Bollywood: ಸಲ್ಮಾನ್​ ಖಾನ್​ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್, ಇವ್ರ್​ ಫ್ಯಾಮಿಲಿಗೆ ಮದ್ವೆನೇ ಆಗಿಬರಲ್ಲ ಎಂದ ಫ್ಯಾನ್ಸ್​!

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ ಅವರಿಂದ ದೂರ ಆದ ಬಳಿಕ ಇದೀಗ ಸಲ್ಮಾನ್ ಅವರ ಮತ್ತೋರ್ವ ಸಹೋದರ ಸೋಹೈಲ್ ಖಾನ್ ಕೂಡ ಪತ್ನಿಯಿಂದ ದೂರ ಆಗುವ ನಿರ್ಧಾರ ಮಾಡಿದ್ದಾರೆ. 

ಸೋಹೆಲ್​, ಅರ್ಬಾಜ್​, ಸಲ್ಮಾನ್​

ಸೋಹೆಲ್​, ಅರ್ಬಾಜ್​, ಸಲ್ಮಾನ್​

  • Share this:
ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ವಿಭಿನ್ನ ಚಿತ್ರಗಳ ಮೂಲಕ ಮನೆಮಾತಾದವರು. ಕೇವಲ ಚಿತ್ರಗಳು ಮಾತ್ರವಲ್ಲದೇ ರಿಯಾಲಿಟಿ ಶೋ -(Reality Show) ಗಳಲ್ಲಿ ಸಹ ನಿರೂಪಣೆ ಮಾಡುತ್ತಾರೆ.  ಹಾಗೆಯೇ ಅವರು ತಮ್ಮ ಪ್ರೇಮ ಸಂಬಂಧ ಹಾಗೂ ಬ್ರೇಕಪ್ (Breakup) ವಿಚಾರವಾಗಿ ಸಹ ಹೆಚ್ಚು ಸುದ್ದಿಯಲ್ಲಿದ್ದರು. ಇವರ ಜೊತೆ ಒಂದಲ್ಲ ಒಂದು ನಟಿಯರ ಹೆಸರು ತಳುಕು ಹಾಕಿಕೊಂಡಿರುತ್ತೆ. ಆದರೆ, ಸಲ್ಮಾನ್​ ಖಾನ್​  ಇನ್ನೂ ಮದುವೆಯಾಗುವ ಮನಸ್ಸು ಮಾಡಿಲ್ಲ ಅನ್ಸುತ್ತೆ. ಕಾಮಿಡಿ (Comedy) , ಆ್ಯಕ್ಷನ್ (Action) , ಡ್ರಾಮಾ (Drama) ಹೀಗೆ ವಿವಿಧ ಜಾನರ್‌ನಲ್ಲಿ ಸಿನಿಮಾ ಮಾಡಿ, ಎಲ್ಲಾ ರೀತಿಯಲ್ಲಿಯೂ ಯಶಸ್ಸು ಪಡೆದಿರೋ ಸಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಪ್ರಸಿದ್ದರಾಗಿರುವ ಸಲ್ಮಾನ್ ಪೂರ್ತಿ ಹೆಸರು ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್. ಇವರಿಗೆ ಇಬ್ಬರು ಸಹೋದರರು. ಅರ್ಬಾಜ್​ ಖಾನ್ ​, ಸೋಹೈಲ್​ ಖಾನ್​. ಇವರಿಬ್ಬರು ಸಿನಿಮಾ ರಂಗದಲ್ಲೇ ಗುರುತಿಸಿಕೊಂಡಿದ್ದಾರೆ. ಅರ್ಬಾಜ್​ ಖಾನ್​ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ದರು. ಇದೀಗ ಸೋಹೈಲ್​ ಖಾನ್​ ಅವರ ಖಾಸಗಿ ವಿಚಾರ ಸುದ್ದಿಯಾಗುತ್ತಿದೆ.

ಡಿವೋರ್ಸ್ ಪಡೆದ ಸೋಹೈಲ್​ ಖಾನ್​!

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ ವಿಚಾರ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ ಅವರಿಂದ ದೂರ ಆದ ಬಳಿಕ ಇದೀಗ ಸಲ್ಮಾನ್ ಅವರ ಮತ್ತೋರ್ವ ಸಹೋದರ ಸೋಹೈಲ್ ಖಾನ್ ಕೂಡ ಪತ್ನಿಯಿಂದ ದೂರ ಆಗುವ ನಿರ್ಧಾರ ಮಾಡಿದ್ದಾರೆ. ಸೋಹೈಲ್ ಖಾನ್ ಮತ್ತು ಸೀಮಾ ದಂಪತಿ ದೂರ ದೂರ ಆಗುತ್ತಿದ್ದು ಇಂದು (ಮೇ 13) ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಧಾಕಡ್ ಚಿತ್ರದ 2ನೇ ಟ್ರೈಲರ್ ಬಿಡುಗಡೆ, ರಾ ಏಜೆಂಟ್ ಆಗಿ ಕಾಣಿಸಿಕೊಂಡ ಕಂಗನಾ

ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್​!

ಇಬ್ಬರು ಕೂಡ ಪರಸ್ಪರ ಒಪ್ಪಿಗೆ ಮೇರೆಗೆ ಈ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ' ಎಂಬ ಮಾಹಿತಿ ಸಿಕ್ಕಿದೆ. 24 ವರ್ಷಗಳ ಹಿಂದೆ ಸೀಮಾ ಮತ್ತು ಸೊಹೈಲ್ ಖಾನ್ ಮದುವೆ ಆಗಿದ್ದರು. ಸೋಹೈಲ್ ಮತ್ತು ಸೀಮಾ ಖಾನ್ 1998ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ನಿರ್ವಾನ್ ಮತ್ತು ಯೋಹಾನ್ ಎಂದು ಹೆಸರಿಟ್ಟಿದ್ದಾರೆ. 24 ವರ್ಷಗಳ ಕಾಲ ಜೊತೆಯಲ್ಲಿದ್ದ ಈ ಜೋಡಿ ಇದೀಗ ಬೇರೆ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಮೂಲಗಳ ಪ್ರಕಾರ ಸೋಹೈಲ್ ಮತ್ತು ಸೀಮಾ ದಂಪತಿ 2017ರಲ್ಲಿಯೇ ದೂರ ಆಗಲು ನಿರ್ಧರಿಸಿದ್ದರು ಎನ್ನಲಾಗಿದೆ.

ದಂಪತಿ ಡಿವೋರ್ಸ್​ ಪಡೆಯಲು ಕಾರಣವೇನು?

ಸೊಹೈಲ್‌ಗೆ ಈಗ 51 ವರ್ಷ ಮತ್ತು ಸೀಮಾಗೆ 46 ವರ್ಷ. 24 ವರ್ಷ ಸಂಸಾರ ನಡೆಸಿರುವ ಈ ದಂಪತಿ ಈಗ ಮದುವೆ ಮುರಿದುಕೊಳ್ಳುವ ನಿರ್ಧಾರ ಮಾಡಿರುವುದು ಏಕೆ ಎಂಬ ಯಾವುದೇ ಮಾಹಿತಿ ಇಲ್ಲ. ಈ ಜೋಡಿ 2017ರಿಂದ ಬೇರೆ ಬೇರೆ ವಾಸಿಸುತ್ತಿದ್ದರು ಎಂದು ಆಂಗ್ಲ ಮಾಧ್ಯಮ ವರದಿ ಮಾಡಿತ್ತು.

ಇದನ್ನೂ ಓದಿ: ಗಂಡನಿಂದ ಕಿರುಕುಳ, ಕಿಟಕಿ ಗ್ರಿಲ್​ಗೆ ನೇಣು ಬಿಗಿದುಕೊಂಡು ಯುವನಟಿ ಸೂಸೈಡ್​

2017 ಮೇನಲ್ಲೇ ವಿಚ್ಛೇದನ ಪಡೆದಿದ್ದ ಅರ್ಬಾಜ್​ ಖಾನ್​!

ಸೊಹೈಲ್ ಅಣ್ಣ ಅರ್ಬಾಜ್ ಖಾನ್ ಕೂಡ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ. 1998ರಲ್ಲೇ ಮದುವೆ ನಟಿ ಮಲೈಕಾ ಅರೋರಾ ಜೊತೆಗೆ ಮದುವೆ ಆಗಿದ್ದ ಅರ್ಬಾಜ್ ಖಾನ್, ಭಿನ್ನಾಭಿಪ್ರಾಯಗಳ ಕಾರಣದಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ 2017ರ ಮೇನಲ್ಲಿ ಇಬ್ಬರಿಗೂ ವಿಚ್ಛೇದನ ಸಿಕ್ಕಿತ್ತು
Published by:Vasudeva M
First published: