ಸಲ್ಲು ಭಾಯ್(Sallu Bhai) ಅಂದರೆ ಬಾಲಿವುಡ್(Bollywood)ನಲ್ಲಿ ಒಂದು ಗತ್ತು ಇದೆ. ಅದು ಯಾವತ್ತಿಗೂ ಕಡಿಮೆಯಾಗಲ್ಲ. ಬಾಲಿವುಡ್ನ ಬಾಕ್ಸಾಫೀಸ್ ಸುಲ್ತಾನ(Bollywood Box Office Sultan) ಯಾರು ಅಂತ ಎಲ್ಲರಿಗೂ ಗೊತ್ತು. ಅವರ ಸಿನಿಮಾ ರಿಲೀಸ್ ಆಯ್ತು ಅಂದರೆ, ಅಲ್ಲಿ ಕೋಟಿ ಕೋಟಿ ಬ್ಯುಸಿನೆಸ್ ಆಗುತ್ತೆ. ಸಿನಿಮಾ ಹಿಟ್ ಆಗಲಿಲ್ಲ ಅಂದರೂ, ಯಾವ ನಿರ್ಮಾಪಕರಿಗೂ ಮೋಸ ಆಗುವುದಿಲ್ಲ. ಯಾಕೆ ಗೊತ್ತಾ? ಸಲ್ಮಾನ್ ಖಾನ್(Salman Khan) ಎಂಬ ಹೆಸರು ಇದ್ದರೆ ಸಾಕು ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುತ್ತಾರೆ. ಅದು ಸಲ್ಮಾನ್ ಖಾನ್ ಅವರಿಗೆ ಇರುವ ತಾಕತ್ತು. ಇತ್ತೀಚೆಗೆ ಸಲ್ಮಾನ್ ಖಾನ್ 56ನೇ ವಂಸತಕ್ಕೆ ಕಾಲಿಟ್ಟಿದ್ದರು. ಅದಕ್ಕಿಂತ ಹೆಚ್ಚಾಗಿ ಸಲ್ಮಾನ್ ಖಾನ್ಗೆ ಬರ್ತ್ಡೇ ಹಿಂದಿನ ದಿನ ಅವರಿಗೆ ಹಾವು ಕಚ್ಚಿ(Snake Bite)ತ್ತು. ಆಸ್ಪತ್ರೆಗೆ ದಾಖಲಾಗಿದ್ದಾರು. ಈ ವಿಚಾರ ಸಖತ್ ಸುದ್ದಿಯಾಗಿತ್ತು. ಇದೀಗ ಇವರ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸಲ್ಮಾನ್ ಖಾನ್ರ ಈ ವಿಡಿಯೋವನ್ನು ಅವರ ಅಭಿಮಾನಿಗಳು ನಾ ಮುಂದೆ, ತಾ ಮುಂದೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅದ್ಯಾವುದಪ್ಪಾ ಆ ವಿಡಿಯೋ ಅಂತ ಕೇಳುತ್ತೀರಾ? ಇಲ್ಲಿದೆ ನೋಡಿ
ಆಟೋ ಏರಿ ಹೊರಟ ಸಲ್ಮಾನ್ ಖಾನ್!
ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯ ಪನ್ವೇಲ್ ನ ತಮ್ಮ ಫಾರ್ಮ್ ಹೌಸ್ ಗೆ ಸಲ್ಮಾನ್ ಸದಾ ಭೇಟಿ ನೀಡುತ್ತಲೇ ಇರುತ್ತಾರೆ. ಜಾಕ್ವೇಲಿನ್ ಜತೆಗೂಡಿ ಇಲ್ಲಿ ಶೂಟಿಂಗ್ ಸಹ ಮಾಡಿದ್ದರು. ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಇದೇ ಪ್ರದೇಶದಲ್ಲಿ ಆಟೋ ಓಡಿಸಿದ್ದಾರೆ.ಸ್ಥಳೀಯ ಆಟೋ ಚಾಲಕನ ಬಳಿಯಿಂದ ಆಟೋ ಪಡೆದುಕೊಂಡ ಖಾನ್ ಆಟೋ ಏರಿ ಹೊರಟರು. ಇದನ್ನು ಅಲ್ಲಿಯೇ ಇದ್ದ ಒಬ್ಬರು ವಿಡಿಯೋ ಮಾಡಿ ಹಂಚಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಎಷ್ಟು ಕೋಟಿ ಕೋಟಿ ಹಣ ಇದ್ದರೂ ಸಲ್ಲು ಭಾಯ್ ಅವರ ವ್ಯಕ್ತಿತ್ವ ನೋಡಿದರೆ ಗೊತ್ತಾಗುತ್ತೆ ಅವರು ಎಂಥ ವ್ಯಕ್ತಿ ಎಂದು ಕಮೆಂಟ್ ಮಾಡಿದ್ದಾರೆ.
After bitten by Snake few days back, Actor Salman Khan was spotted driving Auto Rickshaw in Panvel pic.twitter.com/Sf1SIED2kX
— MeghUpdates🚨™ (@MeghBulletin) December 29, 2021
ಇದನ್ನು ಓದಿ : ಬರ್ತ್ಡೇ ಪಾರ್ಟಿಯಲ್ಲಿ ಜೆನಿಲಿಯಾ ಜೊತೆ ಸಲ್ಲು ಭರ್ಜರಿ ಡ್ಯಾನ್ಸ್: ವಿಡಿಯೋ ಸಖತ್ ವೈರಲ್!
ಟ್ರಾಫಿಕ್ ನಡುವೆಯೂ ಆಟೋ ಓಡಿಸಿದ ಸಲ್ಲು!
ಸಲ್ಮಾನ್ ಖಾನ್ ಅವರ ಫಾರ್ಮ್ಹೌಸ್ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋದಲ್ಲಿ ಬಂದಿದ್ದ ಅಭಿಮಾನಿಯೊಬ್ಬನನ್ನು ಭೇಟಿ ಮಾಡಿದ್ದಾರೆ. ಆತ ತನ್ನ ಓಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಕೂಡಲೇ ಆತನ ಮನವಿಗೆ ಸ್ಪಂಧಿಸಿದ ಸಲ್ಲು ಭಾಯ್ ಟ್ರಾಫಿಕ್ ಇದ್ದರೂ ತನ್ನ ಅಭಿಮಾನಿಯ ಆಸೆಯನ್ನು ಪೂರೈಸಿದ್ದಾರೆ. ಆಟೋ ಓಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಇನ್ನೂ ಇದನ್ನು ತೋರಿಸಿಕೊಂಡು ಬಿಲ್ಡಪ್ ತೆಗೆದುಕೊಳ್ಳುವ ಆಲೋಚನೆ ಸಲ್ಮಾನ್ ಖಾನ್ಗೆ ಇರಲಿಲ್ಲ. ಇದನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಸಲ್ಮಾನ್ ಖಾನ್ ಬಾಡಿಗಾರ್ಡ್ ವಿಡಿಯೋ ತೆಗೆಯುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಇದನ್ನು ಓದಿ : ಸಲ್ಲುಭಾಯ್ಗೆ 3 ಬಾರಿ ಕಚ್ಚಿತ್ತಂತೆ ಹಾವು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್!
‘ಪವನ ಪುತ್ರ ಭಾಯ್ಜಾನ್’ ಅವತಾರದಲ್ಲಿ ಸಲ್ಮಾನ್ ಖಾನ್!
ಸಲ್ಮಾನ್ ಖಾನ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಇದನ್ನು ಕೇಳಿದ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ‘ಭಜರಂಗಿ ಭಾಯಿಜಾನ್’ ಸಿನಿಮಾಗೆ ಸೀಕ್ವೆಲ್ ಮಾಡುವ ಬಗ್ಗೆ ಕೆಲವೇ ದಿನಗಳ ಹಿಂದೆ ಸಲ್ಮಾನ್ ಖಾನ್ ಘೋಷಣೆ ಮಾಡಿದ್ದರು. ‘ಆರ್ಆರ್ಆರ್’ (RRR) ಸಿನಿಮಾದ ಪ್ರಚಾರದ ಕಾರ್ಯದ ವೇಳೆ ಅವರು ಆ ಬಗ್ಗೆ ಹೇಳಿಕೊಂಡಿದ್ದರು. ಆ ಚಿತ್ರಕ್ಕೆ ಈಗ ಟೈಟಲ್ ಫಿಕ್ಸ್ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ, ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಈ ಶೀರ್ಷಿಕೆ ಇಟ್ಟಿದ್ದಾರೆ ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ. ‘ಪವನ ಪುತ್ರ ಭಾಯ್ಜಾನ್’ ಟೈಟಲ್ ಫಿಕ್ಸ್ ಆಗಿದ್ದು, ಚಿತ್ರೀಕರಣ ಆರಂಭವಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ