ಬಾಲಿವುಡ್ (Bollywood) ಬಾಯ್ಜಾನ್ ಸಲ್ಮಾನ್ ಖಾನ್ (Salman Khan) ಮತ್ತು ಪೂಜಾ ಹೆಗ್ಡೆ (Pooja Hegde) ಪ್ರಸ್ತುತ ತಮ್ಮ ಮುಂದಿನ ಸಿನಿಮಾ ಕಭಿ ಈದ್ ಕಭಿ ದಿವಾಳಿಯ (Kabhi Eid Kabhi Diwali) ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಸದ್ಯ ಆ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದ್ದು, ಒಂದು ದಿನದ ಶೂಟಿಂಗ್ ಮುಗಿದ ನಂತರ ಸಲ್ಮಾನ್ ಖಾನ್ ಮತ್ತು ಪೂಜಾ ಹೈದರಾಬಾದ್ನಲ್ಲಿರುವ RRR ನಟ ರಾಮ್ ಚರಣ್ ಮನೆಗೆ ವಿಸಿಟ್ ಮಾಡಿದ್ದು, ಅವರ ಪತ್ನಿ ಉಪಾಸನಾ ಕಾಮಿನೇನಿ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ವೆಂಕಟೇಶ್ ದಗ್ಗುಬಾಟಿ ಕೂಡ ಸಲ್ಲುಗೆ ಸಾಥ್ ನೀಡಿದ್ದರು. ಸದ್ಯ ಈ ಫೋಟೋ ಈಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಯ್ತು ಹೊಸ ಫೋಟೋ
ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್ನಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೂಟಿಂಗ್ ಮುಗಿದ ನಂತರ ರಾಮ್ ಚರಣ್ ಮನೆಗೆ ಭೇಟಿ ನೀಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಹೈದರಾಬಾದ್ನಲ್ಲಿರುವ ರಾಮ್ ಚರಣ್ ಮತ್ತು ಉಪಾಸನಾ ಅವರ ಮನೆಯಲ್ಲಿ ರುಚಿಕರವಾದ ಊಟ ಮಾಡಿದ್ದು, ನಟ ವೆಂಕಟೇಶ್ ದಗ್ಗುಬಾಟಿ ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ರಾಮ್ ಚರಣ್ ಮತ್ತು ಉಪಾಸನಾ ಅವರ ಮುದ್ದಿನ ನಾಯಿ ರಿಮಾದ ಇನ್ಸ್ಟಾಗ್ರಾಮ್ ಪುಟದಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಸಲ್ಮಾನ್ ಖಾನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಹಲವಾರು ವರ್ಷಗಳಿಂದ ಉತ್ತಮ ಸ್ನೇಹಿತರು. ಅವರ ಕುಟುಂಬಗಳು ಸಾಮಾನ್ಯವಾಗಿ ಪರಸ್ಪರರ ಆಗಾಗ ಭೇಟಿಯಾಗುತ್ತಿರುತ್ತಾರೆ. ಹಾಗೆಯೇ ಸಲ್ಮಾನ್ ಅಭಿನಯದ ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ವೆಂಕಟೇಶ್ ದಗ್ಗುಬಾಟಿ ನಟಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಮೋಹನ್ ರಾಜಾ ನಿರ್ದೇಶನದ ಚಿರಂಜೀವಿ ಅವರ ಮುಂದಿನ ಚಿತ್ರ ಗಾಡ್ಫಾದರ್ನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ಕನ್ನಡದ ಎವರ್ಗ್ರೀನ್ ರೊಮ್ಯಾಂಟಿಕ್ ಸಿನಿಮಾಗಳ ಲಿಸ್ಟ್ ಇಲ್ಲಿದೆ
ಮೆಗಾಸ್ಟಾರ್ ಸಿನಿಮಾದಲ್ಲಿ ಸಲ್ಮಾನ್
ಅಲ್ಲದೇ, ಬಾಲಿವುಡ್ ನಟ ಸಲ್ಮಾನ್ ಖಾನ್ ಯಾವುದೇ ಸಂಭಾವನೆ ಇಲ್ಲದೆ ಈ ಸಿನಿಮಾದಲ್ಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಗಾಡ್ಫಾದರ್ ಮಲಯಾಳಂನ ಸೂಪರ್ಹಿಟ್ ಚಿತ್ರ ಲೂಸಿಫರ್ನ ಅಧಿಕೃತ ತೆಲುಗು ರಿಮೇಕ್ ಆಗಿದೆ. ಮೂಲ ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ ಮತ್ತು ಮೋಹನ್ ಲಾಲ್, ವಿವೇಕ್ ಒಬೆರಾಯ್ ಮತ್ತು ಮಂಜು ವಾರಿಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಮೊನ್ನೆಯಷ್ಟೇ ನಟ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ಯಶಸ್ಸು ಕಂಡ ಹಿನ್ನೆಲೆ ಮೆಗಾಸ್ಟಾರ್ ಚಿರಂಜೀವಿ, ಗೆಳೆಯ ಕಮಲ್ ಹಾಸನ್ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಹ ನಟ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಸದ್ಯ ಸಲ್ಮಾನ್ ಖಾನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವರ ಇತ್ತೀಚಿನ ಸಿನಿಮಾಗಳು ಹೆಚ್ಚಾಗಿ ಒಳ್ಳೆಯ ಕಲೆಕ್ಷನ್ ಮಾಡದಿದ್ದರೂ ಸಹ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: ಸೂಪರ್ ಫೋಟೋಶೂಟ್ನಲ್ಲಿ ಮಿಂಚಿದ ಮುದ್ದುಲಕ್ಷ್ಮಿ ಅಶ್ವಿನಿ, ನಟಿಯ ಲುಕ್ ನೋಡಿ ಫ್ಯಾನ್ಸ್ ಫಿದಾ
ಬಾಲಿವುಡ್ ಸೆಲೆಬ್ರಿಟಿಗಳು ಇತ್ತೀಚೆಗೆ ದಕ್ಷಿಣದ ಸ್ಟಾರ್ ನಟರನ್ನು ಭೇಟಿಯಾಗುವುದು ಸಾಮಾನ್ಯ. ಮೊನ್ನೆಯಷ್ಟೇ ನಾಗಚೈತನ್ಯ ಅವರನ್ನು ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಸಹ ಭೇಟಿಯಾಗಿದ್ದರು. ಆ ಫೋಟೋಗಳು ಸಹ ಬಹಳ ವೈರಲ್ ಆಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ