• Home
  • »
  • News
  • »
  • entertainment
  • »
  • Salman Khan: ಈ ಗಾಯಕಿಯನ್ನು ಸಲ್ಮಾನ್ ಖಾನ್ ಅಭಿಮಾನಿಗಳು ಕೆಟ್ಟದಾಗಿ ಕರೆದ್ರು, ಆಕೆ ಎಲ್ರ ಗ್ರಹಚಾರ ಬಿಡಿಸಿದ್ದಾಳೆ!

Salman Khan: ಈ ಗಾಯಕಿಯನ್ನು ಸಲ್ಮಾನ್ ಖಾನ್ ಅಭಿಮಾನಿಗಳು ಕೆಟ್ಟದಾಗಿ ಕರೆದ್ರು, ಆಕೆ ಎಲ್ರ ಗ್ರಹಚಾರ ಬಿಡಿಸಿದ್ದಾಳೆ!

ಸೊನಾ ಮೊಹಪಾತ್ರ ಮತ್ತು ಸಲ್ಮಾನ್ ಖಾನ್

ಸೊನಾ ಮೊಹಪಾತ್ರ ಮತ್ತು ಸಲ್ಮಾನ್ ಖಾನ್

ಸಾಜಿದ್ ಖಾನ್ ಬಿಗ್‌ಬಾಸ್ ಅಂಗಣವನ್ನು ಪ್ರವೇಶಿಸಿರುವಲ್ಲಿಂದ ಜನರು ಸಾಜಿದ್‌ಗೆ ಪೂರ್ಣ ಬೆಂಬಲವನ್ನು ನೀಡುತ್ತಿದ್ದು ಆತ ಲೈಂಗಿಕ ಕಿರುಕುಳವನ್ನು ನಡೆಸಿಲ್ಲ ಹಾಗೂ ಇದು ಅವರ ಧಿಮಾಕಿನ ನಡವಳಿಕೆ ಅಷ್ಟೇ ಎಂದೇ ತೀರ್ಪನ್ನು ನೀಡಿದ್ದು, ಜನರ ಈ ಪ್ರತಿಕ್ರಿಯೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಆಘಾತಗೊಂಡಿದ್ದಾರೆ. 

ಮುಂದೆ ಓದಿ ...
  • Share this:

ಒಂಭತ್ತು ಮಹಿಳೆಯರಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಸಾಜಿದ್ ಖಾನ್‌ಗೆ (Sajid Khan) ಬಿಗ್‌ಬಾಸ್ 16 ತಂಡವು ವೇದಿಕೆಯನ್ನೊದಗಿಸಿದೆ. ಸಾಜಿದ್ ಖಾನ್ ಬಿಗ್‌ಬಾಸ್ ಅಂಗಣವನ್ನು ಪ್ರವೇಶಿಸಿರುವಲ್ಲಿಂದ ಜನರು ಸಾಜಿದ್‌ಗೆ ಪೂರ್ಣ ಬೆಂಬಲವನ್ನು ನೀಡುತ್ತಿದ್ದು ಆತ ಲೈಂಗಿಕ ಕಿರುಕುಳವನ್ನು (Sexual Harassment) ನಡೆಸಿಲ್ಲ ಹಾಗೂ ಇದು ಅವರ ಧಿಮಾಕಿನ ನಡವಳಿಕೆ ಅಷ್ಟೇ ಎಂದೇ ತೀರ್ಪನ್ನು ನೀಡಿದ್ದು, ಜನರ ಈ ಪ್ರತಿಕ್ರಿಯೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು (Women's) ಆಘಾತಗೊಂಡಿದ್ದಾರೆ. ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು ಸಾಜಿದ್ ಖಾನ್ ಅವರನ್ನು ಶೋದಿಂದ ತೆಗೆದುಹಾಕುವಂತೆ ಕೋರಿದ್ದಾರೆ. ಪ್ರತಿಯಾಗಿ, ಆಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಾಚಾರ ಬೆದರಿಕೆಗಳು ಬಂದವು.


ಶೋಷಣೆಗೆ ಒಳಗಾದವರ ಪರ ನಿಂತ ಸೋನಾ ಮೊಹಾಪಾತ್ರ
ಹಲವು ವರ್ಷಗಳಿಂದ ಸಲ್ಮಾನ್ ಖಾನ್ ವಿರುದ್ಧ ಧೈರ್ಯದಿಂದ ಮಾತನಾಡುತ್ತಿರುವ ಅಪರೂಪದ ಸೆಲೆಬ್ರಿಟಿಗಳಲ್ಲಿ ಸೋನಾ ಮೊಹಾಪಾತ್ರ ಕೂಡ ಒಬ್ಬರು. ನಟಿ ಮಂದನಾ ಕರಿಮಿ, ಜಿಯಾ ಖಾನ್, ಶೆರ್ಲಿನ್ ಚೋಪ್ರಾ ಮತ್ತು #MeToo ಆರೋಪಿ ಸಾಜಿದ್ ಖಾನ್ ವಿರುದ್ಧ ಮಾತನಾಡಿರುವ ಎಲ್ಲಾ ಮಹಿಳೆಯರನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದಾರೆ.


ಸಾಜಿದ್ ಖಾನ್ ಬಿಗ್ ಬಾಸ್ 16 ರ ಭಾಗವಾಗಿರುವುದು ಹೆಚ್ಚಿನ ಮಹಿಳೆಯರ ಕಣ್ಣು ಕೆಂಪಗಾಗಿಸಿದೆ. ಉರ್ಫಿ ಜಾವೇದ್, ಶೆರ್ಲಿನ್ ಚೋಪ್ರಾ ಮತ್ತು DCW ಮುಖ್ಯಸ್ಥೆ ಸ್ವಾತಿ ಮಲಿವಾಲ್ ಸೇರಿದಂತೆ ಹಲವಾರು ಮಹಿಳೆಯರು ಸಾಜಿದ್ ಅವರನ್ನು ಶೋದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಆದರೆ ಅಭಿಪ್ರಾಯಗಳನ್ನು ಸಲ್ಲಿಸಿರುವ ಹಲವಾರು ಮಹಿಳೆಯರು ಕೊಲೆ ಹಾಗೂ ಅತ್ಯಾಚಾರ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ.


ಇದನ್ನೂ ಓದಿ: Kantara-Actor Chetan: ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದ ನಟ ಚೇತನ್! ರಿಷಬ್ ಶೆಟ್ಟಿ ಹೇಳಿದ್ದೇನು?

ಬಾಲಿವುಡ್ ಅಂಗಳದಲ್ಲಿ ಸಲ್ಮಾನ್ ಖಾನ್ ಅನೇಕ ಆರೋಪಗಳನ್ನು ಹೊತ್ತಿರುವವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಟೀಕಿಸಿರುವ ಸೋನಾ, ಸಾಜಿದ್ ಖಾನ್‌ನಂತಹ ವ್ಯಕ್ತಿಗೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದು ತಪ್ಪು ಎಂದೇ ವಾದಿಸಿದ್ದಾರೆ. ಇದೇ ಸಮಯದಲ್ಲಿ ಸೋನಾಗೆ ಸಲ್ಮಾನ್ ಖಾನ್ ಅಭಿಮಾನಿಯೊಬ್ಬ ಹಿಜಡಾ ಮುಖದವಳು ಎಂದು ಗೇಲಿ ಮಾಡಿದ್ದು ಗಾಯಕಿ ಅಭಿಮಾನಿಯ ವಿರುದ್ಧ ಛೀಮಾರಿ ಹಾಕಿದ್ದಾರೆ.


ಸಲ್ಮಾನ್ ಖಾನ್ ಅಭಿಮಾನಿಯ ವಿರುದ್ಧ ಛೀಮಾರಿ ಹಾಕಿದ ಗಾಯಕಿ
ಗಾಯಕಿ ಅನು ಮಲಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆಯರಲ್ಲಿ ಒಬ್ಬರಾದ ಗಾಯಕಿ ಸೋನಾ ಮೊಹಾಪಾತ್ರ ಕೂಡ ಬಿಗ್ ಬಾಸ್ 16 ರ ನಿರ್ಧಾರವನ್ನು ಖಂಡಿಸಿದ್ದಾರೆ.


ಈ ಹಿಂದೆ ಇಂಡಿಯಾಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಸೋನಾ ಮೊಹಾಪಾತ್ರ ತಾನು ಯಾರಿಗೂ ಹೆದರದ ಸ್ವತಂತ್ರ ಮಹಿಳೆ ಎಂದು ಹೇಳಿದ್ದಾರೆ ಇನ್ನು ಸಲ್ಮಾನ್ ಖಾನ್‌ನಂತಹ ಭವ್ಯ ಹಿನ್ನಲೆಯಿರುವ ವ್ಯಕ್ತಿಗೂ ತಾನು ಹೆದರುವುದಿಲ್ಲ ಎಂದು ನೇರವಾಗಿಯೇ ತಿಳಿಸಿದ್ದಾರೆ. ತಾನು ನಾನು ತುಂಬಾ ಶ್ರಮಜೀವಿ ಪ್ರತಿಭಾವಂತೆ ಎಂದು ಸೋನಾ ಹೇಳಿಕೊಂಡಿದ್ದು ನನ್ನ ವೃತ್ತಿಯನ್ನು ಯಾರೂ ಹಾಳುಮಾಡಬಹುದು ಎಂದು ನಾನು ಭಾವಿಸುವುದಿಲ್ಲ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:  Adipurush: ಟ್ರೋಲ್ ಆದ ಆದಿಪುರುಷ್ ಚಿತ್ರದ ಬಿಗ್ ಅಪ್​ಡೇಟ್ ರಿವೀಲ್!

ಸೋನಾ ಮೊಹಾಪಾತ್ರ ಅವರು ಸಲ್ಮಾನ್ ಖಾನ್ ಅವರನ್ನು ಬೆಂಬಲಿಸುತ್ತಿರುವ ನಟಿಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿರೀಕ್ಷೆಯಂತೆ, ಸಲ್ಮಾನ್ ಖಾನ್ ಅಭಿಮಾನಿಗಳು ಸೋನಾ ಮೊಹಾಪಾತ್ರ ಅವರನ್ನು ಹಿಮ್ಮೆಟ್ಟಿಸುವ ಕಾಮೆಂಟ್‌ಗಳನ್ನು ಹಾಕುವುದು ಮತ್ತು ಕಾಮೆಂಟ್ ವಿಭಾಗದಲ್ಲಿ ತಮ್ಮ ಸೂಪರ್‌ಸ್ಟಾರ್ ಅನ್ನು ಸಮರ್ಥಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಈ ಮಧ್ಯೆ, ಮತ್ತೊಬ್ಬ ನಟಿ ದಿಯಾ ಔರ್ ಬಾತಿ ಖ್ಯಾತಿಯ ಕನಿಷ್ಕಾ ಸೋನಿ ಮುಂದೆ ಬಂದು ಸಾಜಿದ್ ಖಾನ್ ಮೇಲೆ #MeToo ಆರೋಪ ಮಾಡಿದ್ದಾರೆ. ಚಿತ್ರ ನಿರ್ಮಾಪಕ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವುದಾಗಿ ಆಕೆ ದೂರಿದ್ದಾರೆ.

Published by:Ashwini Prabhu
First published: