Adhipurush Shooting: ಆದಿಪುರುಷ್​ ಸಿನಿಮಾದ "ರಾವಣ"ನ ಚಿತ್ರೀಕರಣ ಮುಕ್ತಾಯ

Saif Ali Khan: ಪ್ರಭಾಸ್​ ಜತೆ ಮೊದಲ ಬಾರಿಗೆ ರಾವಣನ ಪಾತ್ರದಲ್ಲಿ ಬಾಲಿವುಡ್​ ಸ್ಟಾರ್​ ನಟ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಹಲವು ಪೌರಾಣಿಕ ಸಿನಿಮಾಗಳಲ್ಲಿ ಸೈಫ್​ ಅಲಿ ಖಾನ್​ ನಟಿಸಿದ್ದಾರೆ.

Saif Ali Khan

Saif Ali Khan

  • Share this:
    ಬಾಹುಬಾಲಿ ಪ್ರಭಾಸ್​ (Prabhas) ನಟನೆಯ ಆದಿಪುರಷ್ (Adhipurush )​ ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಸಖತ್​ ಸೌಂಡ್​ ಮಾಡುತ್ತಲೇ ಬಂದಿದೆ. ಸದ್ಯ ರಾಧಾ- ಶ್ಯಾಮ್​ ಶೂಟಿಂಗ್​ ಮುಗಿಸಿ ಪ್ರಭಾಸ್​ ಪ್ರಸ್ತುತ ಪ್ಯಾನ್​ ಇಂಡಿಯಾ ಸಿನಿಮಾ, ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಆದಿಪುರುಷ್​ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪ್ರಭಾಸ್​ ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರುವುದರಿಂದ ಈಗಾಗಲೇ ಸಿನಿಮಾ ಬಹಳ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಇನ್ನೂಈ ಸಿನಿಮಾದಲ್ಲಿ ಸೈಫ್​ ಅಲಿ ಖಾನ್​ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಹೊಸ ವಿಚಾರ ಅಂದರೆ ಸಿನಿಮಾ ರಾವಣ ಪಾತ್ರಧಾರಿಯ ಚಿತ್ರೀಕರಣವನ್ನ ಚಿತ್ರತಂಡ ಮುಗಿಸಿದೆ. ಸೈಫ್​ ಅಲಿ ಖಾನ್ (Saif Ali Khan)​ ಆದಿಪುರುಷ್​ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದಿಪುರುಷ್​ ಶೂಟಿಂಗ್​​ ಮುಗಿಸಿದ ಹಿನ್ನೆಲೆ ಚಿತ್ರದ ಸೆಟ್​ನಲ್ಲಿ ತಂಡದವರು ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಆದಿಪುರಷ್​ ಸಿನಿಮಾಗೆ ಖ್ಯಾತ ನಿದೇರ್ಶಕ ಓಂ ರಾವತ್​ ಆಕ್ಷನ್​​ ಕಟ್​ ಹೇಳುತ್ತಿದ್ದಾರೆ. ಇನ್ನೂ ಶೂಟಿಂಗ್​ ಮುಗಿಸಿದ ಸಂಭ್ರಮಾಚರಣೆಯ ಫೋಟೋಗಳನ್ನ ಓಂ ರಾವತ್​ ಶೇರ್​ ಮಾಡಿದ್ದಾರೆ. ಜೊತೆಗೆ "ಲಂಕೇಶ್​ಚಿತ್ರೀಕರಣ ಮುಗಿದಿದೆ. ಸೈಫ್​ ಅಲಿ ಖಾನ್​ ತುಂಬಾ ಅದ್ಭುತ ಹಾಗೂ ಲವಲವಿಕೆಯಿಂದ ಕೆಲಸ ಮಾಡಿದ್ದಾರೆ. ಅವರು ಸೆಟ್​ನಲ್ಲಿ ಇದ್ದಷ್ಟು ದಿನ ನಾವು ಜೋಶ್​ನಿಂದ ಕೆಲಸ ಮಾಡಿದ್ದೇವೆ" ಅಂತ ಪೋಸ್ಟ್​ ಹಾಕಿದ್ದಾರೆ. ಆದಿಪುರುಷ್​ ಸಿನಿಮಾ ಪೌರಾಣಿಕ ಕಥಾಹಂದರ ಹೊಂದಿದ್ದು, ಬಾಹುಬಲಿ ಬಳಿಕ ಮತ್ತೆ ಈ ರೀತಿಯ ಸಿನಿಮಾದಲ್ಲಿ ಪ್ರಭಾಸ್​ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

    ಇನ್ನೂ ಪ್ರಭಾಸ್​ ಜತೆ ಮೊದಲ ಬಾರಿಗೆ ರಾವಣನ ಪಾತ್ರದಲ್ಲಿ ಬಾಲಿವುಡ್​ ಸ್ಟಾರ್​ ನಟ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಹಲವು ಪೌರಾಣಿಕ ಸಿನಿಮಾಗಳಲ್ಲಿ ಸೈಫ್​ ಅಲಿ ಖಾನ್​ ನಟಿಸಿದ್ದಾರೆ. ಆದರೆ ರಾವಣನ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು, ರಾವಣನಾಗಿ ತೆರೆ ಮೇಲೆ ಅಬ್ಬರಿಸುವುದರಲ್ಲಿ ಅನುಮಾನವೇ ಇಲ್ಲ. ತೆರೆಯ ಮೇಲೆ ಪ್ರಭಾಸ್​ ಹಾಗೂ ಸೈಫ್​ ಅಲಿ ಖಾನ್​ ಶತೃಗಳಾಗಿ ಬರಲು ಸಜ್ಜಾಗುತ್ತಿದ್ದಾರೆ.. ಇತ್ತ ಇವರಿಬ್ಬರನ್ನ ಒಟ್ಟಿಗೆ ಕಣ್ತುಂಬಿಕೊಳ್ಳಲು ಇಬ್ಬರು ನಟರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಸನ್ನಿ ಸಿಂಗ್ ಲಕ್ಷ್ಮಣನಾಗಿ ಹಾಗೂ ನಟಿ ಕೃತಿ ಸನೂನ್ ಸೀತೆಯಾಗಿ ನಟಿಸುತ್ತಿದ್ದಾರೆ.

    ದೇಶದಲ್ಲಿ ಕೊರೋನಾ ಎರಡನೇ ಲಾಕ್​ಡೌಣ್​ ಮುಗಿದ ಮೇಲೆ ಮುಂಬೈನಲ್ಲಲಿ ಚಿತ್ರೀಕರಣಕ್ಕೆ ಮರುಚಾಲನೆ ಕೊಡಲಾಗಿತ್ತು. ಎಲ್ಲ ಮುಂಜಾಗ್ರತ ಕ್ರಮಗಳನ್ನ ಕೈಗೊಂಡು ಚಿತ್ರೀಕರಣ ಆರಂಭಿಸಲಾಗಿತ್ತು. ನಟ ಪ್ರಭಾಸ್​ ಹಾಗೂ ಸೈಫ್​ ಅಲಿ ಖಾನ್ ಇಬ್ಬರು ಶೂಟಿಂಗ್​ನಲ್ಲಿ ಭಾಗವಹಿಸಿದ್ದರು. ಇದೀಗ, ರಾವಣನ ಪಾತ್ರಧಾರಿ ಸೈಫ್​ ಅಲಿ ಖಾನ್​ ಅವರ ಸಂಪೂರ್ಣ ಭಾಗದ ಶೂಟಿಂಗ್​ ಕೆಲಸ ಕಂಪ್ಲೀಟ್​ ಆಗಿದೆ. ಇನ್ನೂ ಪ್ರಭಾಸ್​ ಅವರ ಭಾಗದ ಚಿತ್ರೀಕರಣವನ್ನ ಈ ತಿಂಗಳ ಅಂತ್ಯದಲ್ಲಿ ಮುಗಿಸುತ್ತೇವೆ ಅಂತ ಚಿತ್ರದ ನಿದೇರ್ಶಕ ಓಂ ರಾವತ್​ ಮಾಹಿತಿ ನೀಡಿದ್ದಾರೆ.

    Read Aslo: Rocking Star Yash | ಮುಂಬೈನ ಗಲ್ಲಿಯಲ್ಲಿ ರಾಕಿ ಭಾಯ್​ ರೌಂಡ್ಸ್​; ಯಶ್​ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್​

    ಆದಿಪುರುಷ್​ ಚಿತ್ರತಂಢ ಈಗಾಗಲೇ ಸಿನಿಮಾ ರಿಲೀಸ್​ ದಿನಾಂಕ ಕೂಡ ಘೋಷಿಸಿದೆ. ಮುಂದಿನ ವರ್ಷ ಆಗಸ್ಟ್​ 11ರಂದು ಸಿನಿಮಾ ಹಲವು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಟಿ-ಸಿರೀಸ್ ಭೂಷಣ್ ಕುಮಾರ್, ಕೃಷ್ಣನ್ ಕುಮಾರ್, ಓಂ ರಾವತ್, ಪ್ರಸಾದ್ ಸುತಾರ್ ಮತ್ತು ರೆಟ್ರೊಫೈಲ್ಸ್ ನ ರಾಜೇಶ್ ನಾಯರ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 400-450 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಶೇಕಡಾ ಅರ್ಧದಷ್ಟು ಭಾಗ ವಿಎಫ್‌ಎಕ್ಸ್‌ ಮೇಲೆ ಖರ್ಚು ಮಾಡಲಾಗುತ್ತಿದೆಯಂತೆ. ಹೀಗಾಗಿ ಸಿನಿ ರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ

    ವರದಿ - ವಾಸುದೇವ.ಎಂ
    Published by:Harshith AS
    First published: