ಕ್ರಿಸ್​​ಮಸ್​ಗೆ ತೆರೆಗೆ ಬರಲಿದೆ ‘ಕಿಚ್ಚ’ ಸುದೀಪ್​ ನಟನೆಯ ಈ ಬಾಲಿವುಡ್​ ಚಿತ್ರ!

2019ರ ಡಿಸೆಂಬರ್​ ತಿಂಗಳಲ್ಲಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರ ತೆರೆಗೆ ಬರುತ್ತಿದೆ. ಹಾಗಾಗಿ ‘ದಬಂಗ್​ 3’ ಹಾಗೂ ‘ಬ್ರಹ್ಮಾಸ್ತ್ರ’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮುಖಾಮುಖಿಯಾಗುವ ಲಕ್ಷಣ ಗೋಚರವಾಗಿದೆ.

Rajesh Duggumane | news18
Updated:March 15, 2019, 3:40 PM IST
ಕ್ರಿಸ್​​ಮಸ್​ಗೆ ತೆರೆಗೆ ಬರಲಿದೆ ‘ಕಿಚ್ಚ’ ಸುದೀಪ್​ ನಟನೆಯ ಈ ಬಾಲಿವುಡ್​ ಚಿತ್ರ!
ಸುದೀಪ್​
Rajesh Duggumane | news18
Updated: March 15, 2019, 3:40 PM IST
‘ಕಿಚ್ಚ’ ಸುದೀಪ್​ ನಟನೆಯ ‘ಪೈಲ್ವಾನ್​’ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಕೆಲವೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಇನ್ನು, ‘ಕೊಟಿಗೊಬ್ಬ 3’ ಚಿತ್ರದ ಕೆಲಸಗಳೂ ಪ್ರಗತಿಯಲ್ಲಿವೆ. ಈ ಮಧ್ಯೆ ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ, ಕಿಚ್ಚ ಹಿಂದಿಯಲ್ಲಿ ನಟಿಸುತ್ತಿರುವ ‘ದಬಂಗ್​ 3’ ಚಿತ್ರ ಕ್ರಿಸ್​ಮಸ್​ ನಿಮಿತ್ತ 2019ರ ಡಿಸೆಂಬರ್​ ತಿಂಗಳಲ್ಲಿ ತೆರೆಗೆ ಬರಲಿದೆ.

ಹಾಗಂತ ಈ ವಿಚಾರವನ್ನು ಸುದೀಪ್​ ಹೇಳಿಕೊಂಡಿಲ್ಲ. ಬದಲಿಗೆ, ಚಿತ್ರತಂಡವೇ ಘೋಷಣೆ ಮಾಡಿದೆ. ಸುದೀಪ್​ ‘ದಬಂಗ್​ 3’ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಮೂಲಕ ಅವರು ಮತ್ತೆ ಬಾಲಿವುಡ್​ಗೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದ್ದವು. ಈ ವಿಚಾರವನ್ನು ಸ್ವತಃ ಸುದೀಪ್​ ಖಚಿತಪಡಿಸಿದ್ದರು. ಈಗ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.

‘ದಬಂಗ್​ 3’ ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಮಾತನಾಡಿರುವ ಸಲ್ಮಾನ್​ ಖಾನ್​, “ದಬಂಗ್​ 3 ಚಿತ್ರ ಏಪ್ರಿಲ್​ನಲ್ಲಿ ಸೆಟ್ಟೇರಲಿದೆ. ಡಿಸೆಂಬರ್​​ಗೆ ಚಿತ್ರವನ್ನು ತೆರೆಗೆ ತರುತ್ತೇವೆ,” ಎಂದಿದ್ದರು.


Loading...ಇದನ್ನೂ ಓದಿ: 'ದಬಂಗ್​ 3' ಚಿತ್ರದಲ್ಲಿ ಸುದೀಪ್​ ನಟಿಸೋದು ಖಚಿತ?; ಹೌದೆನ್ನುತ್ತಿವೆ ಈ ಟ್ವೀಟ್​ಗಳು'ದಬಂಗ್​ 

2019ರ ಡಿಸೆಂಬರ್​ ತಿಂಗಳಲ್ಲಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರ ತೆರೆಗೆ ಬರುತ್ತಿದೆ. ಹಾಗಾಗಿ ‘ದಬಂಗ್​ 3’ ಹಾಗೂ ‘ಬ್ರಹ್ಮಾಸ್ತ್ರ’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮುಖಾಮುಖಿಯಾಗುವ ಲಕ್ಷಣ ಗೋಚರವಾಗಿದೆ.

‘ದಬಂಗ್​ 3’ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ನಾಯಕ. ಅರ್ಬಾಜ್​ ಖಾನ್​ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸೋನಾಕ್ಷಿ ಸಿನ್ಹಾ ನಾಯಕಿ. ಚುಲ್ಬುಲ್​ ಪಾಂಡೆ ಆಗಿ ಸಲ್ಲು ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್​ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಸದ್ಯದ್ದು. ಸುದೀಪ್​ ಈ ಮೊದಲು ಹಿಂದಿಯಲ್ಲಿ ‘ಫೂಂಕ್​’, ‘ಫೂಂಕ್​ 2’, ‘ರನ್​’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. ಸದ್ಯ, ಕನ್ನಡದಲ್ಲಿ 'ಪೈಲ್ವಾನ್​', 'ಕೊಟಿಗೊಬ್ಬ 3' ಅಲ್ಲದೆ 'ಬಿಲ್ಲ ರಂಗ ಬಾಷ' ಚಿತ್ರಗಳಲ್ಲಿ ಅವರು ಅಭಿನಿಸುತ್ತಿದ್ದಾರೆ.

ಇದನ್ನೂ ಓದಿ:  ‘ದಬಂಗ್ 3’ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ ಪ್ರಭುದೇವ

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...