Inshallah Movie: ಮುಂದಿನ ಈದ್​ಗೆ ತೆರೆಕಾಣಲಿದೆ ಸಲ್ಲು ಅಭಿನಯದ ಮತ್ತೊಂದು ಚಿತ್ರ: 20 ವರ್ಷಗಳ ನಂತರ ಒಂದಾದ ಬನ್ಸಾಲಿ-ಸಲ್ಮಾನ್​ ಖಾನ್​..!

Inshallah Movie: ಸಲ್ಮಾನ್​ ಖಾನ್​ ಹಾಗೂ ಅಲಿಯಾ ಭಟ್​ ತೆರೆಹಂಚಿಕೊಳ್ಳುತ್ತಿರುವ ಇನ್ಶಾಅಲ್ಲಾಹ್​ ಸಿನಿಮಾ ಮುಂದಿನ ವರ್ಷ ಅಂದರೆ 2020ರಲ್ಲಿ ರಂಜಾನ್​ಗೆ ತೆರೆಕಾಣಲಿದೆ ಎಂದು ಸಲ್ಮಾನ್​ ಪ್ರಕಟಿಸಿದ್ದಾರೆ.

Anitha E | news18
Updated:June 7, 2019, 3:01 PM IST
Inshallah Movie: ಮುಂದಿನ ಈದ್​ಗೆ ತೆರೆಕಾಣಲಿದೆ ಸಲ್ಲು ಅಭಿನಯದ ಮತ್ತೊಂದು ಚಿತ್ರ: 20 ವರ್ಷಗಳ ನಂತರ ಒಂದಾದ ಬನ್ಸಾಲಿ-ಸಲ್ಮಾನ್​ ಖಾನ್​..!
ಹೊಸ ಸಿನಿಮಾದಲ್ಲಿ ಜತೆಯಾದ ಸಲ್ಮಾನ್​ ಖಾನ್​ ಹಾಗೂ ಅಲಿಯಾ ಭಟ್​
Anitha E | news18
Updated: June 7, 2019, 3:01 PM IST
ಕಳೆದ ಬುಧವಾರಷ್ಟೆ ಬಾಲಿವುಡ್​ ಬ್ಯಾಡ್​ಬಾಯ್​ ಸಲ್ಮಾನ್​ ಖಾನ್​ ಅಭಿನಯದ ಸಿನಿಮಾ 'ಭಾರತ್'​ ರಂಜಾನ್​ ಹಬ್ಬದಂದು ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ತೆರೆಕಂಡು ವಾರ ಆಗುವ ಮೊದಲೇ ಸಲ್ಮಾನ್​ ತಮ್ಮ ಮುಂದಿನ ಈದ್​ಗೆ ಬಿಡುಗಡೆಯಾಗಲಿರುವ ಸಿನಿಮಾದ ಬಗ್ಗೆ ಪ್ರಕಟಿಸಿದ್ದಾರೆ.

ಹೌದು, ಬಾಲಿವುಡ್​ನಲ್ಲಿ ಒಬ್ಬೊಬ್ಬರು ಒಂದು ದಿನಗಳನ್ನು ಸಿನಿಮಾ ಬಿಡುಗಡೆಗೆ ಫಿಕ್ಸ್​ ಮಾಡಿಕೊಂಡಿದ್ದಾರೆ. ಶಾರುಖ್​ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡಿದರೆ, ಅಕ್ಷಯ್​ ಆಗಸ್ಟ್​ 15ಕ್ಕೆ ಹಾಗೆ ಸಲ್ಮಾನ್​ ಪ್ರತಿ ವರ್ಷ ಈದ್​ಗೆ ಒಂದು ಸಿನಿಮಾವನ್ನು ಅಭಿಮಾನಿಗಳಿಗಾಗಿ ಇಟ್ಟುಕೊಂಡೇ ಇರುತ್ತಾರೆ.

ಇದನ್ನೂ ಓದಿ: ಬ್ಯಾಡ್​ಬಾಯ್​ ಇಮೇಜ್​ನಿಂದ ಹೊರ ಬಂದಿಲ್ಲವಾ ಬಿ-ಟೌನ್​ ಸುಲ್ತಾನ್​: ಮತ್ತೆ ವಿವಾದಕ್ಕೀಡಾದ ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​ ಹಾಗೂ ಅಲಿಯಾ ಭಟ್​ ತೆರೆಹಂಚಿಕೊಳ್ಳುತ್ತಿರುವ 'ಇನ್ಶಾಅಲ್ಲಾಹ್​' ಸಿನಿಮಾ ಮುಂದಿನ ವರ್ಷ ಅಂದರೆ 2020ರಲ್ಲಿ ರಂಜಾನ್​ಗೆ ತೆರೆಕಾಣಲಿದೆ ಎಂದು ಸಲ್ಮಾನ್​ ಪ್ರಕಟಿಸಿದ್ದಾರೆ.

ಅದರಲ್ಲೂ ಒಂದು ವಿಶೇಷವಿದೆ. ಅದು ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಅದು ಸಹ ಬರೋಬ್ಬರಿ 20 ವರ್ಷಗಳ ನಂತರ. ಈ ಕುರಿತು ಸಲ್ಮಾನ್​ ಮಾಡಿರುವ ಟ್ವೀಟ್​ ಇಲ್ಲಿದೆ.



ಸಲ್ಮಾನ್​ ಖಾನ್​ ಫಿಲ್ಮ್ಸ್​ ಹಾಗೂ ಬನ್ಸಾಲಿ ಪ್ರೊಡಕ್ಷನ್ಸ್​ ಪ್ರೈ. ಲಿ. ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ರಿಲೀಸ್​ ದಿನಾಂಕವನ್ನು ಇಂದು ಪ್ರಕಟಿಸಲಾಗಿದೆ. ಬನ್ಸಾಲಿ ಪ್ರೊಡಕ್ಷನ್ಸ್​ ಪ್ರೈ. ಲಿನ ಸಿಇಒ ಇಂದು ಟ್ವೀಟ್​ ಮಾಡುವ ಮೂಲಕ ವಿಷಯ ಬಹಿರಂಗಪಡಿಸಿದ್ದಾರೆ.

 



ಬುಧವಾರ ತೆರೆಕಂಡ 'ಭಾರತ್​' ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದ್ದು, ಮೊದಲ ದಿನವೇ 42 ಕೋಟಿ ಬಾಚಿಕೊಂಡಿದೆ. ಅದಕ್ಕೆ ಸಲ್ಮಾನ್​ ಟ್ವೀಟ್​ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

 



ಈ ಹಿಂದೆ ಸಲ್ಮಾನ್​ ಖಾನ್​ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಜತೆ 'ಸಾವರಿಯಾ', 'ಹಮ್​ ದಿಲ್​ ದೇಚುಕೆ ಸನಮ್​' ಹಾಗೂ 'ಕಾಮೋಶಿ: ದ ಮ್ಯೂಸಿಕಲ್​' ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

Pailwaan Movie: 'ಪೈಲ್ವಾನ'ನ ಅಖಾಡ ಹೇಗಿದೆ ಗೊತ್ತಾ: ಸಿನಿಮಾ ಸೆಟ್​ನ ಕೆಲವು ಚಿತ್ರಗಳು ನಿಮಗಾಗಿ..!
First published:June 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...