Salaar: 'ಸಲಾರ್’ ನಲ್ಲಿ ಪ್ರಭಾಸ್ ಉಗ್ರಂ ಅವತಾರ?ಸಲಾರ್, ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ಕೇವಲ ಅನೌನ್ಸ್ ಆದಾಗಿನಿಂದಲೇ ಮೌಂಟ್ ಎವರೆಸ್ಟ್ ಎತ್ತರಕ್ಕೂ ಮೀರಿದ ನಿರೀಕ್ಷೆ ಈ ಚಿತ್ರದ ಮೇಲೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣನೇ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ಅಂದರೆ ತಪ್ಪಾಗದು. ಒಂದು ಕಡೆ ಬಾಹುಬಲಿ ಮೂಲಕ ತೆಲುಗು ಚಿತ್ರರಂಗದ ಮಾರುಕಟ್ಟೆಯನ್ನ ಜಾಗತಿಕ ಮಟ್ಟಕ್ಕೆ ಏರಿಸಿದ ನಟ, ಇನ್ನೊಂದು ಕಡೆ ಕರ್ನಾಟಕಕಷ್ಟೇ ಸಿಮೀತ ಅನಿಸಿಕೊಂಡಿದ್ದ ಚಿತ್ರರಂಗವನ್ನು ನ್ಯಾಷನಲ್ ಲೆವಲ್ ಗೆ ಕೊಂಡೊಯ್ದ ನಿರ್ದೇಶಕ. ಇವರಿಬ್ಬರು ಈಗ ಒಟ್ಟಾಗಿದ್ದಾರೆ ಅಂದರೆ ಭೂಮಿ ಆಕಾಶ ಒಂದಾದಂತೆ ಅನ್ನುವಷ್ಟು ಆಸೆ, ಆಕಾಂಕ್ಷೆ ಚಿತ್ರಪ್ರೇಮಿಗಳದ್ದು.
ಅಂದಹಾಗೆಯೇ, ಸದ್ಯ ಪ್ರಶಾಂತ್ ನೀಲ್ ಕೆಜಿಎಫ್-2 ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಪ್ರಭಾಸ್ ರಾಧೆ ಶ್ಯಾಮಾ ಶೂಟಿಂಗ್ ನಲ್ಲಿದ್ದಾರೆ. ಹೀಗಿರುವಾಗ ಸಡನ್ ಆಗಿ ಸಲಾರ್ ಅನೌನ್ಸ್ ಮೆಂಟ್ ಬೆಂಗಳೂರು ಟು ಹೈದರಾಬಾದ್ ಚಿತ್ರೋದ್ಯಮಿಗಳನ್ನ ದಂಗು ಬಡಿಸಿದೆ. ಇದೆಲ್ಲಾ ಹೇಗೆ ಸಾಧ್ಯ ಅಂತ ಕೆಲವು ಸಿನಿಪಂಡಿತರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ರಾಧೆ ಶ್ಯಾಮಾ ನಂತರ ಮತ್ತೆರಡು ಭಾರಿ ಬಜೆಟ್ ನ ಸಿನಿಮಾಗಳನ್ನ ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಆ ಎರಡು ಸಿನಿಮಾ ಮುಗಿಬೇಕಾದರೆ 3 ವರ್ಷ ಬೇಕು. ಇನ್ನು ಕೆಜಿಎಫ್-2 ಗೆ ತನುಮನವನ್ನೇ ಅರ್ಪಿಸಿ ಕೆಲಸ ಮಾಡುತ್ತಿರುವ ಪ್ರಶಾಂತ್ ನೀಲ್. ಹಾಗಾದರೆ ಪ್ರಶಾಂತ್ ನೀಲ್ ಯಾವ ಗ್ಯಾಪ್ ನಲ್ಲಿ ಕಥೆ - ಚಿತ್ರಕಥೆ ಬರೆದರು. ಅದನ್ನ ಕೇಳಿ ಯಾವ ಗ್ಯಾಪ್ ನಲ್ಲಿ ಪ್ರಭಾಸ್ ಓಕೆ ಮಾಡಿದರು ಎಂಬ ಕುತೂಹಲ ಸಿನಿ ಪ್ರೇಮಿಗಳದ್ದು.
ಮೂಲಗಳ ಪ್ರಕಾರ ಸ್ವತಃ ಪ್ರಭಾಸ್ ಗೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುವ ಇಚ್ಛೆ ಉಂಟಾಗಿದೆ. ಯಾಕೆಂದರೆ ಸದ್ಯ ರಿಲೀಸ್ ಗೆ ಸಜ್ಜಾಗುತ್ತಿರುವ ರಾಧೆ ಶ್ಯಾಮಾ ತುಂಬಾ ಸಾಫ್ಟ್ ಲವ್ ಸ್ಟೋರಿ, ಅದರಲ್ಲಿ ಒಂದೇ ಒಂದು ಆಕ್ಷನ್ ಸಹ ಇಲ್ವಂತೆ. ಹೀಗಿರುವಾಗ ನಾರ್ತ್ ಸೆಕ್ಟರ್ ನಲ್ಲಿ ಅದರಲ್ಲೂ ಬಿಹಾರದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಗಳಿಸಿರೋ ಪ್ರಭಾಸ್ ಗೆ ಅಲ್ಲೆಲ್ಲಾ ರಾಧೆ ಶ್ಯಾಮಾ ಕ್ಲಿಕ್ ಆಗಲಿದೆ ಎಂಬುದರ ಮೇಲೆ ಅನುಮಾನ. ಹೀಗಾಗಿ ತನಗಿರೋ ಇಮೇಜನ್ನ ಕಾಪಾಡಿಕೊಳ್ಳಲು, ಹಾಗೆ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಪ್ರಭಾಸ್ ಗೆ ತುರ್ತಾಗಿ ಒಂದು ಮಾಸ್ ಸಿನಿಮಾ ಬೇಕಾಗಿದ್ದು, ಸ್ವತಃ ಪ್ರಭಾಸ್ & ಟೀಮ್ ಪ್ರಶಾಂತ್ ನೀಲ್ ಗೆ ಸಿನಿಮಾ ಮಾಡಿಕೊಡುವಂತೆ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಅವರ ಕೋರಿಕೆಯಂತೆ ಸಿನಿಮಾ ಮಾಡಲು ಪ್ರಶಾಂತ್ ಒಪ್ಪಿದ್ದು, ಈಗಾಗಲೇ ಕನ್ನಡದಲ್ಲಿ ಹಿಟ್ ಆಗಿರೋ ಉಗ್ರಂ ಸಿನಿಮಾವನ್ನೇ ಸಾಕಷ್ಟು ಮಾರ್ಪಾಡುಗಳನ್ನು ಮಾಡಿಕೊಂಡು ತೆಲುಗಿಗೆ ನಿರ್ದೇಶನ ಮಾಡಿಕೊಡುತ್ತೇನೆ ಎಂಬ ಷರತ್ತಿನ ಮೇಲೆ ಪ್ರಶಾಂತ್ ಡೈರೆಕ್ಷನ್ ಗೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕನ್ನಡದ ಮುಗೋರ್, ಬಿಹಾರ್ ಅಥವಾ ಇನ್ಯಾವುದೋ ಬ್ಯಾಕ್ ಡ್ರಾಪ್ ನಲ್ಲಿ ಮರುಸೃಷ್ಟಿಯಾಗಲಿದೆ. ಇಲ್ಲಿಯ ಅಗಸ್ತ್ಯ ಅಲ್ಲಿ ಸಲಾರ್ ಆಗಿ ಅಬ್ಬರಿಸಲಿದ್ದಾನೆ ಅನ್ನೋದು ಗಾಂಧಿ ನಗರದ ಗಲ್ಲಿಗಳಲ್ಲಿ ಹರಡಿರೋ ಗಾಸಿಪ್. ಇದು ಎಷ್ಟರಮಟ್ಟಿಗೆ ನಿಜ ಅಂತ ತಿಳಿಯೋಕೆ ಒಂದಷ್ಟು ದಿನಗಳಾದರೂ ಕಾಯಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ