Salman-Jacqueline: ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆ ಸೈಕಲ್​ ಹತ್ತಿ ರಸ್ತೆಗಿಳಿದ ಸಲ್ಮಾನ್​-ಜಾಕ್ವೆಲಿನ್​

ಲಾಕ್​ಡೌನ್​ಗೂ ಮೊದಲು ಪನ್ವೇಲ್​ಗೆ ಬಂದಿದ್ದ ಖಾನ್​, ಲಾಕ್​ಡೌನ್​ನಿಂದಾಗಿ ಇಲ್ಲೇ ಇರುವಂತಾಯಿತು. ಈಗ ಲಾಕ್​ಡೌನ್ ​ಸಡಿಲಿಕೆಯಿಂದಾಗಿ ಸಲ್ಮಾನ್​ ಹಾಗೂ ಸ್ನೇಹಿತರು ಸ್ಟೈಲಿಶ್​ ಆಗಿ ರಸ್ತೆಗಿಳಿದಿದ್ದಾರೆ. ರಸ್ತೆಯಲ್ಲಿ ಬಿಟೌನ್​ ಸೆಲೆಬ್ರಿಟಿಗಳನ್ನು ಕಂಡ ಜನರು ಸಖತ್​ ಖುಷಿಯಾಗಿದ್ದಾರೆ.

Anitha E | news18-kannada
Updated:June 2, 2020, 6:34 PM IST
Salman-Jacqueline: ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆ ಸೈಕಲ್​ ಹತ್ತಿ ರಸ್ತೆಗಿಳಿದ ಸಲ್ಮಾನ್​-ಜಾಕ್ವೆಲಿನ್​
ಸಲ್ಮಾನ್​ ಖಾನ್​ ಹಾಗೂ ಜಾಕ್ವೆಲಿನ್​
  • Share this:
ಲಾಕ್​ಡೌನ್​ ಆದಾಗಿನಿಂದ ಸಲ್ಮಾನ್​  ಖಾನ್​, ಜಾಕ್ವೆಲಿನ್ ಹಾಗೂ ಸ್ನೇಹಿತರೊಂದಿಗೆ ಪನ್ವೇಲ್​ ತೋಟದ ಮನೆಯಲ್ಲಿದ್ದಾರೆ. ಸಲ್ಲು ತಂದೆಯನ್ನು ಹೊರತುಪಡಿಸಿ ಮನೆಯವರೂ ಪನ್ವೇಲ್​ನಲ್ಲೇ ಇದ್ದಾರೆ.

ಈ ಹಿಂದೆಯೇ ಸಲ್ಮಾನ್​ ತಮ್ಮ ಸಹೋದರನ ಮನಗನೊಂದಿಗೆ ವಿಡಿಯೋ ಮಾಡಿ, ಈ ವಿಷಯವನ್ನು ಹಂಚಿಕೊಂಡಿದ್ದರು. ಲಾಕ್​ಡೌನ್​ಗೂ ಮೊದಲು ಪನ್ವೇಲ್​ಗೆ ಬಂದಿದ್ದ ಖಾನ್​, ಲಾಕ್​ಡೌನ್​ನಿಂದಾಗಿ ಇಲ್ಲೇ ಇರುವಂತಾಯಿತು. ಈ ನಡುವೆ ಜಾಕ್ವೆಲಿನ್​ ಅವರ ಫೋಟೋಶೂಟ್​ ಹಾಗೂ ಹಾಡಿನ ಚಿತ್ರೀಕರಣ ಸಹ ಇಲ್ಲೇ ಮಾಡಲಾಯಿತು.
 View this post on Instagram
 

Be Home n Be Safe @nirvankhan15


A post shared by Salman Khan (@beingsalmankhan) on


ಜಾಕ್ವೆಲಿನ್​ ಫರ್ನಾಂಡಿಸ್​ ಬಜಾರ್​ ನಿಯತಕಾಲಿಕೆಗಾಗಿ ಸಲ್ಮಾನ್​ ಕುದುರೆ ಜೊತೆಯಲ್ಲೇ ಫೋಟೋಶೂಟ್​ ಮಾಡಿಸಲಾಗಿತ್ತು. ಈಗ ಅಲ್ಲಿ ಲಾಕ್​ಡೌನ್​ ಅನ್ನು ಸಡಿಲಿಸಲಾಗಿದೆ. ಕಳೆದೆರಡು ತಿಂಗಳಿನಿಂದ ತಮ್ಮ ತೋಟದ ಮನೆಯಲ್ಲೇ ಲಾಕ್​ ಆಗಿದ್ದ ಸಲ್ಮಾನ್​ ಹಾಗೂ ಸ್ನೇಹಿತರು ಈಗ ಹಕ್ಕಿಗಳಂತೆ ಹಾರಾಡುತ್ತಿದ್ದಾರೆ.

Salman Khan, Jacqueline Fernandez and others go for cycling in Panvel near the actor's farmhouse. #salmankhan #jacquelinefernandez #Entertainment #Bollywood #BollywoodActor @BeingSalmanKhan @Asli_Jacqueline pic.twitter.com/fQ1Bpzizcyಸಲ್ಮಾನ್​ ಹಾಗೂ ಜಾಕ್ವೆಲಿನ್​ ತಮ್ಮ ಸ್ನೇಹಿತರೊಂದಿಗೆ ಪನ್ವೇಲ್​ನ ತೋಟದ ಮನೆಯಿಂದ ಸೈಕಲ್​ ಹತ್ತಿ ರಸ್ತೆಗಳಲ್ಲಿ ಓಡಾಡಿದ್ದಾರೆ. ಸಲ್ಮಾನ್​ರನ್ನು ಕಂಡ ಸ್ಥಳೀಯರು ಖುಷಿಯಿಂದ ವಿಡಿಯೋ ಮಾಡಿಕೊಂಡಿದ್ದಾರೆ. ಇದೇ ವಿಡಿಯೋಗಳು ಈಗ ವೈರಲ್​ ಆಗುತ್ತಿವೆ.

 ರಂಜಾನ್​ ಹಬ್ಬಕ್ಕೆ ಸಲ್ಮಾನ್​ ಭಾಯ್​ ಭಾಯ್​ ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಹಾಡಿಗೆ ಸಲ್ಮಾನ್​ಖಾನ್​ ದನಿಯಾಗಿದ್ದಾರೆ. ಇನ್ನು ಪ್ರಭುದೇವ ನಿರ್ದೇಶನದಲ್ಲಿ ದಿಶಾ ಪಟಾನಿ ನಾಯಕಿಯಾಗಿರುವ ರಾಧೆ: ಯುವರ್​ ಮೋಸ್ಟ್ ವಾಂಟೆಡ್​ ಭಾಯ್​ ಸಿನಿಮಾದಲ್ಲಿ ಸಲ್ಮಾನ್​ ಕಾಣಸಿಕೊಳ್ಳಲಿದ್ದಾರೆ.

First published: June 2, 2020, 6:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading