ಸಾಯಿ ಪಲ್ಲವಿ (Sai Pallavi), ಅಭಿಮಾನಿಗಳ ನೆಚ್ಚಿನ ನಟಿ. ಸಹಜ ಅಭಿನಯ, ನೋ ಮೇಕಪ್ ಲುಕ್ ಮೂಲಕ ದಕ್ಷಿಣ ಭಾರತದ (South Indian Films) ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ. ಈ ನಟಿ ಏನೇ ಮಾಡಿದರೂ ಅಭಿಮಾನಿಗಳಿಗೆ ಇಷ್ಟ. ಸದ್ಯ ಸಾಯಿ ಪಲ್ಲವಿ ಮಾಡಿರುವ ಒಂದು ಕೆಲಸ ಹೆಚ್ಚು ಸುದ್ದಿಯಲ್ಲಿದ್ದು, ಫೋಟೋಗಳು ವೈರಲ್ ಆಗಿವೆ. ಹೌದು, ನಟಿ ಸಾಯಿಪಲ್ಲವಿ ತೆಲುಗು ನಟ ಮಹೇಶ್ ಬಾಬು (Mahesh Babu) ಅಭಿನಯದ 'ಸರ್ಕಾರು ವಾರಿ ಪಾತ' ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಅರೇ ಇದರಲ್ಲಿ ಏನು ವಿಶೇಷ ಅಂತೀರಾ? ಅವರು ಹೋಗಿದ್ದ ರೀತಿ ವಿಶೇಷ ಎನ್ನಬಹುದು.
ಸಾಯಿ ಪಲ್ಲವಿ ಭಾನುವಾರ ಬೇಸಿಕ್ ಡ್ರೆಸ್‌ನಲ್ಲಿ ಮುಖ ಮತ್ತು ತಲೆಯನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡು, ಅಭಿಮಾನಿಗಳ ಕಣ್ಣು ತಪ್ಪಿಸಿ, ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ವೀಕ್ಷಿಸಿದ್ದಾರೆ. ಆದರೆ ಎಷ್ಟೇ ಮಾರೆ ಮಾಚಿದರೂ ಸಹ ಸಾಯಿ ಪಲ್ಲವಿಯನ್ನು ಅಭಿಮಾನಿಗಳು ಗುರುತು ಹಿಡಿದಿದ್ದು, ಅವರ ಈ ಫೋಟೋ ಇದೀಗ ವೈರಲ್ ಆಗುತ್ತಿದೆ.
ಅವರು ಸಿನೆಮಾ ವೀಕ್ಷಿಸುತ್ತಿದ್ದ ಆ ಪೂರ್ತಿ ಸಮಯದಲ್ಲಿ ಯಾರೂ ಅವರನ್ನು ಗಮನಿಸಿದಂತೆ ಇಲ್ಲ. ಆದರೆ ಅವರು ವಾಪಸ್ ಹೋಗುವಾಗ ಅನೇಕರ ಗಮನ ಸೆಳೆದಿದದ್ದು, ಇದು ಸಾಯಿ ಪಲ್ಲವಿ ಎಂದು ಗುರುತಿಸಿದ್ದಾರೆ.
ಸಾಯಿ ಪಲ್ಲವಿ ಈ ರೀತಿ ಮಾರುವೇಷದಲ್ಲಿ ಹೊಗಿ ಚಿತ್ರ ನೋಡಿರುವುದು ಇದೇ ಮೊದಲೇನಲ್ಲ. ನಾನಿ ಅಭಿನಯದ 'ಶ್ಯಾಮ್ ಸಿಂಘ ರಾಯ್' ಚಿತ್ರದಲ್ಲಿ ನಟಿಸಿದ ನಟಿ, ಈ ಹಿಂದೆ ಕೂಡ ವೇಷ ಧರಿಸಿ ಥಿಯೇಟರ್ನಲ್ಲಿ ತಮ್ಮ ಚಿತ್ರವನ್ನು ನೋಡಿದ್ದರು.
ಇದೀಗ ತೆಲುಗಿನ ಸೂಪರ್ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರ್ ವಾರಿ ಪತ ಚಿತ್ರವನ್ನು ವೀಕ್ಷಿಸಿದ್ದಾರೆ. ಈ ಚಿತ್ರ ಮೇ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು. ಅಭಿಮಾನಿಗಳು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಕೂಡ ನಟಿಸಿದ್ದಾರೆ.
ಸಾಯಿ ಪಲ್ಲವಿ ಫೋಟೋ ವೈರಲ್
ಸರ್ಕಾರ ವಾರಿ ಪತ ಪ್ರದರ್ಶನದ ನಂತರ ಸಾಯಿ ಪಲ್ಲವಿ ಚಿತ್ರಮಂದಿರದಿಂದ ಹೊರ ಬರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೊದಲ್ಲಿ, ಶ್ಯಾಮ್ ಸಿಂಗ್ ರಾಯ್ ಚಿತ್ರದ ನಟಿ ಸಾಯಿ ಪಲ್ಲವಿ ಅವರು ಸಾರ್ವಜನಿಕರೊಂದಿಗೆ ಚಿತ್ರ ವೀಕ್ಷಿಸಿ ಹೊರಬರುತ್ತಿರುವುದು ತಿಳಿಯುತ್ತದೆ.
ಇದನ್ನೂ ಓದಿ: 'ರಾಮಾರ್ಜುನ'ನ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ, ನಿಶ್ವಿಕಾ ನಾಯ್ಡು ಬಗ್ಗೆ ತಿಳಿದ್ರೆ ಮರಳಿ ಮನಸ್ಸಾಗೋದು ಗ್ಯಾರಂಟಿ!
ದಕ್ಷಿಣ ಭಾರತ ಸಿನಿರಂಗದಲ್ಲಿ ʼಮಲರ್ʼ ಎಂದೇ ಖ್ಯಾತಿ ಗಳಿಸಿರುವ ಸಾಯಿ ಪಲ್ಲವಿ. ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿದ್ಧಾರೆ. ಚಿತ್ರರಂಗದ ಪ್ರಮುಖ ನಾಯಕ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಸಾಯಿ ಪಲ್ಲವಿ ಆಗಾಗ ಅವರು ಮಾಡಲು ಕೆಲಸಗಳಿಂದ ಅಭಿಮಾನಿಗಳ ಮನಸನ್ನು ಗೆಲ್ಲುತ್ತಿರುತ್ತಾರೆ. ಒಮ್ಮೆ ಕೋಟಿ ರೂ ಮೌಲ್ಯದ ಸೌಂದರ್ಯ ಉತ್ಪನ್ನದ ಜಾಹೀರಾತನ್ನು ನಿರಾಕರಿಸಿ ಭೇಷ್ ಎನಿಸಿಕೊಂಡಿರುವ ಸುಂದರಿ,
ಇತ್ತೀಚೆಗಷ್ಟೇ ಭಾಷೆ ಬರದಿದ್ದರೂ ಸಹ ಕನ್ನಡ ಕಲಿತು ಡಬ್ ಮಾಡಿರುವ ವಿಚಾರಕ್ಕೆ ಕನ್ನಡಿಗರಿಂದ ಪ್ರಶಂಸೆ ಪಡೆದಿದ್ದರು. ಸಾಯಿ ಪಲ್ಲವಿ ಅವರ ಮುಂಬರುವ 'ಗಾರ್ಗಿ' ಸಿನಿಮಾದ ಮೆಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ಅದರಲ್ಲಿ ಕನ್ನಡದಲ್ಲಿ ಡಬ್ ಮಾಡುತ್ತಿರುವುದನ್ನ ನಾವು ನೋಡಬಹುದಾಗಿದೆ.
ಇದನ್ನೂ ಓದಿ: ಭಟ್ಟರ ಫಿಲ್ಮ್ ರೆಡಿಯಾಗೋಕೆ ಸುಧಾ ಮೂರ್ತಿ ಕಾರಣವಂತೆ - ಹೀಗೆಂದಿದ್ದೇಕೆ ಅನಂತ್ ನಾಗ್?
ನಟಿ ಕನ್ನಡ ಮಾತನಾಡಿದ ವಿಡಿಯೋ ವೈರಲ್!
ಸಾಯಿ ಪಲ್ಲವಿ ಅವರೇ ಕನ್ನಡ ಕಲಿತಿದ್ದಾರೆ, ಕನ್ನಡ ಪದ ಉಚ್ಛಾರ ಮಾಡುವುದು ಸಾಯಿ ಪಲ್ಲವಿಗೆ ಸುಲಭ ಇರಲಿಲ್ಲ. ಎಡೆಬಿಡದೆ ಪ್ರಯತ್ನ ಹಾಕಿ ಸಾಯಿ ಪಲ್ಲವಿ ಅವರು ಪದೇ ಪದೇ ಉಚ್ಛಾರ ಮಾಡಿ ಕನ್ನಡ ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರು ಹೇಗೆ ಕನ್ನಡ ಕಲಿತರು ಎಂಬ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿನಿಮಾಕ್ಕಾಗಿ ಕನ್ನಡ ಕಲಿತು ಮಾತನಾಡುವ ಶ್ರಮ ಹಾಕಿದ ಸಾಯಿ ಪಲ್ಲವಿ ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ