HOME » NEWS » Entertainment » SALMAN KHAN AND KICCHA SUDEEP VISIT KAPIL SHARMAS SHOW WITH DABANGG 3 TEAM AE

ಕಪಿಲ್​ ಶರ್ಮಾ ಕಾಮಿಡಿ ಶೋಗೆ ಮೂರನೇ ಬಾರಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್​: ನಂಬರ್​ ಒನ್​ ಕಾಮಿಡಿ ಶೋನಲ್ಲಿ ಕರುನಾಡ ಅಭಿನಯ ಚಕ್ರವರ್ತಿ..!

Kichcha Sudeep In Kapil Sharma Show: ಈ ಹಿಂದೆ ಎರಡು ಬಾರಿ ಕಿಚ್ಚ ಸುದೀಪ್​ ಕಪಿಲ್​ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದು, ಈಗ ಮತ್ತೆ ಮೂರನೇ ಸಲ ಎಂಟ್ರಿ ಕೊಟ್ಟಿದ್ದಾರೆ.

Anitha E | news18-kannada
Updated:December 5, 2019, 11:55 AM IST
ಕಪಿಲ್​ ಶರ್ಮಾ ಕಾಮಿಡಿ ಶೋಗೆ ಮೂರನೇ ಬಾರಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್​: ನಂಬರ್​ ಒನ್​ ಕಾಮಿಡಿ ಶೋನಲ್ಲಿ ಕರುನಾಡ ಅಭಿನಯ ಚಕ್ರವರ್ತಿ..!
ಕಪಿಲ್​ ಶರ್ಮಾ ಕಾಮಿಡಿ ಶೋನಲ್ಲಿ ಕಿಚ್ಚ ಸುದೀಪ್​, ಸಲ್ಮಾನ್ ಖಾನ್​, ಅರ್ಬಾಸ್​ ಖಾನ್​ ಹಾಗೂ ಪ್ರಭುದೇವ
  • Share this:
ಹಿಂದಿ ಕಿರುತೆರೆಯಲ್ಲಿ ಮೂಡಿ ಬರುವ ಖ್ಯಾತ ಕಾಮಿಡಿ ಕಾರ್ಯಕ್ರಮ ಕಪಿಲ್​ ಶರ್ಮಾ ಶೋ ಎಷ್ಟು ಫೇಮಸ್​ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಎಷ್ಟೇ ದೊಡ್ಡ ಸ್ಟಾರ್​ ನಟರಾದರು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಈ ಕಾರ್ಯಕ್ರಮಕ್ಕೆ ಹೋಗಿಯೇ ತಿರುತ್ತಾರೆ. ಇಂತಹ ಕಾರ್ಯಕ್ರಮದಲ್ಲಿಸ್ಯಾಂಡಲ್​ವುಡ್​ ಕಡೆಯಿಂದ ಮೊದಲು ಎಂಟ್ರಿ ಕೊಟ್ಟ ಕೀರ್ತಿ ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸಲ್ಲುತ್ತದೆ. ​

ಈ ಹಿಂದೆ ಎರಡು ಬಾರಿ ಕಿಚ್ಚ ಸುದೀಪ್​ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಈಗ ಮತ್ತೆ ಮೂರನೇ ಸಲ ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ತಮ್ಮ ಬಹು ನಿರೀಕ್ಷಿತ 'ದಬಾಂಗ್​ 3' ರ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಹೋಗಿದ್ದಾರೆ.
ಹೌದು, ಪ್ರಭುದೇವ ನಿರ್ದೇಶನದ 'ದಬಾಂಗ್​ 3' ಸಿನಿಮಾದಲ್ಲಿ ಕಿಚ್ಚ ಸಲ್ಮಾನ್​ ಎದುರು ವಿಲನ್​ ಆಗಿ ಮೀಸೆ ತಿರುವಲಿದ್ದಾರೆ. ಈ ಸಿನಿಮಾದ ಪ್ರಮೋಷನ್​ಗಾಗಿ ಸಲ್ಮಾನ್​ ಖಾನ್​ ಪ್ರಭುದೇವ, ಕಿಚ್ಚ ಸುದೀಪ್​ ಹಾಗೂ ಅರ್ಬಾಸ್​ ಖಾನ್​ ಕಪಿಲ್​ ಶರ್ಮಾ ಕಾಮಿಡಿ ಶೋಗೆ ಹೋಗಿದ್ದಾರೆ. ‘ಈ ಎಪಿಸೋಡ್​ನ ಚಿತ್ರೀಕರಣ ಆಗಿದ್ದು, ಅದು ಸದ್ಯದಲ್ಲಿ ಪ್ರಸಾರವಾಗಲಿದೆ.ಇದನ್ನೂ ಓದಿ: Prabhas: ಧೂಮ್​ ಸರಣಿ ಸಿನಿಮಾದಲ್ಲಿ ಪ್ರಭಾಸ್​: ಬಾಲಿವುಡ್​ನ ಖ್ಯಾತ ನಿರ್ಮಾಪಕನಿಂದ ಡಾರ್ಲಿಂಗ್​ಗೆ ಸಿಕ್ಕಿದೆ ನೂರು ಕೋಟಿ ಬಂಪರ್​ ಆಫರ್..!

ಕಿರುತೆರೆಯ ಕಾಮಿಡಿ ಕಾರ್ಯಕ್ರಮದ ಕಿಂಗ್​ ಕಪಿಲ್​ ಶರ್ಮಾ ಅವರ ಸೀಸನ್​ 2ನ ವಿಶೇಷ ಸಂಚಿಕೆಯಲ್ಲಿ ಕಿಚ್ಚ ಸುದೀಪ್​, ಸುನಿಲ್​ ಶೆಟ್ಟಿ ಹಾಗೂ ಮನೋಜ್​ ತಿವಾರಿ ಭಾಗವಹಿಸಿದ್ದರು. ಅದು ಸಹ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಿಂದಾಗಿ ಮೊದಲ ಬಾರಿಗೆ ಕಿಚ್ಚ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ 'ಪೈಲ್ವಾನ್​' ಚಿತ್ರದ ಪ್ರಮೋಷನ್​ಗಾಗಿ ಎಡನೇ ಬಾರಿಗೆ ಹೋಗಿದ್ದರು.

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published: December 4, 2019, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories