೂರ್ಣ ಪ್ರಾಮಾಣಿಕ ಮೋಡ್ ನಲ್ಲಿ ಕಾಣಿಸಿಕೊಂಡರು. ಅಂತಹ ಒಂದು ವಿಷಯವನ್ನು ನಿರೂಪಕ ರಜತ್ ಶರ್ಮಾ ಅವರು ಎತ್ತಿಕೊಂಡು ಸಲ್ಮಾನ್ ಅವರು ಇತರ ನಟರ ವೃತ್ತಿಜೀವನವನ್ನು ನಾಶಪಡಿಸುತ್ತಿದ್ದಾರೆ ಅಂತ ಆರೋಪಗಳು ಕೇಳಿ ಬರುತ್ತಿವೆ ಅಂತ ಹೇಳಿದ್ದಕ್ಕೆ, ನಟ ಸಲ್ಮಾನ್ ಅವರು "ಸರ್ ನಾನು ಇಂಡಸ್ಟ್ರಿ ಜೊತೆ ಅಷ್ಟಾಗಿ ಸಂಪರ್ಕ ಹೊಂದಿಲ್ಲ. ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದು, ಶೂಟಿಂಗ್ ಮಾಡುವುದು ಅಷ್ಟೇ ನನಗೆ ಗೊತ್ತು. ನಾನು ದಿನಾ ಪಾರ್ಟಿಗಳಿಗೆ ಹೋಗುವುದಿಲ್ಲ ಚಿತ್ರೋದ್ಯಮದಲ್ಲಿ ನನಗೆ ತುಂಬಾನೇ ಕಡಿಮೆ ಸ್ನೇಹಿತರಿದ್ದಾರೆ ಮತ್ತು ಉಳಿದವರು ನನಗಿಂತ ಹಿರಿಯವರು" ಅಂತ ಹೇಳಿದರು.
ಸಲ್ಮಾನ್ ಖಾನ್ ಅವರು "ಅಂತಹ ಬುದ್ದಿ ನನಗಿಲ್ಲ ಸಾರ್" ಎಂದು ಹೇಳುವ ಮೂಲಕ ಯಾರೊಬ್ಬ ನಟನ ಮೇಲೂ ಯಾವುದೇ ರೀತಿಯ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದರು. ಜನರು ಕುಡಿದು 'ನಾನು ಇವನನ್ನು ಬಿಡುವುದಿಲ್ಲ' ಅಂತ ಹೇಳುತ್ತಾರೆ. ಆದರೆ ನಾನು ಕುಡಿದರೆ, 'ಬಿಟ್ಟು ಬಿಡು ಇದನ್ನೆಲ್ಲಾ’ ಅಂತ ಹೇಳುತ್ತೇನೆ. ನನ್ನ ದೇಹದಲ್ಲಿ ಆ ಸೇಡಿನ ಮೂಳೆ ಇಲ್ಲ, ಜೀವನ ತುಂಬಾನೇ ಚಿಕ್ಕದು, ದ್ವೇಷ ಮಾಡೋದಕ್ಕೆ ಸಮಯವಿಲ್ಲ ಅಂತ ಸಲ್ಮಾನ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ