• Home
 • »
 • News
 • »
 • entertainment
 • »
 • ಮಗನ ಹೇರ್​​ಕಟ್​ ಮಾಡಿದ ಸೈಫ್​ ಅಲಿ ಖಾನ್​; ಇನ್​​ಸ್ಟಾದಲ್ಲಿ ಫೋಟೋ ಹಂಚಿಕೊಂಡ ಕರೀನಾ

ಮಗನ ಹೇರ್​​ಕಟ್​ ಮಾಡಿದ ಸೈಫ್​ ಅಲಿ ಖಾನ್​; ಇನ್​​ಸ್ಟಾದಲ್ಲಿ ಫೋಟೋ ಹಂಚಿಕೊಂಡ ಕರೀನಾ

ಸೈಫ್​ ಅಲಿ ಖಾನ್​ ,ತೈಮೂರ್, ಕರೀನಾ

ಸೈಫ್​ ಅಲಿ ಖಾನ್​ ,ತೈಮೂರ್, ಕರೀನಾ

ಲಾಕ್​ಡೌನ್​ ಅವಧಿಯಲ್ಲಿ ನಟ ಸೈಫ್​ ಅಲಿ ಖಾನ್​ ಮಗ ತೈಮೂರ್​ನ ಹೇರ್​ ಕಟ್​​ ಮಾಡಿದ್ದಾರೆ.  ಹೇರ್​​ ಕಟ್​ ಮಾಡಿಸಿರುವ ಫೋಟೋವನ್ನು ನಟಿ ಕರೀನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಮಗೆ ಯಾರಿಗಾದರೂ ಹೇರ್​ ಕಟ್​ ಮಾಡಲಿದೆಯಾ? ಎಂದು ಫೋಟೋಗೆ ತಮಾಷೆಯಾಗಿ ಅಡಿಬರಹ ಕೊಟ್ಟಿದ್ದಾರೆ. ಸದ್ಯ, ಅಪ್ಪ-ಮಗನ ಹೇರ್​​​ ಕಟ್ ಮಾಡೋ​​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮುಂದೆ ಓದಿ ...
 • Share this:

  ಕೊರೋನಾ ಲಾಕ್​ಡೌನ್ ಅವಧಿಯಲ್ಲಿ​ ಟೀಂ ಇಂಡಿಯಾದ ನಾಯಕ ವಿರಾಟ್​​ ಕೊಹ್ಲಿ ಅವರು ಹೆಂಡತಿ ಅನುಷ್ಕಾರಿಂದ ಹೇರ್​ಕಟ್​ ಮಾಡಿಸಿಕೊಂಡಿದ್ದರು. ಸುರೇಶ್​ ರೈನಾ ಕೂಡ ಮಡದಿ ಪ್ರಿಯಾಂಕ ಚೌಧುರಿ ಕೈಯಾರೆ ತಲೆಕೂದಲು ತೆಗೆಸಿಕೊಂಡಿದ್ದರು. ಇದೀಗ ಬಾಲಿವುಡ್​ ಸ್ಟಾರ್​ ಸೈಫ್​ ಅಲಿ ಖಾನ್​ ಅವರೇ ಮಗನ ಹೇರ್​ಕಟ್​​ ಮಾಡಿದ್ದಾರೆ.


  ಲಾಕ್​ಡೌನ್​ ಅವಧಿಯಲ್ಲಿ ನಟ ಸೈಫ್​ ಅಲಿ ಖಾನ್​ ಮಗ ತೈಮೂರ್​ನ ಹೇರ್​ಕಟ್​​ ಮಾಡಿದ್ದಾರೆ.  ಹೇರ್​​ಕಟ್​ ಮಾಡಿಸಿರುವ ಫೋಟೋವನ್ನು ನಟಿ ಕರೀನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಮಗೆ ಯಾರಿಗಾದರೂ ಹೇರ್​ ಕಟ್​ ಮಾಡಲಿದೆಯಾ? ಎಂದು ಫೋಟೋಗೆ ತಮಾಷೆಯಾಗಿ ಅಡಿಬರಹ ಕೊಟ್ಟಿದ್ದಾರೆ. ಸದ್ಯ, ಅಪ್ಪ-ಮಗನ ಹೇರ್​​​ಕಟ್ ಮಾಡೋ​​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

  View this post on Instagram

  😂😂


  A post shared by Kareena Kapoor Khan (@therealkareenakapoor) on

  ಇನ್ನು ಕರೀನಾ ಹಂಚಿಕೊಂಡ ಫೋಟೋಗೆ ಅನೇಕರು ಕಾಮೆಂಟ್​ ಬರೆದಿದ್ದಾರೆ. ಒಬ್ಬರು ‘ಸೈಫ್​ ಅಲಿ ರಾಕ್​... ತೈಮೂರ್​ ಶಾಕ್!‘​ ಎಂದು ಕಾಮೆಂಟ್​ ಬರೆದರೆ. ಮತ್ತೊಬ್ಬರು ‘ಮೋಸ್ಟ್​​ ಹ್ಯಾಂಡ್​ಸಮ್​ ಬಾರ್ಬರ್​‘ ಎಂದು ಬರೆದಿದ್ದಾರೆ. ‘ತೈಮೂರ್​ ಬಲಿ 20 ರೂಪಾಯಿ‘ ತೆಗೆದುಕೊಳ್ಳಿ ಎಂದು ಮತ್ತೊಬ್ಬರು ಅಭಿಮಾನಿಯೊಬ್ಬ ಕಾಮೆಂಟ್​ ಹಾಕಿದ್ದಾರೆ. ಸೈಫ್​ ಅಲಿ ಖಾನ್​, ಖರೀನಾ ಕಪೂರ್​ರಂತೆ ಮಗ ತೈಮೂರ್​ಗೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ​


  ಸದ್ಯ, ಕೊರೋನಾ ಲಾಕ್​ಡೌನ್​ನಿಂದಾಗಿ ಸೈಫ್​ ಆಲಿ ಖಾನ್​ ದಂಪತಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುತ್ತಾ, ಲೈವ್​ ಬರುತ್ತಾ ಅಭಿಮಾನಿಗಳ ಜೊತೆ ಮಾತನಾಡುತ್ತಿರುತ್ತಾರೆ.


  ಕೆ.ಜಿ.ಎಫ್​-2ಗಾಗಿ ದೇಹ ದಂಡಿಸುತ್ತಿದ್ದಾರೆ ‘ಅಧೀರ‘ ಸಂಜಯ್​​ ದತ್​!

  Published by:Harshith AS
  First published: