Sai Pallavi: ನಕ್ಸಲ್​ ಪಾತ್ರದಲ್ಲಿ ಸಿಂಪಲ್​ ಬ್ಯೂಟಿ ಸಾಯಿ ಪಲ್ಲವಿ

ಸದಾ ವಿಶೇಷ, ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಯಿಪಲ್ಲವಿ ಈ ಬಾರಿ ನಕ್ಸಲ್​ ಆಗಿ ನಟಿಸುತ್ತಿದ್ದಾರೆ. ‘ವಿರಟ ಪರವಂ’ ಚಿತ್ರದಲ್ಲಿ ನಟಿಸುತ್ತಿರುವ  ಸಾಯಿ ಪಲ್ಲವಿಗೆ ಜೊತೆ ಇದೇ ಮೊದಲ ಬಾರಿ ರಾಣಾ ದುಗ್ಗುಬಾಟಿ ಜೊತೆಯಾಗಲಿದ್ದಾರೆ.

Seema.R | news18-kannada
Updated:November 9, 2019, 4:05 PM IST
Sai Pallavi: ನಕ್ಸಲ್​ ಪಾತ್ರದಲ್ಲಿ ಸಿಂಪಲ್​ ಬ್ಯೂಟಿ ಸಾಯಿ ಪಲ್ಲವಿ
ರೌಡಿ ಬೇಬಿ ಸಾಯಿ ಪಲ್ಲವಿ
  • Share this:
ತಮ್ಮ ಸರಳ ಸೌಂದರ್ಯದ ಮೂಲಕ ದಕ್ಷಿಣ ಭಾರತದ ಚಿತ್ರರಸಿಕರ ಮನಗೆದ್ದ ಸಾಯಿ ಪಲ್ಲವಿ. ಚಿತ್ರಕ್ಕಿಂತ ಹೆಚ್ಚಾಗಿ ಪಾತ್ರಗಳಿಗೆ ಒತ್ತು ನೀಡುತ್ತಾರೆ. ಎಂತಹ ಸ್ಟಾರ್​ ನಿರ್ದೇಶಕ, ನಟರ ಸಿನಿಮಾವಾದರೂ ಕೇವಲ ಒಂದೆರಡು ದೃಶ್ಯದಲ್ಲಿ ಕಾಣಿಸಿಕೊಂಡು, ಹಾಡಿನಲ್ಲಿ ಕುಣಿಯಲು ನನಗೆ ಇಷ್ಟವಿಲ್ಲ. ತೂಕದ ಪಾತ್ರವಿದ್ದರೆ ಮಾತ್ರ ನಾನು ಅದರಲ್ಲಿ ನಟಿಸುತ್ತೇನೆ ಎಂದು ನಿರ್ಭೀತಿಯಿಂದ ಹೇಳುವವರು ಸಾಯಿ ಪಲ್ಲವಿ. ಇದೇ ಕಾರಣದಿಂದ ತೆಲುಗು ಸಿನಿ ಚಿತ್ರರಂಗದಲ್ಲಿ ವಿವಾದಕ್ಕೆ ಕೂಡ ಗುರಿಯಾಗಿದ್ದರು.

ಸದಾ ವಿಶೇಷ, ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಯಿಪಲ್ಲವಿ ಈ ಬಾರಿ ನಕ್ಸಲ್​ ಆಗಿ ನಟಿಸುತ್ತಿದ್ದಾರೆ. ‘ವಿರಟ ಪರವಂ’ ಚಿತ್ರದಲ್ಲಿ ನಟಿಸುತ್ತಿರುವ  ಸಾಯಿ ಪಲ್ಲವಿಗೆ ಜೊತೆ ಇದೇ ಮೊದಲ ಬಾರಿ ರಾಣಾ ದುಗ್ಗುಬಾಟಿ ಜೊತೆಯಾಗಲಿದ್ದಾರೆ.

ಇದನ್ನು ಓದಿ: Ayodhya Verdict: ಅಯೋಧ್ಯೆ ತೀರ್ಪು ಸ್ವಾಗತಿಸಿದ ಸಿನಿ ರಂಗದ ಸೆಲೆಬ್ರಿಟಿಗಳು

ರಾಣಾ ಇದರಲ್ಲಿ ಪೊಲೀಸ್​ ಆಗಿ ಕಾಣಿಸಿಕೊಂಡರೆ, ಪಲ್ಲವಿ ನಕ್ಸಲ್​ ಆಗಲಿದ್ದಾರೆ. ಇವರಿಬ್ಬರ ನಡುವೆ ಹುಟ್ಟುವ ಪ್ರೇಮ ಕಥೆಯ ಚಿತ್ರ ಇದಾಗಿದೆ. ಇನ್ನು ನಕ್ಸಲ್​ ಪಾತ್ರ ನಿರ್ವಹಣೆಗಾಗಿ ಈಗಾಗಲೇ ಅವರು ಅನೇಕ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಚಿತ್ರಕ್ಕೆ ಹಾಲಿವುಡ್​ ಸಾಹಸ ನಿರ್ದೇಶಕ ಸ್ಟೇವನ್​ ರಿಚ್ಟರ್​ ಕೂಡ ಕೆಲಸ ಮಾಡಲಾಗಿದ್ದಾರೆ.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading