ಅತಿಯಾ ಶೆಟ್ಟಿ ಬಳಿ ಕ್ಷಮೆ ಕೇಳಿದ ಸಲ್ಮಾನ್ ಖಾನ್: ಬ್ಯಾಡ್​ ಬಾಯ್​ ಮಾಡಿದ ತಪ್ಪಾದರೂ ಏನು?

ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ ಸುನೀಲ್ ಶೆಟ್ಟಿ ಮಗಳು ಅತಿಯಾ ಬಳಿ ಕ್ಷಮೆ ಯಾಚಿಸಿದ್ದಾರೆ. ಅದರಲ್ಲೂ ಟಾಕ್​ ಶೋ ಒಂದರಲ್ಲಿ ಸಲ್ಮಾನ್​ ಕ್ಷಮೆ ಕೇಳಿರುವುದು.

ಅತಿಯಾ ಶೆಟ್ಟಿ ಬಳಿ ಕ್ಷಮೆ ಕೇಳಿದ ಸಲ್ಮಾನ್ ಖಾನ್

ಅತಿಯಾ ಶೆಟ್ಟಿ ಬಳಿ ಕ್ಷಮೆ ಕೇಳಿದ ಸಲ್ಮಾನ್ ಖಾನ್

  • Share this:
ಬಾಲಿವುಡ್ ನಟ ಸಲ್ಮಾನ್ ಖಾನ್ ಏನೇ ಕೆಲಸ ಮಾಡಿದರೂ ಅದನ್ನವರು ತುಂಬು ಹೃದಯದಿಂದ ಮಾಡುತ್ತಾರೆ ಎಂಬುದು ಬಾಲಿವುಡ್‌ನಲ್ಲಿರುವ ಅನೇಕ ನಟರ ಮಾತಾಗಿದೆ. ತಮಗಿಂತಲೂ ಕಿರಿಯ ನಟಿಯ ಬಳಿ ಸಲ್ಮಾನ್ ಖಾನ್ ಕ್ಷಮೆ ಕೇಳಿರುವುದು ಈಗ ತುಂಬಾ ಸುದ್ದಿಯಾಗಿದ್ದು, ಬಾಲಿವುಡ್‌ನ ಯುವ ನಟಿಯ ಬಳಿ 'ನನ್ನನ್ನು ಕ್ಷಮಿಸು' ಎಂದು ಸಲ್ಮಾನ್ ಕೇಳಿಕೊಂಡಿದ್ದಾರೆ. ಸಲ್ಮಾನ್ ಯಾವ ನಟಿಯ ಬಳಿ ಕ್ಷಮೆ ಕೇಳಿದರು? ಕ್ಷಮೆ ಕೇಳಲು ಸಲ್ಮಾನ್ ಮಾಡಿದ ತಪ್ಪಾದರೂ ಏನು? ಮುಂದೆ ನೋಡೋಣ ಬನ್ನಿ. ಈ ನಟಿ ಬೇರೆ ಯಾರೂ ಅಲ್ಲ, ನಟ ಸುನೀಲ್ ಶೆಟ್ಟಿ ಅವರ ಮಗಳು ನಟಿ ಅತಿಯಾ ಶೆಟ್ಟಿಯ ಬಳಿ ಸಲ್ಮಾನ್ ಕ್ಷಮೆ ಕೇಳಿದ್ದಾರಂತೆ. ಮೊದಲಿನಿಂದಲೂ ಸುನೀಲ್, ಅತಿಯಾ ಶೆಟ್ಟಿ ಅವರೊಂದಿಗೆ ಸಲ್ಮಾನ್ ತುಂಬಾ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು ಎಂಬುದು ಎಲ್ಲರಿಗೂ ತಿಳಿದಂತಹ ವಿಷಯವೇ ಆಗಿದೆ. ಅತಿಯಾ ಅವರ ಚೊಚ್ಚಲ ಚಿತ್ರ 'ಹೀರೊ'ವನ್ನು ಸಲ್ಮಾನ್ ಅವರೇ ನಿರ್ಮಾಣ ಮಾಡಿದ್ದರು.

ಇಲ್ಲಿ ಸಲ್ಮಾನ್ ಒಳ್ಳೆಯ ಕಾರಣಕ್ಕಾಗಿ ಅತಿಯಾರ ಬಳಿ ಕ್ಷಮೆಯಾಚಿಸಿದ್ದಾರೆ. ಸಲ್ಮಾನ್ ಇತ್ತೀಚೆಗೆ ತಮ್ಮ ಸಹೋದರ ಅರ್ಬಾಜ್ ಖಾನ್ ಅವರ ಟಾಕ್ ಶೋ ಪಿಂಚ್ ಸೀಸನ್ 2 ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಸಲ್ಮಾನ್ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಗಿದ್ದು, ಕತ್ರಿನಾ ಕೈಫ್, ಅತಿಯಾ ಶೆಟ್ಟಿ ಮತ್ತು ಸಂಗೀತಾ ಬಿಜಲಾನಿ ಅವರಲ್ಲಿ ಯಾವ ನಟಿಯನ್ನು ನೀವು  ಇನ್‌ಸ್ಟಾಗ್ರಾಂ‌ನಲ್ಲಿ ಫಾಲೋ ಮಾಡುವುದಿಲ್ಲ ಎಂದು ಅರ್ಬಾಜ್ ಕೇಳಿದಾಗ ಸಲ್ಮಾನ್ ಅವರು ಸಂಗೀತಾ ಬಿಜಲಾನಿ ಎಂದು ಉತ್ತರ ನೀಡುತ್ತಾರೆ, ಆದರೆ ಸರಿಯಾದ ಉತ್ತರ ಸಲ್ಮಾನ್ ಅವರು ಇನ್‌ಸ್ಟಾಗ್ರಾಂ‌ನಲ್ಲಿ ಅತಿಯಾ ಅವರನ್ನು ಫಾಲೋ ಮಾಡುವುದಿಲ್ಲ ಎಂದಾಗಿತ್ತು.

Salman Khan, Ek Tha Tiger, biopic, rajkumar gupta, Indian Spy, ಸಲ್ಮಾನ್ ಖಾನ್, ಏಕ್ ಥಾ ಟೈಗರ್, ಬಯೋಪಿಕ್, ರಾಜ್‌ಕುಮಾರ್ ಗುಪ್ತಾ, ಭಾರತದ ಗುಪ್ತಚರ ರವೀಂದ್ರ ಕೌಶಿಕ್, For the first time salman khan is getting ready for first biopic of his career with Rajkumar Gupta ae
ಸಲ್ಮಾನ್​ ಖಾನ್​


ಉತ್ತರ ತಿಳಿದು ಸಲ್ಮಾನ್ ಅವರು ತಕ್ಷಣವೇ ಷೋನಲ್ಲಿಯೇ ಅತಿಯಾ ಅವರ ಬಳಿ ಕ್ಷಮೆ ಕೇಳಿದ್ದು, ಇನ್ನು ಮುಂದೆ ನನ್ನ ತಪ್ಪನ್ನು ತಿದ್ದಿಕೊಂಡು ನಾನು ನಿನ್ನನ್ನು ಇನ್‌ಸ್ಟಾಗ್ರಾಂ‌ನಲ್ಲಿ ಫಾಲೋ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಇದನ್ನು ನೋಡಿದ ಅತಿಯಾ ತಂದೆ ಸುನಿಲ್ ಶೆಟ್ಟಿ ಸಲ್ಮಾನ್ ಖಾನ್‌ರನ್ನು ತುಂಬಾ ಹೊಗಳಿದ್ದಾರೆ.

ಇದನ್ನೂ ಓದಿ: Bigg Boss Kannada Season 8: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಶುಭಾ ಪೂಂಜಾ: ಏನಿದು ಮಿಡ್​ ವೀಕ್ ಟ್ವಿಸ್ಟ್..!

ಸುದ್ದಿ ಮಾಧ್ಯಮದ ಜೊತೆ ಮಾತನಾಡುತ್ತಾ, ಸುನಿಲ್ ಅವರು "ಸಲ್ಮಾನ್ ಖಾನ್ ಏನೇ ಮಾಡಿದರೂ ತುಂಬು ಹೃದಯದಿಂದ ಮಾಡುತ್ತಾರೆ. ಅವರು ಪರದೆಯ ಮೇಲೆ ಆತಿಯಾ ಬಳಿ ಕ್ಷಮೆ ಕೋರಿದ್ದು ತುಂಬಾ ಕ್ಯೂಟ್ ಆಗಿತ್ತು" ಎಂದಿದ್ದಾರೆ.

"ನಾವಿಬ್ಬರು ತುಂಬಾ ಮಧುರವಾದ ಸಂಬಂಧವನ್ನು ಹೊಂದಿದ್ದು, ಸಲ್ಮಾನ್ ಖಾನ್ ಅವರೊಂದಿಗೆ ಕಳೆದ ಸಮಯವನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತೇನೆ" ಎಂದು ಸುನಿಲ್ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: RIP Jayanthi: ನೇತ್ರ ದಾನ: ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿರುವ ನಟಿ ಜಯಂತಿ..!

ಅತಿಯಾ ಸದ್ಯಕ್ಕೆ ಲಂಡನ್ ನಲ್ಲಿ ತಮ್ಮ ಸಹೋದರ ಆಹಾನ್ ಶೆಟ್ಟಿ ಅವರೊಂದಿಗೆ ಇದ್ದಾರೆ. ಆತಿಯಾ ಆಕೆಯ ಗೆಳೆಯ ಕೆ. ಎಲ್. ರಾಹುಲ್ ಅವರೊಟ್ಟಿಗೆ ರಜಾದಿನಗಳನ್ನು ಕಳೆಯಲು  ತೆರಳಿದ್ದಾರೆ ಎಂದು ವದಂತಿಗಳು ಕೂಡ ಇವೆ. ಅತಿಯಾ ಕೊನೆಯ ಬಾರಿಗೆ ಹಾಸ್ಯ ಚಿತ್ರವಾದ ಮೋತಿಚೂರ್ ಚಕ್ನಾಚೂರ್‌ನಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಕಾಣಿಸಿಕೊಂಡಿದ್ದರು.

ಸಲ್ಮಾನ್ ಖಾನ್ ಅವರು ಸಹ ಕೊನೆಯದಾಗಿ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ದಿಶಾ ಪಟ್ನಾನಿ ಅವರೊಂದಿಗೆ ನಟಿಸಿದ್ದರು. ಅವರ ಆಂಟಮ್: ದಿ ಫೈನಲ್ ಟ್ರುತ್, ಕಭಿ ಈದ್ ಕಭಿ ದೀವಾಲಿ ಮತ್ತು ಟೈಗರ್ 3 ಚಿತ್ರಗಳು ಮುಂಬರುವ ಚಿತ್ರಗಳಾಗಿವೆ.
Published by:Anitha E
First published: