'ಭಾರತ್' ಫಸ್ಟ್​ ಲುಕ್ ಟೀಸರ್​ನಲ್ಲಿ ಸಲ್ಮಾನ್ ಖಾನ್ ಹೇಳಿದ್ದೇನು?

news18
Updated:August 15, 2018, 6:58 PM IST
'ಭಾರತ್' ಫಸ್ಟ್​ ಲುಕ್ ಟೀಸರ್​ನಲ್ಲಿ ಸಲ್ಮಾನ್ ಖಾನ್ ಹೇಳಿದ್ದೇನು?
news18
Updated: August 15, 2018, 6:58 PM IST
-ನ್ಯೂಸ್ 18 ಕನ್ನಡ

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ಭಾರತ್' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಡುಗಡೆ ಮಾಡಿರುವ ಈ ಟೀಸರ್​ನಲ್ಲಿ ಸಲ್ಮಾನ್ ಖಡಕ್ ಡೈಲಾಗ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಕಳೆದ ಒಂದೆರೆಡು ತಿಂಗಳಿಂದ ಸದಾ ಸುದ್ದಿಯಲ್ಲಿರುವ 'ಭಾರತ್​' ಚಿತ್ರದ ವಿಡಿಯೋ ತುಣುಕು ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಚಿತ್ರದ ಫಸ್ಟ್​ ಲುಕ್ ಪೋಸ್ಟರ್​ ವಿಡಿಯೋದಲ್ಲಿ ಸಲ್ಮಾನ್ ಧ್ವನಿ ಹಿನ್ನಲೆ ಮೂಡಿ ಬರುತ್ತದೆ. 'ಕೆಲ ಸಂಬಂಧಗಳು ಮಾತೃಭೂಮಿಯಿಂದ, ಮತ್ತೆ ಕೆಲವು ರಕ್ತ ಸಂಬಂಧದಿಂದ ಸೃಷ್ಟಿಯಾಗುತ್ತದೆ. ಇವೆರೆಡೂ ನನ್ನಲಿದೆ ಇದೆ' ಎನ್ನುವ ಡೈಲಾಗ್​ನ್ನು ದಬಂಗ್ ಖಾನ್ ಹೇಳಿದ್ದಾರೆ.


Loading...

ಸ್ವಾತಂತ್ರ್ಯ ದಿನದ ಪ್ರಯುಕ್ತ ಬಿಡುಗಡೆ ಮಾಡಿರುವ ಸಂಭಾಷಣೆ ಈ ಸಿನಿಮಾ ದೇಶದ ಪ್ರೇಮದ ಸಂದೇಶ ಸಾರಲಿದೆ ಎಂಬುದಕ್ಕೆ ಪುಷ್ಠಿ ನೀಡಿದೆ. ಈ ಸಿನಿಮಾ ವ್ಯಕ್ತಿಯೊಬ್ಬರ ಪ್ರವಾಸಕಥನ ಎಂದು ಹೇಳಲಾಗುತ್ತಿದ್ದರೂ, ಇದು ಕೊರಿಯನ್ ಭಾಷೆಯ 'ಒಡ್ ಟು ಮೈ ಫಾದರ್' ಎಂಬ ಚಿತ್ರದ ರಿಮೇಕ್ ಎನ್ನಲಾಗುತ್ತಿದೆ.

'ಸುಲ್ತಾನ್' ಮತ್ತು 'ಏಕ್​ ಥಾ ಟೈಗರ್' ಸಿನಿಮಾಗಳನ್ನು ನಿರ್ದೇಶಿಸಿದ ಅಲಿ ಅಬ್ಬಾಸ್ ಜಫರ್ 'ಭಾರತ್'​ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಕತ್ರೀನಾ ಕೈಫ್ ಕಾಣಿಸಿಕೊಂಡರೆ, ಸಲ್ಲು ಸಹೋದರಿಯಾಗಿ ದಿಶಾ ಪಠಾಣಿ ಅಭಿನಯಿಸಲಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ತೆರೆ ಕಾಣಲಿರುವ ಈ ಚಿತ್ರಕ್ಕೆ ಸಲ್ಮಾನ್ ಸಹೋದರಿ ಅಲ್ವಿರಾ ಖಾನ್ ಬಂಡವಾಳ ಹೂಡುತ್ತಿದ್ದಾರೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ