Defamation Case ನಡುವೆ ಧರ್ಮವನ್ನೇಕೆ ಎಳೆದು ತರುತ್ತೀರಿ? Salman Khan ಪ್ರಶ್ನೆ, ಏನಿದು ಪ್ರಕರಣ?

1995ರಲ್ಲಿ ಸಲ್ಮಾನ್ ಖಾನ್ ಅವರ ಪನ್ವೇಲ್‌ನಲ್ಲಿರುವ ಫಾರ್ಮ್ ಹೌಸ್‌ಗೆ ಸಮೀಪವಿರುವ ಜಮೀನೊಂದನ್ನು ಖರೀದಿಸಿದ್ದರು ಎಂದು ವರದಿಯಾಗಿದೆ

ಸಲ್ಮಾನ್ ಖಾನ್

ಸಲ್ಮಾನ್ ಖಾನ್

  • Share this:
ಬಾಲಿವುಡ್ (Bollywood) ಬ್ಯಾಡ್ ಬಾಯ್ ಸಲ್ಮಾನ್‌ ಖಾನ್‌ (Salman Khan) ಹಾಗೂ ಅವರ ವಕೀಲ ಪ್ರದೀಪ್ ಗಾಂಧಿ ಈಗ್ಗೆ ಕೆಲವು ವರ್ಷಗಳಿಂದ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಹೋರಾಡುತ್ತಿದ್ದಾರೆ. ಮಹಾರಾಷ್ಟ್ರದ ಮುಂಬೈ ಬಳಿಯ ತಮ್ಮ ಪನ್ವೇಲ್ ಫಾರ್ಮ್(Panvel Farmhouse) ಹೌಸ್ ಬಳಿಯಿರುವ ನೆರೆಯ ವ್ಯಕ್ತಿಯ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕಾರಣ: ಅವರ ನೆರೆಯ ವ್ಯಕ್ತಿ ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಆರೋಪಗಳನ್ನು ಮಾಡಿದ್ದರು. ಈ ಮೊಕದ್ದಮೆಯು ಗುರುವಾರ ನ್ಯಾಯಾಲಯದೆದುರು ಮತ್ತೆ ವಿಚಾರಣೆಗೆಗೊಳಪಟ್ಟಿತು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರ ವಕೀಲ ಪ್ರದೀಪ್ ಗಾಂಧಿ,(Lawyer Pradeep Gandhi) ಸಲ್ಮಾನ್ ಖಾನ್ ನೆರೆಯ ವ್ಯಕ್ತಿ ಕೇತನ್ ಕಕ್ಕಡ್ (Ketan Kakkad) ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ವಾದಿಸಿದರು.

ಫಾರ್ಮ್ ಹೌಸ್‌ಗೆ ಸಮೀಪವಿರುವ ಜಮೀನು
1995ರಲ್ಲಿ ಸಲ್ಮಾನ್ ಖಾನ್ ಅವರ ಪನ್ವೇಲ್‌ನಲ್ಲಿರುವ ಫಾರ್ಮ್ ಹೌಸ್‌ಗೆ ಸಮೀಪವಿರುವ ಜಮೀನೊಂದನ್ನು ಖರೀದಿಸಿದ್ದರು ಎಂದು ವರದಿಯಾಗಿದೆ. ಆದರೆ, ಈ ಖರೀದಿಯನ್ನು ಮಹಾರಾಷ್ಟ್ರ ಸರ್ಕಾರ ಅಥವಾ ಸಂಬಂಧಿತ ಅರಣ್ಯ ಇಲಾಖೆ ಅಕ್ರಮವೆಂದು ಘೋಷಿಸಿ ರದ್ದುಗೊಳಿಸಿದೆ ಎಂದು ಸಲ್ಮಾನ್ ಖಾನ್ ವಕೀಲ ಪ್ರದೀಪ್ ಗಾಂಧಿ ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ, ಈ ಕುರಿತು ಪ್ರತಿಕ್ರಿಯಿಸಿದ್ದ ಕೇತನ್ ಕಕ್ಕಡ್, ನಟ ಸಲ್ಮಾನ್ ಖಾನ್ ಅವರ ಸೂಚನೆಯ ಮೇರೆಗೆ ಅರಣ್ಯ ಇಲಾಖೆ ತಮ್ಮ ಭೂ ಖರೀದಿಯನ್ನು ಅಕ್ರಮವೆಂದು ಆರೋಪಿಸಿ ರದ್ದುಗೊಳಿಸಿದೆ ಎಂದು ಆಪಾದಿಸಿದ್ದರು. ಇದಾದ ನಂತರ ಸಲ್ಮಾನ್ ಖಾನ್ ಅವರು ತಮ್ಮ ಭೂಮಿಗಿದ್ದ ಏಕಮಾತ್ರ ಪ್ರವೇಶಿಸುವ ಹಾಗೂ ಹೊರಹೋಗುವ ಮಾರ್ಗವನ್ನು ಗೇಟ್ ನಿರ್ಮಿಸುವ ಮೂಲಕ ಮುಚ್ಚಿದ್ದಾರೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Salman Khan: ಈ ನಟಿಯಿಂದಲೇ ಇನ್ನೂ ಸಲ್ಮಾನ್ ಖಾನ್ ಮದುವೆ ಆಗಿಲ್ವಂತೆ, ಯಾರು ಆ ನಟಿ..?

ಗಣೇಶ ದೇವಾಲಯ
ಇದಲ್ಲದೆ ಸಲ್ಮಾನ್ ಖಾನ್ ಅವರು ಪರಿಸರಸ್ನೇಹಿ ಗಣೇಶ ದೇವಾಲಯವೊಂದನ್ನು ನಿರ್ಮಿಸಿದ್ದಾರೆ ಎಂದೂ ಅವರು ಆರೋಪಿಸಿದ್ದರು. ಈ ದೇವಾಲಯಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಅದರ ಮಾಲೀಕತ್ವ ತನ್ನದೆಂದು ಸಲ್ಮಾನ್ ಖಾನ್ ಪ್ರತಿಪಾದಿಸುತ್ತಿದ್ದಾರೆ ಎಂದು ವಾದಿಸಿದ್ದರು. ಇದಲ್ಲದೆ, ಸಲ್ಮಾನ್ ಖಾನ್ ತಮ್ಮ ಭೂಮಿಯನ್ನು ಕಬಳಿಸಿದ್ದಾರೆ ಎಂದೂ ದೂರಿದ್ದರು.

ಈ ಆರೋಪಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಲ್ಮಾನ್ ಖಾನ್ ಪರ ವಕೀಲ ಪ್ರದೀಪ್ ಗಾಂಧಿ, “ಸ್ವತ್ತಿಗೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ನನ್ನ (ಸಲ್ಮಾನ್ ಖಾನ್) ವೈಯಕ್ತಿಕ ಪ್ರತಿಷ್ಠೆಯನ್ನೇಕೆ ಹಾಳುಗೆಡುವುತ್ತಿದ್ದೀರಾ? ನೀವು ಯಾಕೆ ನನ್ನ ಧರ್ಮವನ್ನು ಎಳೆದು ತರುತ್ತಿದ್ದೀರಿ? ನನ್ನ ತಾಯಿ ಹಿಂದೂ, ನನ್ನ ತಂದೆ ಮುಸ್ಲಿಂ ಹಾಗೂ ನನ್ನ ಸಹೋದರರು ಹಿಂದೂಗಳನ್ನು ವಿವಾಹವಾಗಿದ್ದಾರೆ. ನಾವು ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜಕೀಯ ಆಕಾಂಕ್ಷೆಗಳಿಲ್ಲ
ನಟ ಸಲ್ಮಾನ್ ಖಾನ್ ಅವರಿಗೆ ರಾಜಕಾರಣಿಗಳೊಂದಿಗೆ ಸ್ನೇಹ ಸಂಬಂಧವಿದೆ ಎಂಬ ಆರೋಪಗಳ ಕುರಿತೂ ತಿರುಗೇಟು ನೀಡಿದ ಗಾಂಧಿ, “ನನಗೆ (ಸಲ್ಮಾನ್ ಖಾನ್) ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲ. ನಾನು ಎಂದೂ ರಾಜಕಾರಣಿಗಳನ್ನು ಭೇಟಿಯಾಗಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ನೀವು ಇಂತಹ ಆರೋಪಗಳನ್ನು ಮಾಡಲು ವಿದ್ಯಾವಂತ ವ್ಯಕ್ತಿಯಾಗಿದ್ದೀರೇ ಹೊರತು ಯಾವುದೇ ಗೂಂಡಾ ವ್ಯಕ್ತಿಯಲ್ಲ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಲಭದ ಮಾರ್ಗವೆಂದರೆ, ಕೆಲವು ಜನರನ್ನು ಒಗ್ಗೂಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಕ್ರೋಧವನ್ನೆಲ್ಲ ಕಾರಿಕೊಳ್ಳುವುದೇ ಆಗಿಬಿಟ್ಟಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Salman-Samantha: ಸಲ್ಮಾನ್ ಖಾನ್​ ಜೊತೆ ಕೇಳಿ ಬಂತು ಸಮಂತಾ ಹೆಸರು, ಅರೇ... ಆ ಸಮಂತಾ ಅಲ್ಲ ರೀ... ಇವ್ರೇ ಬೇರೆ!

ಮಾನನಷ್ಟ ಮೊಕದ್ದಮೆ
ಸಲ್ಮಾನ್ ಖಾನ್ ನೆರೆಯ ವ್ಯಕ್ತಿಯಾದ ಕೇತನ್ ಕಕ್ಕಡ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದರು. ಇದರಿಂದ  ಕೋಪಗೊಂಡ ಸಲ್ಮಾನ್ ಖಾನ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸ್ವತ್ತಿನ ವ್ಯಾಜ್ಯದ ಕುರಿತ ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರವೂ ಮುಂದುವರಿಸಲಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಎಚ್ ಲಡ್ಡಾ ಅವರು ವಾಸ್ತವವನ್ನು ಪರಿಶೀಲಿಸಲು ಇದೀಗ ಸ್ವತ್ತಿಗೆ ಸಂಬಂಧಿಸಿದ ಅಧಿಕೃತ ಕಾಗದಗಳು ಹಾಗೂ ಭೂಮಿಯ ನಕ್ಷೆಯನ್ನು ಕೋರಿದ್ದಾರೆ.
Published by:vanithasanjevani vanithasanjevani
First published: