ಸಲಗಕ್ಕೆ ಪವರ್ ಕೊಟ್ಟ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ !

ಅಂದಹಾಗೆ ಸಲಗ ಖೆಡ್ಡಾ ರೆಡಿ ಮಾಡುತ್ತಿರುವುದು ಈ ಹಿಂದೆ ಟಗರು ಮೂಲಕ ಅಬ್ಬರಿಸಿದ ಚಿತ್ರತಂಡ ಎಂಬುದು ಮತ್ತೊಂದು ವಿಶೇಷ.

zahir | news18
Updated:May 25, 2019, 10:13 PM IST
ಸಲಗಕ್ಕೆ ಪವರ್ ಕೊಟ್ಟ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ !
Puneeth Rajkumar
zahir | news18
Updated: May 25, 2019, 10:13 PM IST
ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿ ಮರೆಯಾಗಿದ್ದ ದುನಿಯಾ ವಿಜಯ್ ಮತ್ತೆ ಬರುತ್ತಿದ್ದಾರೆ. ಆದರೆ ಈ ಬಾರಿ ಕೇವಲ ನಟನಾಗಿ ಮಾತ್ರವಲ್ಲ ಎಂಬುದೇ ವಿಶೇಷ. ಹೌದು, ದುನಿಯಾ ನಟ ಡೈರೆಕ್ಟರ್ ಕ್ಯಾಪ್​ ಧರಿಸಲು ನಿರ್ಧರಿಸಿರುವುದು ಗೊತ್ತಿದೆ. ಇದೀಗ ವಿಜಯ್ ನಿರ್ದೇಶಿಸುತ್ತಿರುವ 'ಸಲಗ' ಚಿತ್ರಕ್ಕೆ ಅಧಿಕೃತ ಚಾಲನೆ ದೊರೆತಿದೆ.

ಇತ್ತೀಚೆಗಷ್ಟೇ ಸಿನಿಮಾದ ಸ್ಕ್ರಿಪ್ಟ್​​ಗೆ ಪೂಜೆ ನೆರವೇರಿಸಿಕೊಂಡು ಕನ್ನಡದ ಒಂದಷ್ಟು ಸ್ಟಾರ್​ ನಟರುಗಳನ್ನು ಭೇಟಿಯಾಗಿ ವಿಜಯ್ ಮತ್ತು 'ಸಲಗ' ತಂಡ ಆಶೀರ್ವಾದ ಪಡೆದಿತ್ತು. ಕೆಲ ದಿನಗಳ ಹಿಂದೆ ಇದೇ ತಂಡ ಸ್ಯಾಂಡಲ್​ವುಡ್​ ಪವರ್​ ಸ್ಟೇಷನ್ ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್ ಅವರನ್ನು ಭೇಟಿಯಾಗಿದೆ.

ಈ ವೇಳೆ 'ಸಲಗ' ಚಿತ್ರದ ಬಗ್ಗೆ ಅಪ್ಪುನೊಂದಿಗೆ ದುನಿಯಾ ವಿಜಯ್ ಮತ್ತು ತಂಡ ಚರ್ಚಿಸಿದ್ದು, ಯಾವುದೇ ಭಯವಿಲ್ಲದೇ ನಿರ್ದೇಶನ ಮಾಡುವಂತೆ ದುನಿಯಾ ವಿಜಯ್​ ಅವರನ್ನು ಪುನೀತ್ ರಾಜ್ ಕುಮಾರ್ ಹುರಿದುಂಬಿಸಿದ್ದಾರೆ. ಅಲ್ಲದೆ ಬೇಕಾಗಿರುವ ಸಹಾಯ ಮಾಡುವುದಾಗಿ ಪುನೀತ್ ರಾಜ್ ಕುಮಾರ್​ ಸಹ ಮಾತಿಟ್ಟಿದ್ದಾರೆ. ಇದರಿಂದ ದುನಿಯಾ ವಿಜಯ್​ಗೆ ಮತ್ತಷ್ಟು ಬಲದಂತಾಗಿದೆ ಎನ್ನಲಾಗಿದೆ.

ಪುನೀತ್ ರಾಜ್​ಕುಮಾರ್, ದುನಿಯಾ ವಿಜಯ್, ಕೆ.ಪಿ ಶ್ರೀಕಾಂತ್


ಅಂದಹಾಗೆ 'ಸಲಗ' ಖೆಡ್ಡಾ ರೆಡಿ ಮಾಡುತ್ತಿರುವುದು ಈ ಹಿಂದೆ 'ಟಗರು' ಮೂಲಕ ಅಬ್ಬರಿಸಿದ ಚಿತ್ರತಂಡ ಎಂಬುದು ಮತ್ತೊಂದು ವಿಶೇಷ. ಟಗರಿನ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿದ್ದ ತಂತ್ರಜ್ಞರೇ 'ಸಲಗ'ದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ವಿಜಯ್ ಟಕ್ಕರ್ ಕೊಡಲು 'ಟಗರು' ಡಾಲಿ ಧನಂಜಯ್ ಕೂಡ ಈ ಸಿನಿಮಾದಲ್ಲಿರಲಿದ್ದಾರೆ. ಭೂಗತ ಜಗತ್ತಿನ ಹೊಸ ಕಥೆಯೊಂದು 'ಸಲಗ'ದಲ್ಲಿ ಅನಾವರಣವಾಗಲಿದೆ ಎಂಬುದು ಚಿತ್ರದ ತಂಡ ಅಂಬೋಣ.


Loading...

ದುನಿಯಾ ವಿಜಯ್​ ಅವರ ಚೊಚ್ಚಲ ನಿರ್ದೇಶನಕ್ಕೆ ಸಾಥ್ ನೀಡಿರುವುದು ಸಹ 'ಟಗರು' ನಿರ್ಮಾಪಕ ಕೆ.ಪಿ ಶ್ರೀಕಾಂತ್. ಈಗಾಗಲೇ ಮೂಹೂರ್ತ ಮುಗಿಸಿರುವ 'ಸಲಗ'ಕ್ಕೆ ಪವರ್​ ಸ್ಟಾರ್ ಕಡೆಯಿಂದ ಶುಭಾಶಯ ಸಿಕ್ಕಿರುವುದು, ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಕೆಲ ವರ್ಷಗಳಿಂದ ಚಿತ್ರರಂಗದಿಂದ ಮರೆಯಾಗಿದ್ದ ದುನಿಯಾ ವಿಜಯ್ 'ಸಲಗ' ಮೂಲಕ ಬಾಕ್ಸಾಫೀಸ್​ನಲ್ಲಿ ಘರ್ಜಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆತ್ತಲೆ ಫೋಟೋ ಕಳಿಸಿ ಎಂದವನಿಗೆ 'ನ್ಯೂಡ್ಸ್ ಪಿಕ್​' ಕಳಿಸಿದ ಗಾಯಕಿ..!

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...