Saif Ali Khan: ಆದಿಪುರುಷ ಚಿತ್ರ ವಿಶಿಷ್ಟ ಮತ್ತು ವಿಭಿನ್ನ - ತಮ್ಮ ಮುಂದಿನ ಚಿತ್ರದ ಬಗ್ಗೆ ಸೈಫ್ ಮಾತು ..

Adipurush:  ಸೈಫ್ ಅಲಿ ಖಾನ್ ತನ್ನ ಮುಂಬರುವ ಮೆಗಾ ವೆಂಚರ್ ಆದಿಪುರುಷ ಚಿತ್ರದ ಬಗ್ಗೆ ಮಾತನಾಡಿದ್ದು, ಚಿತ್ರದ ನಿರ್ಮಾಪಕರು 'ಧರ್ಮ, ಇತಿಹಾಸ ಮತ್ತು ಪುರಾಣಗಳನ್ನು ಈ ಚಿತ್ರದಲ್ಲಿ  ಸರಿಯಾಗಿ ತೋರಿಸುವ ಕುರಿತು ಬಹಳ ಶ್ರಮ ಹಾಕಿದ್ದು,  ಚಿತ್ರ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ಮಾತನಾಡಿದ್ದಾರೆ

ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್

  • Share this:
ಸೈಫ್ ಅಲಿ ಖಾನ್ (Saif Ali Khan)ಮತ್ತು ಅರ್ಜುನ್ ಕಪೂರ್(Arjun kapoor) ಅಭಿನಯದ  ಹಾರರ್ ಕಾಮಿಡಿ ಚಿತ್ರ ಭೂತ್ ಪೊಲೀಸ್(Bhoot Police) ಸೆಪ್ಟೆಂಬರ್ 10 ರಂದು ಪ್ರಮುಖ OTT ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಈ ಜಾನರ್​ನಲ್ಲಿ ಸೈಫ್ ಅಲಿ ಖಾನ್ ಅವರ ಮೊದಲ ಚಿತ್ರ ಗೋ ಗೋವಾ(Go Goa) ಆಗಿತ್ತು. ಈ ಚಿತ್ರವು 2013 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಸೈಫ್ ರಷ್ಯಾದಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುವ ಜೊಂಬಿ ಬೇಟೆಗಾರನ ಪಾತ್ರವನ್ನು ನಿರ್ವಹಿಸಿದ್ದರು.  ಮಾಧ್ಯಮವೊಂದಕ್ಕೆ ಇತ್ತೀಚಿನ ಸಂದರ್ಶನದಲ್ಲಿ, ಸೈಫ್ ಗೋ ಗೋವಾ ಗಾನ್ 2 ಬಗ್ಗೆ ಮಾತನಾಡಿದ್ದಾರೆ ಮತ್ತು "ಗೋ ಗೋವಾ ಗಾನ್ 2 ಬಗ್ಗೆ ನನಗೆ ಗೊತ್ತಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಎಲ್ಲಾ ಹಕ್ಕುಗಳನ್ನು ಮಾರಿದ್ದೇನೆ ಎಂದಿದ್ದಾರೆ.

ಸೈಫ್ ಅಲಿ ಖಾನ್ ತನ್ನ ಮುಂಬರುವ ಮೆಗಾ ವೆಂಚರ್ ಆದಿಪುರುಷ ಚಿತ್ರದ ಬಗ್ಗೆ ಮಾತನಾಡಿದ್ದು, ಚಿತ್ರದ ನಿರ್ಮಾಪಕರು 'ಧರ್ಮ, ಇತಿಹಾಸ ಮತ್ತು ಪುರಾಣಗಳನ್ನು ಈ ಚಿತ್ರದಲ್ಲಿ  ಸರಿಯಾಗಿ ತೋರಿಸುವ ಕುರಿತು ಬಹಳ ಶ್ರಮ ಹಾಕಿದ್ದು,  ಚಿತ್ರ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ಚಿತ್ರವು ತುಂಬಾ ವಿಶಿಷ್ಟ ಮತ್ತು ವಿಭಿನ್ನವಾಗಿದೆ. ನನಗೆ ಆದಿಪುರುಷ ಚಿತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ, ಏಕೆಂದರೆ ನಿರ್ದೇಶಕರು, ಬರಹಗಾರರು ಮತ್ತು ಸಂಪೂರ್ಣ ಸೃಜನಶೀಲ ಸಂಸ್ಥೆಯು ಅವರು ಮಾಡುತ್ತಿರುವ  ಕೆಲಸದ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದಾರೆ.  ಎಲ್ಲಿ ಧರ್ಮ, ಇತಿಹಾಸ ಮತ್ತು ಪುರಾಣಗಳನ್ನು ಸರಿಯಾಗಿ ಚಿತ್ರಣ  ಮಾಡುವುದರಿಂದ ಯಾವುದೇ ರೀತಿಯ ತಪ್ಪು ಸಂಭವಿಸುವುದಿಲ್ಲ ಎಂದು ಸೈಫ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಗನ ಹೆಸರಿನ ಬಗ್ಗೆ ಟ್ರೋಲ್ -ಕೊನೆಗೂ ಮೌನ ಮುರಿದ ಬೇಬೋ

ಸಂದರ್ಶನವೊಂದರಲ್ಲಿ ಸೈಫ್ ಮುಂಬರುವ ತಮಿಳು ರಿಮೇಕ್ ವಿಕ್ರಂ ವೇದದಲ್ಲಿ ಹೃತಿಕ್ ರೋಷನ್ ಜೊತೆ ನಟಿಸುವ ಬಗ್ಗೆ ಮಾತನಾಡಿದರು. ನಾವು ಈ ಚಿತ್ರದ ಕಥೆಯನ್ನು ಬಹಳಷ್ಟು ಬಾರಿ ಓದಿದ್ದೇವೆ ಮತ್ತು ಇದು ತುಂಬಾ ಸವಾಲಿನ ಚಿತ್ರವಾಗಿದೆ. ಹೃತಿಕ್ ಒಬ್ಬ ಅದ್ಭುತ ನಟ, ಮತ್ತು ಡ್ಯಾನ್ಸರ್ ಎಂದು ನಾನು ಭಾವಿಸುತ್ತೇನೆ. ಅವರು ಸಿನಿಮಾದ ಸಾಮಾನ್ಯ ಶಕ್ತಿ ಎಂದು ಸೈಫ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೈಫ್ ಮತ್ತು ಕರೀನಾ ತಮ್ಮ ಎರೆಡನೇ ಮಗನ ಹೆಸರಿನ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದರು, ಮೊದಲ ಮಗನಿಗೆ ತೈಮೂರ್ ಎರೆಡನೇ ಮಗನಿಗೆ ಜೇಹ್ ಎಂದು ಹೆಸರಿಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜನರು ಅದನ್ನು ಬಹಳ ಟ್ರೋಲ್ ಮಾಡಿದ್ದರು. ಈ ಬಗ್ಗೆ ಸೈಫ್ ಆಗಲಿ ಕರೀನಾ ಆಗಲಿ ಮಾತನಾಡಿರಲಿಲ್ಲ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಕರೀನಾ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Kareena Kapoor- Saif Ali Khan ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ

ನಿಜವಾಗಿಯೂ ಹೇಳಬೇಕು ಎಂದರೆ ಮಕ್ಕಳಿಗೆ ಏನು ತಿಳಿಯುವುದಿಲ್ಲ. ಆ ಹೆಸರು ನನಗೆ ಮತ್ತು ಸೈಫ್​ಗೆ ಇಷ್ಟವಾಗಿದೆ ಆದೂ ಮಾತ್ರ ಮುಖ್ಯವಾಗುತ್ತದೆ. ಅಲ್ಲದೇ ಮಕ್ಕಳನ್ನು ಟ್ರೊಲ್ ಮಾಡಲು ಅವರಿಗೆ ಮನಸ್ಸು ಹೇಗೆ ಬರುತ್ತದೆ. ಕೆಲವೊಮ್ಮೆ ಟ್ರೋಲ್​ಗಳನ್ನು ನೋಡಿದಾಗ ನಗು ಬರುತ್ತದೆ. ಮುಗ್ಧ ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಮಕ್ಕಳನ್ನು ಏಕೆ ಟ್ರೋಲ್ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ನನಗೆ ಅದರ ಬಗ್ಗೆ ಭಯವಾಗುತ್ತದೆ. ಇವುಗಳಿಂದ ಹೇಗೆ ಹೊರಬರುವುದು ಎಂಬುದನ್ನ ಮಾತ್ರ ಗಮನಿಸಿಬೇಕು. ಏಕೆಂದರೆ ಅದನ್ನೆ ಇಟ್ಟುಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಹೆಚ್ಚು ಟ್ರೋಲ್​ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಕರೀನಾ ಹೇಳಿಕೊಂಡಿದ್ದಾರೆ. ಇನ್ನು ಕರೀನಾ ಈಗ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ ಮತ್ತು ಇದು ಕ್ರಿಸ್ಮಸ್ ಸಮಯದಲ್ಲಿ ಬಿಡುಗಡೆಯಾಗಲಿದೆ.
Published by:Sandhya M
First published: