ಕೊರೋನಾ ಸೋಂಕಿನಿಂದಾಗಿ ಎಲ್ಲೆಡೆ ಲಾಕ್ಡೌನ್ ಮಾಡಿ ಆರು ತಿಂಗಳು ಕಳೆವಿದೆ. ಈ ನಡುವೆ ಹಂತ ಹಂತವಾಗಿ ಲಾಕ್ಡೌನ್ ಅನ್ನು ಸಡಿಲಗೊಳ್ಳಿಸಲಾಗುತ್ತಿದೆ. ಅನ್ಲಾಕ್ 5ರ ಮಾರ್ಗಸೂಚಿ ಪ್ರಕಾರ ಈಗ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅದರಲ್ಲೂ ನಿಯಮ ಹಾಗೂ ಮಾರ್ಗಸೂಚಿ ಪಾಲಿಸುವಂತೆ ಹೇಳುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಚಿತ್ರಮಂದಿರಗಳ ಮಾಲೀಕರು, ಮಲ್ಪಿಪ್ಲೆಕ್ಸ್ನವರು ಹಾಗೂ ಸಿನಿಪ್ರಿಯರು ಸಖತ್ ಖುಷಿಯಲ್ಲಿದ್ದಾರೆ. ಅಂತೆಯೇ ಈ ಹಿಂದೆ ಲಾಕ್ಡೌ್ನ್ ಆರಂಭವಾಗುವ ಮುನ್ನ ರಿಲೀಸ್ ಆಗಿದ್ದ ಸಿನಿಮಾಗಳನ್ನು ಮತ್ತೆ ರಿಲೀಸ್ ಮಾಡಲು ಚಿತ್ರತಂಡಗಳು ನಿರ್ಧರಿಸಿವೆ. ಇವುಗಳ ಜೊತೆಗೆ ಸ್ಟಾರ್ ನಟರ ಹೊಸ ಸಿನಿಮಾಗಳೂ ತೆರೆ ಕಾಣಲು ಸಾಲಿನಲ್ಲಿವೆ. ಆದರೆ ಕೆಲವರು ಮಾತ್ರ ಚಿತ್ರಮಂದಿರ ತೆರೆದರೂ ನಾವು ಮಾತ್ರ ನಮ್ಮ ಸಿನಿಮಾ ರಿಲೀಸ್ ಮಾಡೋದಿಲ್ಲ ಎನ್ನುತ್ತಿದ್ದಾರೆ.
ಹೌದು, ಚಿತ್ರಮಂದಿರ ತೆರೆಯಲು ಸರ್ಕಾರದಿಂದ ಅನುಮತಿ ನೀಡಿದೆ. ಆದರೆ ಇದು ಷರತ್ತುಬದ್ಧ ಅನುಮತಿಯಾಗಿದ್ದು, ಈಗ ಚಿತ್ರಮಂದಿರಗಳಿಗೆ ಶೇ 50ರಷ್ಟು ಮಾತ್ರ ಪ್ರೇಕ್ಷಕರು ಬರಲಿದ್ದಾರೆ. ಇದರಿಂದಾಗಿ ನಾವು ನಮ್ಮ ಸಲಗ ಚಿತ್ರವನ್ನು ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.
ಮೈಸೂರಿನಲ್ಲಿ ಮಾತನಾಡಿರುವ ಶ್ರೀಕಾಂತ್ ಅವರು, ಚಿತ್ರಮಂದಿರ ತೆರೆಯಲು ಅವಕಾಶ ನೀಡಿದ್ದಾರೆ ಸರಿ, ಶೇ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿರೋದಕ್ಕೆ ನಮಗೆ ಅಸಮಾಧಾನ ಇದೆ. ನಮ್ಮದು ದೊಡ್ಡ ಬಜೆಟ್ ಸಿನಿಮಾ. ಇದಕ್ಕೆ ಅರ್ಧ ಪ್ರೇಕ್ಷಕರಿಗೆ ಚಿತ್ರ ನೋಡಲು ಅವಕಾಶ ನೀಡಿದ್ರೆ ನಷ್ಟವಾಗುತ್ತೆ. ಸಲಗ ಚಿತ್ರವಂತೆ ಪೂರ್ಣಪ್ರಮಾಣ ಥಿಯೇಟರ್ ಓಪನ್ ಆದ ಮೇಲೆಯೇ ತೆರೆಗೆ ಬರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಕರಸೇವಕರ ಮೇಲೆ ಗುಂಡು ಹಾರಿಸಿದ್ದನ್ನು ಕ್ಷಮಿಸಿ, ಆದರೆ ಮರೆಯಬೇಡಿ ಎಂದ ಪ್ರಣೀತಾ ಸುಭಾಷ್..!
ಆ್ಯಕ್ಟಿವ್ ಪ್ರೊಡ್ಯೂಸರ್ ಟೀಂನಿಂದ ಸೋಮವಾರ ಸಭೆ ಕರೆದಿದ್ದೇವೆ. ಆ ತಂಡದಲ್ಲಿ ರಾಬರ್ಟ್, ಕೋಟಿಗೊಬ್ಬ, ಕೆಜಿಎಫ್, ಯುವರತ್ನ ಸಲಗ ಚಿತ್ರ ನಿರ್ಮಾಪಕರಿದ್ದಾರೆ. ಎಲ್ಲರೂ ಒಟ್ಟಾಗಿ ಕುಳಿತು ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಯಾವ ಚಿತ್ರ ಬಿಡುಗಡೆ ಮಾಡಬೇಕು ಅನ್ನೋ ಬಗ್ಗೆಯೂ ನಿರ್ಧಾರ ಮಾಡ್ತಿವಿ. ಆದರೆ ದೊಡ್ಡ ಬಜೆಟ್ನ ಸಿನಿಮಾಗಳಿಗೆ ಅರ್ಧ ಪ್ರೇಕ್ಷಕರು ಸಾಕಗೋದಿಲ್ಲ. ನಮಗೆ ಪೂರ್ತಿ ಅನುಮತಿ ಸಿಕ್ಕರಷ್ಟೆ ನಾವು ಚಿತ್ರ ಬಿಡುಗಡೆ ಮಾಡಲು ಆಗೋದು. ಓಟಿಟಿ ವೇದಿಕೆಗಳು ದೊಡ್ಡ ಬಜೆಟ್ ಸಿನಿಮಾಗಳಿಗೆ ಸರಿಹೊಂದುವುದಿಲ್ಲ ಎಂದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ ನಿರ್ಮಾಪಕ ಕೆ,ಪಿ. ಶ್ರೀಕಾಂತ್ ಹೇಳಿಕೆ.
ದುನಿಯಾ ವಿಜಯ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಸಲಗ. ಅವರೇ ಹೀರೋ ಆಗಿದ್ದು, ಅವರಿಗೆ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ಕೂಡಲೇ ಕೇವಲ 12 ಮಂದಿ ಸದಸ್ಯರೊಂದಿಗೆ ಮಲೆನಾಡಿಗೆ ತೆರಳಿದ ಸಲಗ ಟೀಂ, ಅಲ್ಲಿನ ಹಸಿರ ಸಿರಿಯ ನಯನ ಮನೋಹರ ಸುಂದರ ಪರಿಸರದಲ್ಲಿ ರೊಮ್ಯಾಂಟಿಕ್ ಹಾಡನ್ನು ಶೂಟ್ ಮಾಡಿಕೊಂಡು ವಾಪಸ್ಸಾಗಿದೆ.
ಇದನ್ನೂ ಓದಿ: Rashmika Mandanna: ವೈರಲ್ ಆಗುತ್ತಿದೆ ರಶ್ಮಿಕಾ ಮಂದಣ್ಣ ಬೀಚ್ ವರ್ಕೌಟ್ ವಿಡಿಯೋ..!
ಸಲಗ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಈಗಾಗಲೇ ಸೂರಿ ಅಣ್ಣ ಸಾಂಗ್ ಸಖತ್ ವೈರಲ್ ಆಗಿದೆ. ಅದರ ಬೆನ್ನಲ್ಲೇ ಈಗ ನಾಯಕ ದುನಿಯಾ ವಿಜಯ್ ಹಾಗೂ ನಾಯಕಿ ಸಂಜನಾ ಆನಂದ್ ಅವರ ನಡುವಿನ ಈ ರೊಮ್ಯಾಂಟಿಕ್ ಸಾಂಗ್ ಮತ್ತಷ್ಟು ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ