ಕೆಜಿಎಫ್ ಸಿನಿಮಾದಲ್ಲಿ ವ್ಯಸ್ತವಾಗಿರುವ ಸ್ಯಾಂಡಲ್ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ಪ್ಯಾನ್ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಜೂನಿಯರ್ ಎನ್ಟಿಆರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿಯೂ ಟಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಹೀಗಿರುವಾಗಲೇ ಕೆಜಿಎಫ್ ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಪ್ರಕಟಿಸಿದೆ. ಕೆಲವೇ ಕ್ಷಣಗಳ ಹಿಂದೆಯಷ್ಟೆ ಹೊಂಬಾಳೆ ಫಿಲಂಸ್ ಈ ಸಿನಿಮಾದ ಟೈಟಲ್ ಪೋಸ್ಟರ್ ಹಂಚಿಕೊಂಡಿದೆ. ಸಲಾರ್ ಎಂದು ಟೈಟಲ್ ಇಟ್ಟಿರುವ ಚಿತ್ರದಲ್ಲಿ ಪ್ರಭಾಸ್ ಮೋಸ್ಟ್ ವೈಲೆಂಟ್ ಮ್ಯಾನ್ ಆಗಿ ಕಾಣಿಸಿಕೊಳ್ಳಿದ್ದಾರೆ, ಈ ಸಿನಿಮಾಗೆ ನಿರ್ದೇಶಕರಾಗಿ ಪ್ರಶಾಂತ್ ನೀಲ್ ಸಾರಥ್ಯ ವಹಿಸಿಕೊಂಡಿದ್ದಾರೆ. ಇನ್ನು ಟೈಟಲ್ ಪೋಸ್ಟರ್ ನೋಡಿದ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ.
ಪ್ರಭಾಸ್ ಅವರ ಸಖಡ್ ಲುಕ್ನಲ್ಲಿರುವ ಪೋಸ್ಟರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೀಸೆ ಹಾಗೂ ಗಡ್ಡ ಬಿಟ್ಟಿರುವ ಪ್ರಭಾಸ್ ಕೈಯಲ್ಲಿ ಗನ್ ಹಿಡಿದು ಕುಳಿತಿದ್ದು, ಕೊಟ್ಟಿರುವ ಲುಕ್ ನೋಡಿದರೆ, ಇದೊಂದು ರಕ್ತಸಿಕ್ತ ಆ್ಯಕ್ಷನ್ ಸಿನಿಮಾ ಎಂದೆನಿಸುತ್ತದೆ. ಅದಕ್ಕೆ ಪೋಸ್ಟರ್ನಲ್ಲಿ ದ ಮೋಸ್ಟ್ ವೈಲೆಂಟ್ ಮ್ಯಾನ್... ಕಾಲ್ಡ್ ಒನ್ ಮ್ಯಾನ್... ದ ಮೋಸ್ಟ್ ವೈಲೆಂಟ್ ಎಂದು ಟ್ಯಾಗ್ ಲೈಗ್ ಸಹ ಕೊಡಲಾಗಿದೆ.
#Prabhas in #SALAAR
THE MOST VIOLENT MEN.. CALLED ONE MAN.. THE MOST VIOLENT!!
Revealing our next Indian Film, an Action Saga.@VKiragandur @prashanth_neel pic.twitter.com/RqaIPwSUiB
— Hombale Films (@hombalefilms) December 2, 2020
#SALAAR
THE MOST VIOLENT MEN.. CALLED ONE MAN.. THE MOST VIOLENT!!
With open arms, ನಮ್ಮ ಕನ್ನಡ ನಾಡಿಗೆ, I welcome you home #Prabhas.@hombalefilms @VKiragandur @prashanth_neel pic.twitter.com/daCFKjqiK3
— Puneeth Rajkumar (@PuneethRajkumar) December 2, 2020
View this post on Instagram
An Action Saga #SALAAR.
THE MOST VIOLENT MEN.. .CALLED ONE MAN... THE MOST VIOLENT!!
For the love of cinema, breaking the fence of languages, presenting to you an Indian Film.
Dearest welcome to Darling #Prabhas sir.@hombalefilms @VKiragandur pic.twitter.com/PKOfQKkSM6
— Prashanth Neel (@prashanth_neel) December 2, 2020
ಇನ್ನು ಬಾಹುಬಲಿ ಹಾಗೂ ಸಾಹೋ ಸಿನಿಮಾದ ನಂತರ ಪ್ರಭಾಸ್ ಸಾಲು ಸಾಲು ಪ್ಯಾನ್ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಿರ್ದೇಶಕ ಓಂ ರಾವತ್ ಜೊತೆ ಆದಿಪುರುಷ್, ರಾಧಾಕೃಷ್ಣ ಅವರ ರಾಧೆ ಶ್ಯಾಮ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಇನ್ನೂ ಹೆಸರಿಡದ ಸಿನಿಮಾಗೆ ಸಹಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ