Salman Khan-Kichcha Sudeep: ಪ್ರಭುದೇವ ಜತೆ ಸಲ್ಲು-ಕಿಚ್ಚ ಸಖತ್​ ಸ್ಟೆಪ್​: ವೈರಲ್​ ಆಗುತ್ತಿದೆ ಈ ಡಾನ್ಸ್​ ವಿಡಿಯೋ..!

Salman Khan-Kichcha Sudeep: ನಟ ಪ್ರಭುದೇವ ಅಭಿನಯದ 'ಕಾದಲನ್​' ಸಿನಿಮಾದ ಸೂಪರ್​ ಹಿಟ್​ ಸಾಂಗ್​ ಊರ್ವಶಿ ಊವರ್ಶಿ... ಹಾಡಿಗೆ ಈಗ ಸಲ್ಲು ಹಾಗೂ ಕಿಚ್ಚ ಸುದೀಪ್​ ಡಾನ್ಸ್​ ಮಾಡಲು ಮುಂದಾಗಿದ್ದಾರೆ. ಈ ಹಾಡಿಗೆ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದ ಪ್ರಭುದೇವ ಅವರಿಂದಲೇ ಸಲ್ಮಾನ್​ ಹಾಗೂ ಕಿಚ್ಚ ಸ್ಟೆಪ್ಸ್​ ಹೇಳಿಸಿಕೊಳ್ಳುತ್ತಿರುವುದು ವಿಶೇಷ.

ಪ್ರಭುದೇವಾರಿಂದ ಡಾನ್ಸ್​ ಕಲಿಯುತ್ತಿರುವ ಕಿಚ್ಚ ಹಾಗೂ ಸಲ್ಲು

ಪ್ರಭುದೇವಾರಿಂದ ಡಾನ್ಸ್​ ಕಲಿಯುತ್ತಿರುವ ಕಿಚ್ಚ ಹಾಗೂ ಸಲ್ಲು

  • News18
  • Last Updated :
  • Share this:
- ಅನಿತಾ ಈ, 

ಸಲ್ಮಾನ್​ ಖಾನ್​ ಹಾಗೂ ಕಿಚ್ಚ ಸುದೀಪ್​ ಇದೇ ಮೊದಲ ಬಾರಿಗೆ ಡಾನ್ಸ್​ ಕ್ಲಾಸ್​ ಸೇರಿಕೊಂಡಿದ್ದಾರೆ. ಅವರಿಗೆ ಈಗ ನೃತ್ಯ ಕಲಿಯುವ ಆಸೆಯಾಗಿದ್ದು, ಅವರಿಗೊಬ್ಬರು ಗುರುವೂ ಸಿಕ್ಕಿದ್ದಾರೆ. ಏನಿದು ಈಗ ಯಾವ ಡಾನ್ಸ್​ ಕ್ಲಾಸ್​ ಅಂತೀರಾ..? ಮುಂದೆ ಓದಿ...

ನಟ ಪ್ರಭುದೇವ ಅಭಿನಯದ 'ಕಾದಲನ್​' ಸಿನಿಮಾದ ಸೂಪರ್​ ಹಿಟ್​ ಸಾಂಗ್​ ಊರ್ವಶಿ ಊವರ್ಶಿ... ಹಾಡಿಗೆ ಈಗ ಸಲ್ಲು ಹಾಗೂ ಕಿಚ್ಚ ಸುದೀಪ್​ ಡಾನ್ಸ್​ ಮಾಡಲು ಮುಂದಾಗಿದ್ದಾರೆ. ಈ ಹಾಡಿಗೆ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದ ಪ್ರಭುದೇವ ಅವರಿಂದಲೇ ಸಲ್ಮಾನ್​ ಹಾಗೂ ಕಿಚ್ಚ ಸ್ಟೆಪ್ಸ್​ ಹೇಳಿಸಿಕೊಳ್ಳುತ್ತಿರುವುದು ವಿಶೇಷ.

Prabhudeva teaching dance to Salman and Sudeep
ಪ್ರಭುದೇವ, ಸಲ್ಮಾನ್​ ಹಾಗೂ ಸುದೀಪ್​


Prabhudeva teaching dance to Salman, Sudeep and Sajid Nadiadwala
ಪ್ರಭುದೇವ ಅವರಿಂದ ಡಾನ್ಸ್​ ಕಲಿಯುತ್ತಿರುವ ಸಲ್ಮಾನ್,​ ಸುದೀಪ್​ ಹಾಗೂ ನಿರ್ಮಾಪಕ ಸಾಜಿದ್​ ನಾಡಿಯಾದ್​ವಾಲಾ


ಸಲ್ಮಾನ್​ ಖಾನ್​ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಇದರಲ್ಲಿ ಪ್ರಭುದೇವ ಅವರು ಸಲ್ಮಾನ್​ ಖಾನ್​, ನಿರ್ಮಾಪಕ ಸಾಜಿದ್​ ನಾಡಿಯಾದ್​ವಾಲಾ ಹಾಗೂ ಸುದೀಪ್​ಗೆ ಸ್ಟೆಪ್ಸ್​ ಹೇಳಿಕೊಡುತ್ತಿದ್ದಾರೆ. ಈ ವಿಡಿಯೋವನ್ನು ಸಲ್ಮಾನ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮಾಸ್ಟರ್ ಪ್ರಭುದೇವಾ ಅವರಿಂದ ಡಾನ್ಸ್​ ಕ್ಲಾಸ್​ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

Dance class from the master himself . . @PDdancing @KicchaSudeep #WardakhanNadiadwala pic.twitter.com/fiQiNDmQEGಇನ್ನು ಈ ವಿಡಿಯೋ ನೋಡಿದರೆ ಸಲ್ಲು, ಪ್ರಭು, ಕಿಚ್ಚ ಹಾಗೂ ಸಾಜಿದ್​ ಪಾರ್ಟಿ ಮೂಡ್​ನಲ್ಲಿದ್ದು, ಮಜಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದು ಮೂಲಗಳ ಪ್ರಕಾರ ಇವರು ಹಾಡಿನ ಅಭ್ಯಾಸದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಹಾಡು 'ದಬಂಗ್​ 3' ಚಿತ್ರದಲ್ಲಿ ಕಾಣಿಸಿಕೊಂಡರೂ ಆಶ್ಚರ್ಯ ಪಡಬೇಕಿಲ್ಲ.

ಇದನ್ನೂ ಓದಿ: Kurukshetra: 'ಬಾಹುಬಲಿ' ನಿರ್ದೇಶಕ ಎಸ್​.ಎಸ್​. ರಾಜಮೌಳಿರ ಕನಸನ್ನು ನುಚ್ಚುನೂರು ಮಾಡಿದ ಸ್ಯಾಂಡಲ್​ವುಡ್​ ನಿರ್ದೇಶಕ..!

'ದಬಂಗ್​ 3'ರ ಈ ಜೋಡಿಗಳು ಡಾನ್ಸ್​ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಈ ವಿಡಯೋವನ್ನು ಓಗ ಸುದೀಪ್​ ಸಹ ಶೇರ್​ ಮಾಡಿದ್ದಾರೆ.

 'ದಬಂಗ್​ 3' ಸಿನಿಮಾದಲ್ಲಿ ಕಿಚ್ಚ ಸುದೀಪ್​ ಸಲ್ಮಾನ್​ ಖಾನ್​ ಜತೆ ತೆರೆ ಹಂಚಿಕೊಳ್ಳುತ್ತಿದ್ದು, ಇದರ ಚಿತ್ರೀಕರಣದ ವೇಳೆಯೇ ಈ ವಿಡಿಯೋ ವನ್ನು ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಸುದೀಪ್​ ವಿಲನ್​ ಆಗಿ ಸಲ್ಮಾನ್​ ಮುಂದೆ ತೊಡೆ ತಟ್ಟಲಿದ್ದು, ಪ್ರಭುದೇವ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Jennifer Lopez: ವಯಸ್ಸು 50ರ ಗಡಿ ದಾಟಿದರೂ ಇನ್ನೂ ಬಳುಕುವ ಬಳ್ಳಿಯಂತಿರುವ ಹಾಟ್​ ಬೇಬಿ ಜೆನಿಫರ್​..!
First published: