Happy Birthday Saif Ali Khan: ಹುಟ್ಟುಹಬ್ಬದ ಸಂಭ್ರಮದಲ್ಲಿ ಸೈಫ್​ ಅಲಿ ಖಾನ್​: ಮಾಲ್ಡೀವ್ಸ್​ನಲ್ಲಿ ಬರ್ತ್​ ಡೇ ಆಚರಣೆ

ಸೈಫ್​ ಅಲಿ ಖಾನ್​ ತಮ್ಮ ಹುಟ್ಟುಹಬ್ಬವನ್ನು ಕುಟುಂಬದ ಜೊತೆ ಆಚರಿಸಿಲು ವಿದೇಶಕ್ಕೆ ಹೋಗಿದ್ದಾರೆ. ಕರೀನಾ ಕಪೂರ್​, ತೈಮೂರ್ ಅಲಿ ಖಾನ್​, ಜಹಾಂಗೀರ್​ ಅಲಿ ಖಾನ್​ ಜತೆ ಸೈಫ್ ಅಲಿ ಖಾನ್ ಮಾಲ್ಡೀವ್ಸ್​ಗೆ ಹೋಗಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೈಫ್ ಅಲಿ ಖಾನ್​

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೈಫ್ ಅಲಿ ಖಾನ್​

  • Share this:
ಸೈಫ್​ ಅಲಿ ಖಾನ್(Saif Ali Khan) ತಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇನ್ನು ಕರೀನಾ ಕಪೂರ್​ (Kareena Kapoor Khan) ತಮ್ಮ ಲವ್​ ಸ್ಟೋರಿಯಿಂದಾಗಿ ಸದ್ದು ಮಾಡುತ್ತಿರುತ್ತಾರೆ. ಈ ಸೆಲೆಬ್ರಿಟಿ ದಂಪತಿ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿರೋದಂತೂ ನಿಜ. ಇನ್ನು ನಟ ಸೈಫ್​ ಅಲಿ ಖಾನ್ ಅವರ ಹುಟ್ಟುಹಬ್ಬ. ಹೌದು, ಆಗಸ್ಟ್​ 16ರಂದು ಸೈಫ್​ ಅಲಿ ಖಾನ್​ 51 ವರ್ಷಕ್ಕೆ (Celebrating 51th Birthday) ಕಾಲಿಟ್ಟಿದ್ದಾರೆ. ಸೈಫ್ ಅವರ ಜನನ ದೆಹಲಿಯಲ್ಲಿ ಆಗಿತ್ತು. ಸೈಫ್​ ಅಲಿ ಖಾನ್​ ಮಾಜಿ ಕ್ರಿಕೆಟಿಗ ದಿವಂಗತ ಮನ್ಸೂರ್ ಅಲಿ ಖಾನ್​ ಪಟೌಡಿ ಹಾಗೂ ನಟಿ ಶರ್ಮಿಳಾ ಟ್ಯಾಗೋರ್​ ಅವರ ಮಗ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ  ಸೈಫ್​ ಬಿಡುವು ಮಾಡಿಕೊಂಡು ವಿದೇಶಕ್ಕೆ ಹಾರಿದ್ದಾರೆ. 

ಸೈಫ್​ ಅಲಿ ಖಾನ್​ ತಮ್ಮ ಹುಟ್ಟುಹಬ್ಬವನ್ನು ಕುಟುಂಬದ ಜೊತೆ ಆಚರಿಸಿಲು ವಿದೇಶಕ್ಕೆ ಹೋಗಿದ್ದಾರೆ. ಕರೀನಾ ಕಪೂರ್​, ತೈಮೂರ್ ಅಲಿ ಖಾನ್​, ಜಹಾಂಗೀರ್​ ಅಲಿ ಖಾನ್​ ಜತೆ ಸೈಫ್ ಅಲಿ ಖಾನ್ ಮಾಲ್ಡೀವ್ಸ್​ಗೆ ಹೋಗಿದ್ದಾರೆ.


51ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ  ಪ್ರವಾಸ ಕೈಗೊಂಡಿದ್ದಾರೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಈ ಸೆಲೆಬ್ರಿಟಿ ಕಪಲ್ ಇತ್ತೀಚೆಗಷ್ಟೆ ಮಾಲ್ಟೀವ್ಸ್​ಗೆ ಹೋಗುವಾಗ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Dhruva Sarja: ಮಾರ್ಟಿನ್​ ನಾನಲ್ಲ ಎಂದಿದ್ದೇಕೆ ಧ್ರುವ ಸರ್ಜಾ: ಮಾರಾಟವಾಯ್ತು ಆಡಿಯೋ ರೈಟ್ಸ್​

ಸಿನಿರಂಗಕ್ಕೆ ಬರುವ ಮೊಲದು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾದ ಅಮೃತಾ ಸಿಂಗ್​ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಸೈಫ್​. ನಂತರ ಅಮೃತಾರಿಂದ ವಿಚ್ಛೇದನ ಪಡೆದು ಕರೀನಾ ಕಪೂರ್ ಅವರನ್ನು ಲವ್​ ಮಾಡಿ ಎರಡನೇ ಮದುವೆಯಾದರು. ಅಮೃತಾ ಹಾಗೂ ಸೈಫ್​ ಅವರಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್​ ಎಂಬ ಮಕ್ಕಳಿದ್ದಾರೆ. ಇನ್ನೂ ಕರೀನಾ ಹಾಗೂ ಸೈಫ್​ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಎರಡನೇ ಮಗನಿಗೆ ಹೆಸರಿಟ್ಟು ಸುದ್ದಿಯಾದ ಕರೀನಾ ಕಪೂರ್​

ಕರೀನಾ ಕಪೂರ್ ಹಾಗೂ ಸೈಫ್​ ಅಲಿ ಖಾನ್​ ತಮ್ಮ ಎರಡನೇ ಮಗನಿಗೆ ಜಹಾಂಗೀರ್ ಅಲಿ ಖಾನ್​ ಎಂದು ನಾಮಕರಣ ಮಾಡಿದ್ದಾರೆ. ಈ ಹಿಂದೆ ಎರಡನೇ ಮಗನನ್ನು ಜೇ ಎಂದು ಕರೆಯಲಾಗುತ್ತಿದೆ ಅನ್ನೋ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಜೇ ಎನ್ನುವುದರ ಅರ್ಥ ಹುಡುಕುತ್ತಿದ್ದ ನೆಟ್ಟಿಗರಿಗೆ ಕೆಲವೇ ದಿನಗಳ ಹಿಂದೆಯಷ್ಟೆ ಅದರ ಅರ್ಥ ಏನೆಂದು ತಿಳಿಯಿದು. ಜೇ ಅನ್ನೋದು ಜಹಾಂಗೀರ್​ ಹೆಸರಿನ ಶಾರ್ಟ್​ ಫಾರ್ಮ್​ ಅನ್ನೋದು.

ಇದನ್ನೂ ಓದಿ: Hemanth Kumar Wedding: ಹೊಸ ಜೀವನಕ್ಕೆ ಕಾಲಿಟ್ಟ ಗಾಯಕ ಹೇಮಂತ್ ಕುಮಾರ್..!

ಎರಡನೇ ಮಗನಿಗೂ ಕರೀನಾ ಹಾಗೂ ಸೈಫ್​ ಹೆಸರಿಟ್ಟ ನಂತರ ಟ್ರೋಲ್​ ಆಗುತ್ತಿದ್ದಾರೆ. ಕರೀನಾ ಕಪೂರ್​ ಅವರು ಈ ಹಿಂದೆ ಮೊದಲ ಮಗು ಹುಟ್ಟಿದಾಗಲೂ ಅವನಿಗೆ ತೈಮೂರ್ ಎಂದು ಹೆಸರಿಟ್ಟ ಕಾರಣದಿಂದ ಟ್ರೋಲ್ ಆಗುವುದರೊಂದಿಗೆ ವಿವಾದಕ್ಕೀಡಾಗಿದ್ದರು. ತೈಮೂರ್​ ಎನ್ನುವುದು ದಾಳಿಕೋರನ ಹೆಸರು. ಹೀಗಾಗಿ ಈ ದಂಪತಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿತ್ತು. ಆಗ ಸೈಫ್​ ಅಲಿ ಖಾನ್​ ಮಗನ ಹೆಸರನ್ನು ಫೈಜ್ ಎಂದು ಬದಲಾಯಿಸಲು ನಿರ್ಧರಿಸಿದ್ದರಂತೆ. ಆದರೆ ಕರೀನಾ ಕಪೂರ್ ಮಗನ ಹೆಸರು ಬದಲಾಯಿಸಲು ಬಿಡಲಿಲ್ಲವಂತೆ. ಈ ಕುರಿತಾಗಿಯೂ ಕರೀನಾ ತಮ್ಮ ಪ್ರೆಗ್ನೆಸಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
Published by:Anitha E
First published: