ಹಿಂದಿ ಭಾಷೆಯ ಬಿಗ್ಬಾಸ್ ಸೀಸನ್ 16 (Bigg boss season 16) ನಡೆಯುತ್ತಿದ್ದು ಕಳೆದ ವೀಕೆಂಡ್ ಸಂಚಿಕೆ ತುಂಬಾನೇ ಭಾವನಾತ್ಮಕ ಸಂದರ್ಭಗಳಿಗೆ ಸಾಕ್ಷಿಯಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ಸೀಸನ್ ನ ಅತ್ಯಂತ ಸಕ್ರಿಯ ಸ್ಪರ್ಧಿಗಳಲ್ಲಿ ಇಬ್ಬರು ರಿಯಾಲಿಟಿ ಶೋ ನಿಂದ ಹೊರ ಹೋಗಿದ್ದಾರೆ. ಗಾಯಕ ಅಬ್ದು ರೋಜಿಕ್ ತಮ್ಮ ವೃತ್ತಿಪರ ಬದ್ಧತೆಗಳಿಂದಾಗಿ ಸ್ವಯಂಪ್ರೇರಿತವಾಗಿ ಶೋ ನಿಂದ ಹೊರ ಬಂದರೆ, ಚಲನಚಿತ್ರ ನಿರ್ಮಾಪಕ (Producer) ಸಾಜಿದ್ ಖಾನ್ (Sajid Khan) ಅವರು ತಮ್ಮ ಮುಂದಿನ ಚಿತ್ರದ ಕೆಲಸವನ್ನು ಪ್ರಾರಂಭಿಸುವುದಕ್ಕಾಗಿ ಬಿಗ್ಬಾಸ್ ಶೋ ನಿಂದ ಹೊರ ಬಂದರು. ಸಾಜಿದ್ ಅವರು ಸುಮಾರು 106 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಕಳೆದಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರ ಬಂದ ಸಾಜಿದ್ ತನ್ನ ಸಹೋದರಿ ಫರಾಹ್ ಖಾನ್ ಅವರ ಮನೆಯಲ್ಲಿ ಅಬ್ದು ಅವರೊಂದಿಗೆ ಮತ್ತೆ ಸೇರಿದರು. ಆದರೆ ಅವರು ಕಳೆದ ರಾತ್ರಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಅವರ ಮಿಷನ್ ಮಜ್ನು ಚಿತ್ರದ ಸ್ಕ್ರೀನಿಂಗ್ ನಲ್ಲಿಯೂ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಮಿಷನ್ ಮಜ್ನು ಚಿತ್ರದ ಸ್ಕ್ರೀನಿಂಗ್ ನಲ್ಲಿ ಕಾಣಿಸಿಕೊಂಡ ಸಾಜಿದ್
ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ಮಿಷನ್ ಮಜ್ನು ಚಿತ್ರದ ಸ್ಕ್ರೀನಿಂಗ್ ಇತ್ತೀಚೆಗೆ ಮುಂಬೈ ನಗರದಲ್ಲಿ ನಡೆಯಿತು.
ಈ ಚಿತ್ರದ ಸ್ಕ್ರೀನಿಂಗ್ ಸಂದರ್ಭದಲ್ಲಿ ಚಿತ್ರದ ಪ್ರಮುಖ ನಾಯಕ ನಾಯಕಿಯರಾದ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ರಶ್ಮಿಕಾ ಮಂದಣ್ಣ ಮಾತ್ರವಲ್ಲದೆ ಚಿತ್ರರಂಗದ ಇತರ ಕಲಾವಿದರು ಹಾಗೂ ದಿಗ್ಗಜರು ಉಪಸ್ಥಿತರಿದ್ದರು ಎನ್ನಬಹುದಾಗಿದೆ.
ಕಿಯಾರಾ ಅಡ್ವಾಣಿ, ನೋರಾ ಫತೇಹಿ, ರಿಯಾ ಚಕ್ರವರ್ತಿ ಸೇರಿದಂತೆ ಅನೇಕ ಖ್ಯಾತನಾಮರು ಸ್ಕ್ರೀನಿಂಗ್ ನಲ್ಲಿ ಕಾಣಿಸಿಕೊಂಡರು. ಅವರೆಲ್ಲರಲ್ಲದೆ, ಸಾಜಿದ್ ಖಾನ್ ಕೂಡ ಸ್ಕ್ರೀನಿಂಗ್ ನಲ್ಲಿ ಹಾಜರಿದ್ದರು.
ಅವರು ಡೆನಿಮ್, ಜಾಕೆಟ್ ಮತ್ತು ಟೀ-ಶರ್ಟ್ ಧರಿಸಿ ಬಂದಿದ್ದರು. ಸಾಜಿದ್ ಅಲ್ಲೇ ಇರುವ ಮಾಧ್ಯಮಗಳ ಪ್ರತಿನಿಧಿಗಳನ್ನು ಸಹ ಸ್ವಾಗತಿಸಿದರು.
ಕುತೂಹಲಕಾರಿ ಸಂಗತಿಯೆಂದರೆ, ಬಿಗ್ಬಾಸ್ 16 ಶೋ ನಿಂದ ಹೊರ ಬಂದ ನಂತರ ಸ್ವಲ್ಪ ನರ್ವಸ್ ರೀತಿಯಲ್ಲಿ ಕಾಣಿಸುತ್ತಿದ್ದರು ಸಾಜಿದ್ ಮತ್ತು ಕ್ಯಾಮೆರಾವನ್ನು ಎದುರಿಸಲು ಸ್ವಲ್ಪ ಹಿಂಜರಿಕೆ ಕಾಣುತ್ತಿತ್ತು.
ಬಿಗ್ಬಾಸ್ ಶೋ ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಿಟ್ಟಿಗೆದ್ದ ನೆಟ್ಟಿಗರು
ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ ಎಂದು ಅನೇಕರು ತಯಾರಕರಿಗೆ ನೆನಪಿಸಿದ್ದರಿಂದ ಸಾಜಿದ್ ಖಾನ್ ಗೊಂದಲಮಯ ಬಿಗ್ಬಾಸ್ ಪ್ರಯಾಣವನ್ನು ಹೊಂದಿದ್ದರು.
ವಾಸ್ತವವಾಗಿ, ಅನೇಕರು ಅವರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಅಂತಿಮವಾಗಿ ರಿಯಾಲಿಟಿ ಶೋ ನಿಂದ ನಿರ್ಗಮಿಸಿದರು.
ಇದನ್ನೂ ಓದಿ: Sushmita Sen: ತಮ್ಮನ ದಾಂಪತ್ಯ ಜಗಳ! ಅತ್ತಿಗೆಗೆ ಸಪೋರ್ಟ್ ಮಾಡ್ತಾರೆ ಸುಶ್ಮಿತಾ ಸೇನ್
ಈ ವೈರಲ್ ವೀಡಿಯೋದಲ್ಲಿ, ಅವರು ಶೋ ನಿಂದ ಹೊರ ಬರುವ ಮುಂಚೆ ಇತರರೊಂದಿಗೆ ವಿನಮ್ರವಾಗಿ ಕೈಕುಲುಕಿದರು. ಆದರೆ ನೆಟ್ಟಿಗರು ಮಾತ್ರ ಸಾಜಿದ್ ಅವರನ್ನು ನಕಲಿ ಅಂತ ಕರೆಯುವ ಮೂಲಕ ಟ್ರೋಲ್ ಮಾಡಿದ್ದಾರೆ. ಅನೇಕರು ಈ ಚಲನಚಿತ್ರ ನಿರ್ಮಾಪಕನನ್ನು ಅವಮಾನಿಸಿ ಕಮೆಂಟ್ ಮಾಡಿದ್ದಾರೆ.
ಸಾಜಿದ್ ಗೆ ಹೇಗೆಲ್ಲಾ ಟ್ರೋಲ್ ಮಾಡಿದ್ದಾರೆ ನೋಡಿ ನೆಟ್ಟಿಗರು
ಅವನನ್ನು ಹೀರೋ ಮಾಡಲಾಗುತ್ತಿದೆಯೇ? ನೀವು ಇಂತಹ ವ್ಯಕ್ತಿಯನ್ನು ಉತ್ತೇಜಿಸಿದರೆ ಅದು ತಪ್ಪು, ಏಕೆಂದರೆ ಈತ ಈಗಾಗಲೇ 14 ಮಹಿಳೆಯರಿಂದ ಲೈಂಗಿಕ ಕಿರುಕುಳದ ಆರೋಪವನ್ನು ಎದುರಿಸಿದ್ದಾನೆ” ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ