Saif Ali Khan ಮಕ್ಕಳಿಗೆ 5000 ಕೋಟಿ ರೂ. ಮೌಲ್ಯದ ಪೂರ್ವಜರ ಆಸ್ತಿ ಸಿಗೋದು ಡೌಟ್- ಯಾಕೆ ಗೊತ್ತಾ?

Saif Ali Khan: ಬ್ರಿಟಿಷ್ ಆಡಳಿತದ ನವಾಬನಾದ ನಟನ ಮುತ್ತಜ್ಜ ಹಮೀದುಲ್ಲಾ ಖಾನ್ ತನ್ನ ಎಲ್ಲಾ ಆಸ್ತಿಗಳಿಗೆ ಯಾವುದೇ ರೀತಿಯ ವಿಲ್ ಬರೆದಿಲ್ಲ ಎಂದು ವರದಿಯು ಸೂಚಿಸುತ್ತದೆ. ಇದರಿಂದಾಗಿ ಕುಟುಂಬದೊಳಗೆ ಕೆಲವು ವಿವಾದಗಳು ಉಂಟಾಗಬಹುದು.

ಕುಟುಂಬದೊಂದಿಗೆ ನಟ ಸೈಫ್ ಅಲಿ ಖಾನ್

ಕುಟುಂಬದೊಂದಿಗೆ ನಟ ಸೈಫ್ ಅಲಿ ಖಾನ್

  • Share this:
ಒಮ್ಮೊಮ್ಮೆ ಪೂರ್ವಜರು(Ancestors)ಬೆಟ್ಟದಷ್ಟು ಆಸ್ತಿ ಮಾಡಿಟ್ಟರೂ ಸಹ ನಾನಾ ಕಾರಣಗಳಿಂದ ಆ ಆಸ್ತಿಯು ನಮಗೆ ಸಿಗುವುದು ತುಂಬಾ ಕಷ್ಟವಾಗುತ್ತದೆ ಮತ್ತು ಕೆಲವೊಮ್ಮೆ ಸಿಗದೆಯೇ ಇರಬಹುದು. ಇದರ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಎಂದು ನಿಮಗೆ ಅನ್ನಿಸಬಹುದು.ಇಲ್ಲಿ ಬಾಲಿವುಡ್‌ನ(Bollywood) ನಟನೊಬ್ಬನ(Hero) ಪೂರ್ವಜರು ಕುಳಿತು ತಿಂದರೂ ಜೀವನ ಪರ್ಯಂತ ಮುಗಿಯದಷ್ಟು ಆಸ್ತಿ ಮಾಡಿದ್ದಾರೆ, ಆದರೆ ಇವರ ಮಕ್ಕಳಿಗೆ ಸಿಗುವುದು ತುಂಬಾನೇ ಕಷ್ಟವಂತೆ ಎಂದು ಹೇಳಲಾಗುತ್ತಿದೆ.ಯಾರಪ್ಪಾ ಆ ನಟ ಅಂತೀರಾ? ಅವರೇ ಸೈಫ್ ಅಲಿ ಖಾನ್(Saif Ali Khan), ರಾಜ ಕುಟುಂಬಕ್ಕೆ(King) ಸೇರಿದವರು. ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ನಂತರ ಸೈಫ್ ಪಟೌಡಿಯ ಹತ್ತನೇ ನವಾಬ್. ಭೋಪಾಲ್‌ನಲ್ಲಿರುವ ನಟನ ಪೂರ್ವಜರ ಆಸ್ತಿ ಎಷ್ಟಿದೆ ಅಂತ ನೀವು ಕೇಳಿದರೆ, ನೀವು ಬೆಚ್ಚಿ ಬೀಳುವುದು ಗ್ಯಾರಂಟಿ.

ಇವರ ಪೂರ್ವಜರ ಆಸ್ತಿ ಬರೋಬ್ಬರಿ 5000 ಕೋಟಿ ರೂಪಾಯಿ ಇದ್ದು, ಸೈಫ್ ಅಲಿ ಖಾನ್ ತನ್ನ ಮೂವರು ಪುತ್ರರಾದ ಇಬ್ರಾಹಿಂ ಅಲಿ ಖಾನ್, ತೈಮೂರ್ ಅಲಿ ಖಾನ್ ಮತ್ತು ಜೆಹಾಂಗೀರ್ ಅಲಿ ಖಾನ್ ಅವರಿಗೆ ಆಸ್ತಿಯಿಂದ ಒಂದು ಪೈಸೆಯನ್ನು ನೀಡಲು ಸಾಧ್ಯವಾಗದಿರಬಹುದು ಎಂಬ ವಿಷಯ ನಿಮಗೆ ತಿಳಿದಿರಲಿಕ್ಕಿಲ್ಲ.

ನೀವು, ಏನಪ್ಪಾ ಇದು ಅವರ ಪೂರ್ವಜರ ಆಸ್ತಿ ಸೈಫ್ ಮಕ್ಕಳಿಗೆ ಸಿಗುವುದು ಕಷ್ಟ ಅಂತಿದಾರೆ ಎಂದು ಗೊಂದಲಕ್ಕೊಳಗಾಗಬಹುದು. ಯಾಕೆ ಗೊತ್ತಾ? ಮನರಂಜನಾ ಸುದ್ದಿ ಪೋರ್ಟಲ್‌ ವರದಿಯ ಪ್ರಕಾರ, 'ಸ್ಪಷ್ಟವಾಗಿ, ಪಟೌಡಿ ವಂಶಕ್ಕೆ ಸೇರಿದ ಎಲ್ಲಾ ಆಸ್ತಿಗಳು ಮತ್ತು ಇತರ ಸಂಬಂಧಿತ ಸ್ವತ್ತುಗಳು ಭಾರತ ಸರ್ಕಾರದ ವಿವಾದಾತ್ಮಕ ಶತ್ರು ವಿವಾದಗಳ ಕಾಯ್ದೆಯ ಅಡಿಯಲ್ಲಿ ಬರುತ್ತವೆ ಮತ್ತು ಆದ್ದರಿಂದ, ಸದರಿ ಕಾಯ್ದೆಯ ವ್ಯಾಪ್ತಿಗೆ ಬರುವ ಅಂತಹ ಯಾವುದೇ ಆಸ್ತಿ ಅಥವಾ ಸ್ವತ್ತುಗಳ ಉತ್ತರಾಧಿಕಾರಿ ಎಂದು ಯಾರೂ ಹೇಳಿಕೊಳ್ಳುವಂತಿಲ್ಲ.

ಇದನ್ನೂ ಓದಿ: ಕನ್ನಡ ಬಿಗ್ ಬಾಸ್​ ಖ್ಯಾತಿಯ ಗೀತಾ ಭಾರತಿ ಭಟ್​ Weight Loss Journey

ಒಂದು ವೇಳೆ ಯಾರಾದರೂ ಈ ವಿವಾದಾತ್ಮಕ ಶತ್ರು ವಿವಾದಗಳ ಕಾಯ್ದೆಯನ್ನು ವಾದಿಸಲು ಬಯಸಿದರೆ ಮತ್ತು ಅವರು ತಮ್ಮದೆಂದು ಭಾವಿಸುವ ಯಾವುದೇ ಆಸ್ತಿ ಅಥವಾ ಸ್ವತ್ತುಗಳ ಮೇಲೆ ಹಕ್ಕು ಸಾಧಿಸಲು ಬಯಸಿದರೆ, ಅವರು ಹೈಕೋರ್ಟ್‌ಗೆ ಹೋಗಬೇಕಾಗುತ್ತದೆ. ಅಲ್ಲಿ ವಿಫಲವಾದರೆ ಮುಂದಿನ ಆಯ್ಕೆಯು ಅವರನ್ನು ಸುಪ್ರೀಂ ಕೋರ್ಟ್‌ಗೆ ಮತ್ತು ಅಂತಿಮವಾಗಿ ಎಲ್ಲಿಯೂ ಬಗೆಹರಿಯದೆ ಹೋದರೆ ಭಾರತದ ರಾಷ್ಟ್ರಪತಿಯವರ ಬಳಿ ಹೋಗಬೇಕಾಗುತ್ತದೆ.

ಬ್ರಿಟಿಷ್ ಆಡಳಿತದ ನವಾಬನಾದ ನಟನ ಮುತ್ತಜ್ಜ ಹಮೀದುಲ್ಲಾ ಖಾನ್ ತನ್ನ ಎಲ್ಲಾ ಆಸ್ತಿಗಳಿಗೆ ಯಾವುದೇ ರೀತಿಯ ವಿಲ್ ಬರೆದಿಲ್ಲ ಎಂದು ವರದಿಯು ಸೂಚಿಸುತ್ತದೆ. ಇದರಿಂದಾಗಿ ಕುಟುಂಬದೊಳಗೆ ಕೆಲವು ವಿವಾದಗಳು ಉಂಟಾಗಬಹುದು. ಸೈಫ್ ಸಂಬಂಧಿಗಳು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅವರಿಂದಲೂ ವಿವಾದಗಳು ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shah Rukh Khanಗೂ ಮುಂಚೆ ಆ ಮನೆಯಲ್ಲಿ ಯಾರಿದ್ದರು? ಗಾಂಧಿ ಕುಟುಂಬಕ್ಕೂ ಮನ್ನತ್ ಮನೆಗೂ ನಂಟು ಇದ್ಯಾ?

ಇದೆಲ್ಲವನ್ನು ಪರಿಗಣಿಸಿದರೆ, ನಟ ಸೈಫ್ ಅಲಿ ಖಾನ್ ಹರಿಯಾಣ ಮತ್ತು ಭೋಪಾಲ್‌ನಲ್ಲಿರುವ ತನ್ನ ಪೂರ್ವಜರು ಮಾಡಿಟ್ಟಂತಹ ಆಸ್ತಿಗಳನ್ನು ತನ್ನ ಮಕ್ಕಳಿಗೆ ರವಾನಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ ಎಂದು ಹೇಳಲಾಗುತ್ತಿದೆ.
Published by:Sandhya M
First published: