Dabangg 3: ಸಲ್ಮಾನ್​ರ ದಬಂಗ್​ 3 ಸಿನಿಮಾದ ಸೆಟ್​ನಲ್ಲಿ ಮೊಬೈಲ್​ ಬ್ಯಾನ್​..!

Dabangg 3: ನಟ ಸಲ್ಮಾನ್​ ಖಾನ್​ ಅವರ ದಬಂಗ್​ 3 ಚಿತ್ರದ ಚಿತ್ರೀಕರಣ ಬರದಿಂದ ಸಾಗಿದೆ. ಹೀಗಿರುವಾಗಲೇ ಈಗ ಸಲ್ಲು ತಮ್ಮ ಚಿತ್ರದ ಸೆಟ್​ನಲ್ಲಿ ವಿಶೇಷ ಕಾರಣವೊಂದಕ್ಕೆ ಮೊಬೈಲ್​ ಬ್ಯಾನ್​ ಮಾಡಿದ್ದಾರೆ.

Anitha E | news18
Updated:August 8, 2019, 6:12 PM IST
Dabangg 3: ಸಲ್ಮಾನ್​ರ ದಬಂಗ್​ 3 ಸಿನಿಮಾದ ಸೆಟ್​ನಲ್ಲಿ ಮೊಬೈಲ್​ ಬ್ಯಾನ್​..!
ದಬಂಗ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​
Anitha E | news18
Updated: August 8, 2019, 6:12 PM IST
ನಟ ಸಲ್ಮಾನ್​ ಖಾನ್​ ಇತ್ತೀಚೆಗೆ ತಮ್ಮ ಸಿನಿಮಾ  'ದಬಂಗ್​ 3'ರ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಮೊದಲ ಶೆಡ್ಯೂಲ್​ ಚಿತ್ರೀಕರಣ ಮುಗಿದಿದ್ದು ಈಗ ಎರಡನೇ ಭಾಗದ ಶೂಟಿಂಗ್​ ಆರಂಭವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಈ ಸಿನಿಮಾದ ಸೆಟ್​ ಹಾಗೂ ಇತರೆ ಚಿತ್ರಗಳು ಲೀಕ್​ ಆಗುತ್ತಿವೆ. ಕೆಲವೊಮ್ಮೆ ಸಲ್ಮಾನ್​ ಅವರ ವಿಡಿಯೋ ಸಹ ಕಾಣ ಸಿಗುತ್ತಿದೆ. ಅಲ್ಲದೆ ಸಿನಿಮಾದ ಕತೆಯ ಬಗ್ಗೆಯೂ ಸಾಕಷ್ಟು ಸುದ್ದಿಗಳು ಬಿ-ಟೌನ್​ ಅಂಗಳದಲ್ಲಿ ಹರಿದಾಡುತ್ತಿವೆ.

'ದಬಂಗ್​ 3' ಚಿತ್ರದಲ್ಲಿ ಸೋನಾಕ್ಷಿ ಹಾಗೂ ಸಲ್ಮಾನ್​ ಖಾನ್​ರ ಲುಕ್​


ಇದರಿಂದಾಗಿ ಈ ಸಲ್ಮಾನ್​ ಖಾನ್​ ತಮ್ಮ ಚಿತ್ರದ ಸೆಟ್​ನಲ್ಲಿ ಮೊಬೈಲ್​ ಬ್ಯಾನ್​ ಮಾಡಿದ್ದಾರಂತೆ. ಚಿತ್ರೀಕರಣಕ್ಕೆ ಬರುವ ಯಾರ ಬಳಿಯೂ ಮೊಬೈಲ್​ ಇಲ್ಲದಂತೆ ನೋಡಿಕೊಳ್ಳುವಂತೆ ಆದೇಶ ಹೊರಡಿಸಿದ್ದಾರಂತೆ.

ಸಿನಿಮಾ ಬಿಡುಗಡೆಯಾಗುವರೆಗೂ ಇದಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಫೋಟೋಗಳು ಹಾಗೂ ವಿಡಿಯೋಗಳು ಎಲ್ಲೂ ಲೀಕ್ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಉಳಿದಂತೆ ಮಹೇಶ್ ಮಂಜ್ಲೇಕರ್​ ಅವರ ಮಗಳು ಸಾಯಿ ಮಂಜ್ಲೇಕರ್​ ಈ ಸಿನಿಮಾದ ಮೂಲಕ ಬಾಲಿವುಡ್​ ಎಂಟ್ರಿಗೆ ಸಿದ್ಧರಾಗಿದ್ದಾರೆ. ಇದರಿಂದಾಗಿ ಈ ಸಲ ಅವರ ಲುಕ್​ ಅನ್ನು ಮುಚ್ಚಿಡುವ ಸಲುವಾಗಿಯೂ ಮೊಬೈಲ್​ ಬ್ಯಾನ್​ ಮಾಡಲಾಗಿದೆ ಎಂಬ ಸುದ್ದಿ ಇದೆ.

ಮಹೇಶ್ ಮಂಜ್ರೇಕರ್​ ಹಾಗೂ ಸಾಯಿ ಮಂಜ್ರೇಕರ್​

Loading...

ಇನ್ನು ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಸಹ ಅಭಿನಯಿಸಿದ್ದು, ಅವರು ಅನಾರೋಗ್ಯದ ಕಾರಣದಿಂದಾಗಿ ಇನ್ನೂ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಪ್ರಭುದೇವ ನಿರ್ದೇಶನದ ಈ ಸಿನಿಮಾ ಡಿಸೆಂಬರ್​ 20ಕ್ಕೆ ತೆರೆ ಕಾಣಲಿದೆ.

Amy Jackson: ಅರೆನಗ್ನವಾಗಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿಚ್ಚನ ನಾಯಕಿ..!

First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...