ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಯಶಸ್ಸು ಕಂಡ ನಂತರ ನಟ ಗಣೇಶ್ (Actor Ganesh) ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ಕೊಡುತ್ತಾ ಸ್ಯಾಂಡಲ್ವುಡ್ನಲ್ಲಿ ಗೋಲ್ಡನ್ ಸ್ಟಾರ್ (Golden Star) ಆಗಿ ಮಿಂಚುತ್ತಿದ್ದಾರೆ. ಕಾಮಿಟಿ ಟೈಮ್ ಗಣೇಶ್ ಎಂದೇ ಕನ್ನಡಿಗರಿಗೆ ಚಿರಪರಿತರಾಗಿದ್ದವರು ಈಗ ಗೋಲ್ಡನ್ ಸ್ಟಾರ್ ಆಗಿ ಮುಂಗಾರುಗ ಮಳೆ ಹುಡುಗನಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಇಂತಹ ನಟನ ಬಹುನಿರೀಕ್ಷಿತ ಸಿನಿಮಾ ಸಖತ್ (Sakath Movie). ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ.
2019ರಲ್ಲಿ ತೆರೆ ಕಂಡ 'ಬಜಾರ್' ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಿರ್ದೇಶಕ ಸಿಂಪಲ್ ಸುನಿ 'ಸಖತ್' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಗಣೇಶ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಗಣೇಶ್ ಅವರು ಈ ಸಿನಿಮಾದಲ್ಲಿ ಕಣ್ಣು ಕಾಣಸ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಬ್ಯಾನರ್ನಡಿಯಲ್ಲಿ ಈ ಚಿತ್ರ ಮೂಡಿ ಬರುತ್ತಿರುವ ‘ಸಖತ್’ ಸಿನಿಮಾ ಇತ್ತೀಚೆಗಷ್ಟೆ ಸೆನ್ಸಾರ್ನಲ್ಲಿ ಪಾಸಾಗಿದ್ದು ಯುಎ ಪ್ರಮಾಣಪತ್ರ ಪಡೆದುಕೊಂಡಿದೆ. ಇದರ ಖುಷಿಯಲ್ಲೇ ಚಿತ್ರತಂಡ ಸಿನಿಮಾದ ಹೊಸ ರಿಲೀಸ್ ದಿನಾಂಕ ಪ್ರಕಟಿಸಿದೆ. ಇದೇ ತಿಂಗಳು ಅಂದರೆ ನ.26ರಂದು ಈ ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: KGF Chapter 2 ಬಿಡುಗಡೆಗೆ ಅಡ್ಡಗಾಲಾದ ಅಮೀರ್ ಖಾನ್ ಅಭಿನಯದ Laal Singh Chaddha..!
ಈಗಾಗಲೇ ರಿಲೀಸ್ ಆಗಿರುವ ಸಖತ್ ಚಿತ್ರದ ಪೋಸ್ಟರ್ಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಗಣೇಶ್ ಹುಟ್ಟುಹಬ್ಬದ ವೇಳೆ ರಿಲೀಸ್ ಮಾಡಲಾಗಿದ್ದ ರ್ಯಾಪ್ ಮೋಷನ್ ಪೋಸ್ಟರ್ ಸಹ ಸಿನಿಪ್ರಿಯರ ಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಗಣೇಶ್ ಅವರ ಮಗ ವಿಯಾನ್ ಸಹ ನಟಿಸುತ್ತಿದ್ದಾರೆ.
ಈ ಹಿಂದೆ ವಿಯಾನ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿದ ಚಿತ್ರಗಳನ್ನು ಗಣೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇನ್ನು ಗಣೇಶ್ ಅವರ ಮಗ ಇದೇ ಮೊದಲು ಸಿನಿಮಾದಲ್ಲಿ ನಟಿಸುತ್ತಿಲ್ಲ. ಗಣೇಶ್ ಅಭಿನಯದ ಗೀತಾ ಸಿನಿಮಾದಲ್ಲೂ ವಿಯಾನ್ ಬಾಲ ಕಲಾವಿದನಾಗಿ ಕಾಣಿಸಿಕೊಂಡಿದ್ದಾನೆ.
ಇದನ್ನೂ ಓದಿ: 100 Review: ಹಲವು ಟ್ವಿಸ್ಟ್ಸ್ ಮತ್ತು ಟರ್ನ್ಗಳಿಂದ ಕೂಡಿರುವ 100 ಸಿನಿಮಾ
ಸಖತ್ ಸಿನಿಮಾದ ಜೊತೆಗೆ ಸಿಂಪಲ್ ಸುನಿ ಹಾಗೂ ಗಣೇಶ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಅದೇ 'ದಿ ಸ್ಟೋರಿ ಆಫ್ ರಾಯಗಢ'. ಗಣೇಶ್ ಹುಟ್ಟುಹಬ್ಬದಂದು ಇದರ ಪೋಸ್ಟರ್ ರಿಲೀಸ್ ಆಗಿದ್ದು, ಅದು ಸಖತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ಗಣೇಶ್ ಅವರು ಗಾಳಿಪಟ 2, ತ್ರಿಬಲ್ ರೈಡಿಂಗ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ