ಸಲ್ಲು-ದಿಶಾ ಸ್ಲೋ ಮೋಷನ್...​ ಹಾಡಿಗೆ ಸಿಗುತ್ತಿದೆ ಭರ್ಜರಿ ಪ್ರತಿಕ್ರಿಯೆ..!

ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಲು ಮಾಡಿರುವ ಸ್ಲೋ ಮೋಷನ್​ ಸಿಕ್ಕಾಪಟ್ಟೆ ಕ್ರೇಜ್​ ಸೃಷ್ಟಿಸಿದೆ. ಅದರಲ್ಲೂ ತುಂಬಾ ಯಂಗ್​ ಆಗಿ ಕಾಣಿಸಿಕೊಂಡು ದಿಶಾ ಪಟಾಣಿ ಜತೆ ಹಾಕಿರುವ ಸ್ಟೆಪ್ಸ್​ ಅಭಿಮಾನಿಗಳ ಹೃದಯ ಕದ್ದಿದೆ.

Anitha E | news18
Updated:April 27, 2019, 1:10 PM IST
ಸಲ್ಲು-ದಿಶಾ ಸ್ಲೋ ಮೋಷನ್...​ ಹಾಡಿಗೆ ಸಿಗುತ್ತಿದೆ ಭರ್ಜರಿ ಪ್ರತಿಕ್ರಿಯೆ..!
ಭಾರತ್​ ಸಿನಿಮಾದಲ್ಲಿ ಸಲ್ಮಾನ್​ ಹಾಗೂ ದಿಶಾ ಪಟಾಣಿ
  • News18
  • Last Updated: April 27, 2019, 1:10 PM IST
  • Share this:
ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಭಾರತ್'. ಕತ್ರಿನಾ ಕೈಫ್​ ಹಾಗೂ ದಿಶಾ ಪಟಾಣಿ ಅಭಿನಯದ ಈ ಸಿನಿಮಾದ ಮೊದಲ ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ.

ಇದನ್ನೂ ಓದಿ: ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಲುಗೆ ಜೋಡಿಯಾಗಲಿದ್ದಾರಾ ಟಾಲಿವುಡ್​ ಲಿಲ್ಲಿ ರಶ್ಮಿಕಾ ..!

ಸಲ್ಲು-ದಿಶಾ ಪಟಾಣಿ ಸ್ಟೆಪ್​ ಹಾಕಿರುವ 'ಸ್ಲೋ ಮೋಷನ್​...' ಹಾಡಿಗೆ ಜನ ಫಿದಾ ಆಗಿದ್ದಾರೆ.  ವಿಶೇಷ ಅಂದರೆ ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 1 ಕೋಟಿ 80 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ ಈ ಹಾಡು.ಸದ್ಯ ಈ ಹಾಡಿನ ವೀಕ್ಷಣೆ 2 ಕೋಟಿ 40 ಲಕ್ಷವಾಗಿದ್ದು, ಟ್ರೆಂಡಿಂಗ್​ನಲ್ಲಿ 8ನೇ ಸ್ಥಾನದಲ್ಲಿದೆ. ಈ ಹಾಡಿನಲ್ಲಿ ಸಲ್ಮಾನ್​ ತುಂಬಾ ಯಂಗ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೊದಲು ಪ್ರಿಯಾಂಕಾ ಚೋಪ್ರಾ ಅಭಿನಯಿಸಬೇಕಿತ್ತು. ಆದರೆ ಆಗ ಪ್ರಿಯಾಂಕಾ ವಿವಾಹ ಫಿಕ್ಸ್​ ಆದ ಕಾರಣಕ್ಕೆ ಆ ಸ್ಥಾನವನ್ನು ಕತ್ರಿನಾ ಕೈಫ್ ತುಂಬಿದ್ದಾರೆ.

ಇದನ್ನೂ ಓದಿ: Avengers Endgame Leaked: 'ಅವೆಂಜರ್ಸ್​: ಎಂಡ್​ ಗೇಮ್​' ಸಿನಿಮಾ ಲೀಕ್​ ಆದರೂ ಬಾಕ್ಸಾಫಿಸ್ ಗಳಿಕೆಗೆ ಆಗೊಲ್ಲ ಧಕ್ಕೆ; ಕಾರಣ?

ಸದ್ಯ ಈ ಸಿನಿಮಾ ಟ್ರೈಲರ್ ಸಹ ಬಿಡುಗಡೆಯಾಗಿದ್ದು, ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಚಿತ್ರದಲ್ಲಿ 22 ವರ್ಷದಿಂದ 75ರ ವರ್ಷದ​ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. 

PHOTOS: ಹಾರರ್​ ಅವತಾರದಲ್ಲಿ ಸ್ಯಾಂಡಲ್​ವುಡ್​ ಸ್ವೀಟಿ ರಾಧಿಕಾ ಕುಮಾರಸ್ವಾಮಿ

First published: April 27, 2019, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading