• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bhoot Police: ಹಾರರ್​ ಕಾಮಿಡಿ ಸಿನಿಮಾದಲ್ಲಿ ಸೈಫ್​-ಅರ್ಜುನ್ ಕಪೂರ್​: ಮುಂದುವರೆಯುತ್ತಿದೆ ನೆಪೋಟಿಸಂ ವಿರುದ್ಧದ ಹೋರಾಟ

Bhoot Police: ಹಾರರ್​ ಕಾಮಿಡಿ ಸಿನಿಮಾದಲ್ಲಿ ಸೈಫ್​-ಅರ್ಜುನ್ ಕಪೂರ್​: ಮುಂದುವರೆಯುತ್ತಿದೆ ನೆಪೋಟಿಸಂ ವಿರುದ್ಧದ ಹೋರಾಟ

ಸೈಫ್​ ಅಲಿ ಖಾನ್​ ಹಾಗೂ ಅರ್ಜುನ್ ಕಪೂರ್​

ಸೈಫ್​ ಅಲಿ ಖಾನ್​ ಹಾಗೂ ಅರ್ಜುನ್ ಕಪೂರ್​

Bhoot Police: ಬಾಲಿವುಡ್​ನಲ್ಲಿ ಅರ್ಜುನ್ ಕಪೂರ್ ಸ್ಥಾನದಲ್ಲಿ ಬೇರೆ ಯಾರೇ ಹೊರಗಿನ ಕಲಾವಿದರಿದ್ದರೂ ಅವರಿಗೆ ಇಷ್ಟು ಅವಕಾಶ ಸಿಗುತ್ತಿರಲಿಲ್ಲ. ಇಷ್ಟು ಫ್ಲಾಪ್ ಸಿನಿಮಾಗಳನ್ನೂ ನೀಡಿದರೂ, ಅರ್ಜುನ್ ಕಪೂರ್​ಗೆ ನೆಪೋಟಿಸಂನಿಂದಾಗಿಯೇ ಅವಕಾಶ ಸಿಗುತ್ತಲೇ ಇದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಕೊರೋನಾ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಮೆಲ್ಲನೆ ಸಿನಿರಂಗ ಸಹ ಕೆಲಸ ಆರಂಭಿಸುತ್ತಿದೆ. ಬಾಲಿವುಡ್​ನಲ್ಲೂ ಹೊಸ ಸಿನಿಮಾಗಳ ಪ್ರಕಟಣೆಯಾಗುತ್ತಿದೆ. ಇತ್ತೀಷೆಗಷ್ಟೆ ಪ್ರಭಾಸ್ ಅಭಿನಯಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾ ಕುರಿತಾಗಿ ನಿರ್ದೇಶಕ ಓಂ ರಾವತ್ ಪ್ರಕಟಿಸಿದ್ದರು. ಇನ್ನು ಹಲವಾರು ಹೊಸ ಸಿನಿಮಾಗಳ ಚಿತ್ರೀರಕಣ ಸಹ ಆರಂಭಗೊಂಡಿದೆ.


ಬಾಲಿವುಡ್​ನಲ್ಲಿ ಹಾರರ್ ಕಾಮಿಡಿ ಸಿನಿಮಾ ಒಂದು ಸೆಟ್ಟೇರುವ ತಯಾರಿಯಲ್ಲಿದೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಟ ಸೈಫ್ ಅಲಿ ಖಾನ್ ಹಾಗೂ ಅರ್ಜುನ್ ಕಪೂರ್ ತೆರೆ ಹಂಚಿಕೊಳ್ಳಲಿದ್ದಾರೆ. ಭೂತ್ ಪೊಲೀಸ್ ಒಂದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪವನ್ ಕೃಪಲಾನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇದೇ ವರ್ಷಾಂತ್ಯಕ್ಕೆ ಆರಂಭವಾಗಲಿದೆಯಂತೆ. ಈ ಬಗ್ಗೆ ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್ ಆದರ್ಶ್ ಪೋಸ್ಟ್ ಮಾಡಿದ್ದಾರೆ.


IT'S OFFICIAL... #SaifAliKhan and #ArjunKapoor in horror-comedy #BhootPolice... The duo will share screen space for the first time... Directed by Pavan Kirpalani... Produced by Ramesh Taurani and Akshai Puri... Filming begins 2020-end. pic.twitter.com/AQOVgmJ2se



ಇನ್ನು, ಈ ಬಗ್ಗೆ ತರನ್ ಆದರ್ಶ್ ಪೋಸ್ಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಮತ್ತೆ ನೆಪೋಟಿಸಂ ಬಗ್ಗೆ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಬಾಲಿವುಡ್​ನಲ್ಲಿ ಅರ್ಜುನ್ ಕಪೂರ್ ಸ್ಥಾನದಲ್ಲಿ ಬೇರೆ ಯಾರೇ ಹೊರಗಿನ ಕಲಾವಿದರಿದ್ದರೂ ಅವರಿಗೆ ಇಷ್ಟು ಅವಕಾಶ ಸಿಗುತ್ತಿರಲಿಲ್ಲ. ಇಷ್ಟು ಫ್ಲಾಪ್ ಸಿನಿಮಾಗಳನ್ನೂ ನೀಡಿದರೂ, ಅರ್ಜುನ್ ಕಪೂರ್​ಗೆ ನೆಪೋಟಿಸಂನಿಂದಾಗಿಯೇ ಅವಕಾಶ ಸಿಗುತ್ತಲೇ ಇದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಮತ್ತೆ ಕೆಲವರು ಅರ್ಜುನ್ ಅವರು ತೆಗೆದುಕೊಂಡಿದ್ದು ತಪ್ಪು ನಿರ್ಧಾರ. ಇವರನ್ನು ತೆಗೆದುಕೊಂಡರೆ ಸಿನಿಮಾ ಖಂಡಿತ ಫ್ಲಾಪ್ ಎಂದೆಲ್ಲ ಪೋಸ್ಟ್ ಮಾಡುತ್ತಿದ್ದಾರೆ.


Saif Ali Khan and Arjun Kapoor sharing screen in Bhoot Police
ಮತ್ತೆ ನೆಪೋಟಿಸಂ ವಿರುದ್ಧ ಸಮರ ಸಾರಿರುವ ನೆಟ್ಟಿಗರು


ಇನ್ನು ಸುಶಾಂತ್ ಸಾವಿನಿಂದ ಬಾಲಿವುಡ್​ನಲ್ಲಿ ಆರಂಭವಾಗಿರುವ ನೆಪೋಟಿಸಂ ವಿರುದ್ಧದ ಸಮರ ಇನ್ನೂ ಮುಂದುವರೆಯುತ್ತಲೇ ಇದೆ. ಇದೇ ಕಾರಣದಿಂದ ಆಲಿಯಾ ಭಟ್ ಅಭಿನಯದ ಸಡಕ್ 2 ಸಿನಿಮಾ ಸಹ ಈಗ ಒಟಿಟಿ ಮೂಲಕ ರಿಲೀಸ್ ಆಗಿದ್ದು, ಪ್ರೇಕ್ಷಕರು ಅದನ್ನು ನೋಡದೆ ಫ್ಲಾಪ್ ಮಾಡಿದ್ದಾರೆ. ಇನ್ನಾದರೂ ಬಾಲಿವುಡ್ ಮಂದಿ ಪ್ರತಿಭೆಗಳಿಗೆ ಅವಕಾಶ ನೀಡಿ, ಪ್ರೇಕ್ಷಕರ ಮನವೊಲಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Published by:Anitha E
First published: