ತೌಕ್ತೆ ಚಂಡಮಾರುತ: ಹಾಳಾಯ್ತು ಸಲ್ಮಾನ್- ಕತ್ರಿನಾ ಅಭಿನಯದ ಟೈಗರ್ 3 ಸಿನಿಮಾದ ಸೆಟ್

ಮುಂಬೈನಲ್ಲಿ ಟೈಗರ್​ 3 ಸಿನಿಮಾಗಾಗಿ ಹಾಕಲಾಗಿದ್ದ ಸೆಟ್​ ಈಗ ಚಂಡಮಾರುತದಿಂದಾಗಿ ಹಾಳಾಗಿದೆ. ಈ ಸಿನಿಮಾದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭಿಸಲಾಗಿತ್ತು. ಕತ್ರಿನಾ ಅವರಿಗೆ ಏಪ್ರಿಲ್ ತಿಂಗಳಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು. ಅಲ್ಲದೇ ಕೋವಿಡ್ ಎರಡನೇ ಅಲೆಯ ಕಠಿಣ ಪರಿಸ್ಥಿತಿ ಅರಿತು ಸುರಕ್ಷತಾ ದೃಷ್ಟಿಯಿಂದ ಶೂಟಿಂಗ್‍ ಅನ್ನು ಕೊಂಚ ದಿನಗಳ ಕಾಲ ನಿಲ್ಲಿಸಲಾಗಿತ್ತು.

ಟೈಗರ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​

ಟೈಗರ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​

  • Share this:
ಕಳೆದ ಒಂದು ವಾರದಿಂದ ಹಲವು ರಾಜ್ಯಗಳ ನಿದ್ದೆಗೆಡಿಸಿರುವ ತೌಕ್ತೆ ಚಂಡಮಾರುತದ ರುದ್ರನರ್ತನದಿಂದ ಸಾಕಷ್ಟು ಆಸ್ತಿಪಾಸ್ತಿ ಹಾನಿಗೊಳಗಾಗಿವೆ. ಗುಜರಾತ್, ಕೇರಳ, ಮಹಾರಾಷ್ಟ್ರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಭೀಕರತೆ ಬಾಲಿವುಡ್‍ಗೂ ತಟ್ಟಿದೆ. ಹೌದು, ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರಿಗೆ ಒಂದರ ಮೇಲೊಂದು ವಿಘ್ನಗಳು ಬರುತ್ತಲೇ ಇದೆ. ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ರಾಧೆ ಸಿನಿಮಾ  ಅತಿ ಕಡಿಮೆ ರೇಟಿಂಗ್ ಪಡೆದುಕೊಂಡು ಕಳಪೆ ಸಿನಿಮಾಗಳ ಸಾಲಿಗೆ ಸೇರಿತು. ಇದೀಗ ಟೈಗರ್ 3 ಸಿನಿಮಾದ ಸೆಟ್ ತೌಕ್ತೆ ಚಂಡಮಾರುತದಿಂದ ಸಂಪೂರ್ಣವಾಗಿ ನಾಶವಾಗಿದೆ.ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಸಿನಿಮಾ ಟೈಗರ್ 3. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿತ್ತು. ಇದರ ಶೂಟಿಂಗ್‍ಗಾಗಿ ಹಾಕಿದ್ದ ಸೆಟ್ ಹಾನಿಗೊಳಗಾಗಿವೆ ಎಂದು ಅಭಿಮಾನಿಗಳು ಶೂಟಿಂಗ್ ಸ್ಥಳದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಸೈಕ್ಲೋನ್‍ನಿಂದಾಗಿ ಗುಜರಾತ್ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶ ಜಲಾವೃತವಾಗಿದೆ. ಮುಂಬೈನಲ್ಲಿ ಟೈಗರ್​ 3 ಸಿನಿಮಾಗಾಗಿ ಹಾಕಲಾಗಿದ್ದ ಸೆಟ್​ ಈಗ ಚಂಡಮಾರುತದಿಂದಾಗಿ ಹಾಳಾಗಿದೆ. ಈ ಸಿನಿಮಾದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭಿಸಲಾಗಿತ್ತು. ಕತ್ರಿನಾ ಅವರಿಗೆ ಏಪ್ರಿಲ್ ತಿಂಗಳಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು. ಅಲ್ಲದೇ ಕೋವಿಡ್ ಎರಡನೇ ಅಲೆಯ ಕಠಿಣ ಪರಿಸ್ಥಿತಿ ಅರಿತು ಸುರಕ್ಷತಾ ದೃಷ್ಟಿಯಿಂದ ಶೂಟಿಂಗ್‍ ಅನ್ನು ಕೊಂಚ ದಿನಗಳ ಕಾಲ ನಿಲ್ಲಿಸಲಾಗಿತ್ತು.

Bigg Boss 14, Instagram, Salman Khan, Salman Khan Shares Safety Message, Salman Khan Shares new photo, Salman Khan instagram, Salman Khan new movie, Bollywood,
ಸಲ್ಮಾನ್​ ಖಾನ್​


ಮಿಡ್ ಡೇ ವರದಿಯ ಪ್ರಕಾರ, ಗೋರೆಗಾಂವ್‍ನ ಎಸ್‍ಆರ್‌ಪಿಎಫ್ ಗ್ರೌಂಡ್‍ನಲ್ಲಿ ದುಬೈ ಮಾರುಕಟ್ಟೆಯ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಅದು ಕೊಂಚ ಮಟ್ಟಿಗೆ ಹಾಳಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಕಿಚ್ಚ ಸುದೀಪ್​

ಫಿಲ್ಮ್‌ ಸಿಟಿ ಹೆಚ್ಚು ಹಾನಿಗೊಳಗಾಗಿದೆ. ಅದೃಷ್ಟವಶಾತ್ ಶೂಟಿಂಗ್‌ ಅನ್ನು ನಿಲ್ಲಿಸಲಾಗಿತ್ತು. ಈ ಪ್ರದೇಶದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಆದರೂ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಅಧ್ಯಕ್ಷ ಬಿ.ಎನ್ ತಿವಾರಿ ತಿಳಿಸಿದ್ದಾರೆ. ಮೇ 18ರಂದು ಗುಜರಾತ್‍ನಲ್ಲಿ ಚಂಡಮಾರುತದಿಂದಾಗಿ ಭೂ ಕುಸಿತ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಹೇಳತೀರದ ರೀತಿಯಲ್ಲಿ ತೊಂದರೆಯಾಗಿದೆ.

ಸಲ್ಮಾನ್ ಅವರ ಟೈಗರ್ 3 ಸಿನಿಮಾವು ಏಕ್‍ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳ ಮುಂದುವರೆದ ಭಾಗವಾಗಿದೆ. ಮೊದಲ ಭಾಗ 2012ರಲ್ಲಿ ಬಿಡುಗಡೆಯಾಗಿ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಮೊದಲ ಸಿನಿಮಾದಲ್ಲಿ 200 ಕೋಟಿ ಗಳಿಕೆ ತಂದುಕೊಟ್ಟಿತು. ಇನ್ನು ಐದು ವರ್ಷಗಳ ನಂತರ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಒಂದಾದ ಈ ಜೋಡಿ ಮತ್ತೊಮ್ಮೆ ಕಮಾಲ್ ಮಾಡಿತು. ಇಷ್ಟೊಂದು ಹಿಟ್ ಸಿನಿಮಾಗಳ ಮುಂದುವರೆದ ಭಾಗವಾಗಿರುವ ಟೈಗರ್ 3 ಸಿನಿಮಾದ ಬಗ್ಗೆ ಅಭಿಮಾನಿಗಳು ಕುತೂಹಲರಾಗಿದ್ದಾರೆ.

ಇದನ್ನೂ ಓದಿ: ಸರಳವಾಗಿ ಹುಟ್ಟುಹಬ್ಬ ಆಚರಿಸಿದ ನಿಶ್ವಿಕಾಗೆ ಸಿಕ್ತು ಭರ್ಜರಿ ಗಿಫ್ಟ್​..!

ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಟ್ರೇ ಲರ್ ಈಗಾಗಲೇ ಬಿಡುಗಡೆಯಾಗಿದೆ. ಇದರ ಜೊತೆಗೆ ಸಲ್ಮಾನ್ ಅವರ ಅಂತಿಮ್: ದ ಫೈನಲ್ ಟ್ರೂಥ್ ಸಿನಿಮಾ ಕೂಡ ತಯಾರಾಗಿದೆ. ಇನ್ನು ಕಭೀ ಈದ್, ಕಭೀ ದಿವಾಲಿ ಈ ಸಿನಿಮಾವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಇನ್ನು ಕತ್ರಿನಾ ಕೂಡ ಫೋನ್ ಬೂತ್, ಸೂರ್ಯವಂಶಿ, ಸೂಪರ್ ಹೀರೋ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

STAR RATINGS, BOLLYWOOD, IMDB, RACE 3, RADHE, RADHE- YOUR MOST WANTED BHAI, RATINGS, SALMAN KHAN, ಸಲ್ಮಾನ್‌ ಖಾನ್, ರಾಧೆ, ಐಎಂಡಿಬಿ, ರೇಸ್‌ - 3, ರಾಧೆ - ಯುವರ್‌ ಮೋಸ್ಟ್‌ ವಾಂಟೆಡ್‌ ಭಾಯ್‌, Radhe, OTT Ralease, Radhe Movie OTT Release, Bollywood, ರಾಧೆ ಸಿನಿಮಾ, ಸಲ್ಮಾನ್​ ಖಾನ್​, ರಾಧೆ ಸಿನಿಮಾ ಒಟಿಟಿ ರಿಲೀಸ್​, salman khan, salman farming, salman farming video, ms dhoni farming, dhoni in agriculture, dhoni organic farming, salman agriculture, ಸಲ್ಮಾನ್​ ಖಾನ್​, ಸುಶಾಂತ್ ಸಿಂಗ್​ ಆತ್ಮಹತ್ಯೆ, ಸಲ್ಮಾನ್​ ಖಾನ್​ ಟ್ರ್ಯಾಕ್ಟರ್​ ಓಡಿಸಿದ ವಿಡಿಯೋ, ಕೃಷಿ ಮಾಡುತ್ತಿರುವ ಸಲ್ಮಾನ್ ಖಾನ್​​, ಟ್ರೋಲಾದ ಸಲ್ಮಾನ್ ಖಾನ್​, Salman Khan starrer Radhe movie is Worst rated film on IMDb
ಸಲ್ಮಾನ್ ಖಾನ್​ ಅಭಿನಯದ ರಾಧೆ ಸಿನಿಮಾದಲ್ಲಿ ದಿಶಾ ಪಟಾಣಿ


ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಒಟಿಟಿ ಹಾಗೂ ವಿದೇಶದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್​ ಆದ ರಾಧೆ ಸಿನಿಮಾ ನೆಲಕಚ್ಚಿದೆ. ಕೇವಲ ಸಲ್ಮಾನ್​ ಖಾನ್​ ಅವರನ್ನು ನೋಡಲು ಬಯಸುವವರಿಗೆ ಮಾತ್ರ ಈ ಸಿನಿಮಾ ಎಂದೂ ಹೇಳಲಾಗುತ್ತಿದೆ. ಸಿನಿಮಾಗೆ ಐಎಂಡಿಬಿಯಲ್ಲೂ ತುಂಬಾ ಕಡಿಮೆ ರೇಟಿಂಗ್​ ಸಿಕ್ಕಿದೆ. ಸಲ್ಮಾನ್​ ಖಾನ್​ ಸಿನಿಮಾದ ಮೇಲೆ ಸಾಕಷ್ಟು ಮೀಮ್ಸ್​ಗಳನ್ನು ಮಾಡಲಾಗಿದ್ದು, ಸಲ್ಮಾನ್​ ಅವರನ್ನು ಟ್ರೋಲ್​ ಮಾಡಲಾಗಿದೆ.
Published by:Anitha E
First published: