Sai Pallavi: ವಿವಾದಗಳಿಗೆ ಸ್ಪಷ್ಟನೆ ನೀಡಿದ ಸಾಯಿ ಪಲ್ಲವಿ, ಹಿಂಸೆ ಎನ್ನುವುದು ದೊಡ್ಡ ಪಾಪ ಎಂದ ನಟಿ

ನಟಿ ಸಾಯಿ ಪಲ್ಲವಿ ತಮ್ಮ ಹೇಳಿಕೆಗೆ ಸಷ್ಟನೆ ನೀಡಿದ್ದು, ಇಂದು ಫೇಸ್​ಬುಕ್ ಲೈವ್ (Facebook Live) ಬರುವ ಮೂಲಕ ಎಲ್ಲ ವಿವಾದಗಳಿಗೂ ಸ್ಪಷ್ಟನೆ ನೀಡಿದ್ದಾರೆ.

ನಟಿ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ

  • Share this:
ನಟಿ ಸಾಯಿ ಪಲ್ಲವಿ (Sai Pallavi) ಅವರ ಹೆಸರು ಈದೀಗ ವಿವಾದವೊಂದರಲ್ಲಿ ತಳುಕು ಹಾಕಿಕೊಂಡಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ (Kashmir Pnadit's) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾಯಿ ಪಲ್ಲವಿ ವಿರುದ್ಧ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು. ಇದರೊಂದಿಗೆ ಕಾಶ್ಮೀರಿ ಪಂಡಿತರ ಹತ್ಯೆಗೆ ಗೋವು ಕಳ್ಳಸಾಗಾಣಿಕೆಯನ್ನು ಹೋಲಿಸಿ ಮಾತನಾಡಿರುವ ಸಾಯಿ ಪಲ್ಲವಿ ಅವರ ವಿರುದ್ಧ ಭಜರಂಗ ದಳದ ನಾಯಕರು (Bajrang Dal activist) ಸಹ ದೂರು ನೀಡಿದ್ದರು. ಆದರೆ ಇದೀಗ ನಟಿ ಸಾಯಿ ಪಲ್ಲವಿ ತಮ್ಮ ಹೇಳಿಕೆಗೆ ಸಷ್ಟನೆ ನೀಡಿದ್ದು, ಇಂದು ಫೇಸ್​ಬುಕ್ ಲೈವ್ (Facebook Live) ಬರುವ ಮೂಲಕ ಎಲ್ಲ ವಿವಾದಗಳಿಗೂ ಸ್ಪಷ್ಟನೆ ನೀಡಿದ್ದಾರೆ.

ವಿವಾದಗಳಿಗೆ ಸ್ಪಷ್ಟನೆ ನೀಡಿದ ಸಾಯಿ ಪಲ್ಲವಿ:

ಇನ್ನು, ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಹೇಳುವ ಮೂಲಕ ಸಾಯಿ ಪಲ್ಲವಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದರು. ಈ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿದ್ದಂತೆ ನಟಿ ಸ್ವತಃ ಫೇಸ್​ಬುಕ್ ಲೈವ್​ಗೆ ಬಂದು ಸ್ಪಷ್ಟನೆ ನೀಡಿದ್ದಾರೆ.

ಅವರು ವೀಡಿಯೊಗೆ ಶೀರ್ಷಿಕೆಯಲ್ಲಿ ಇಲ್ಲಿ ನನ್ನ ಸ್ಪಷ್ಟೀಕರಣವಿದೆ! ನಿಮ್ಮೆಲ್ಲರಿಗೂ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ನಂತರ ಮಾತನಾಡಿದ ಅವರು, ‘ದಿ ಕಾಶ್ಮೀರ್ ಫೈಲ್ಸ್ ಅನ್ನು ವೀಕ್ಷಿಸಿದ ನಂತರ, ನಾನು ಚಿತ್ರದ ನಿರ್ದೇಶಕ (ವಿವೇಕ್ ಅಗ್ನಿಹೋತ್ರಿ) ಜೊತೆ ಮಾತನಾಡಿದೆ. ಜನರ ದುಃಸ್ಥಿತಿಯನ್ನು ನೋಡಿದ ನಂತರ ತಾನು ವಿಚಲಿತಳಾಗಿದ್ದೇನೆ ಎಂದು ಹೇಳಿದೆ.



ಯಾವುದೇ ರೂಪದಲ್ಲಿ ಹಿಂಸೆ ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟೇ. ಆದರೆ, ಅನೇಕ ಜನರು ಇದನ್ನು ಬೇರೆ ರೀತಿ ಅರ್ಥೈಸಿಕೊಂಡಿರುವುದು ಆತಂಕಕಾರಿಯಾಗಿದೆ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ವೈಯಕ್ತಿಕ ಜೀವನವನ್ನು ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Sai Pallavi ನಟಿ ಸಾಯಿಪಲ್ಲವಿ ವಿರುದ್ಧ ಎಲ್ಲಾ ಪೊಲೀಸ್ ಸ್ಟೇಷನ್​ನಲ್ಲಿ ದೂರು ಕೊಡಿ: ಕರೆ ನೀಡಿದ ಬಿಜೆಪಿ ಶಾಸಕ

ಏನಿದು ವಿವಾದ?:

ಸಾಯಿ ಪಲ್ಲವಿ ಅಭಿನಯದ  ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ  ವೇಳೆ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಸಾಯಿ ಪಲ್ಲವಿ, ‘ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಸಾಯಿ ಪಲ್ಲವಿ ಪ್ರಶ್ನಿಸಿದ್ದರು. ಸಾಯಿ ಪಲ್ಲವಿಯವರ ಈ ಹೇಳಿಕೆ ಸದ್ಯ ಗೋ ರಕ್ಷಕರನ್ನು ರೊಚ್ಚಿಗೆಬ್ಬಿಸಿದ್ದು, ಹಿಂದೂಗಳ ಕೆಂಗಣ್ಣಿಗೆ ನಟಿಮಣಿ ಗುರಿಯಾಗಿದ್ದಾರೆ. ಇದಲ್ಲದೇ ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸಾಯಿ ಪಲ್ಲವಿ, "ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರ ಫೈಲ್ಸ್ ಸಿನಿಮಾ ತೋರಿಸಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Virata Parvam Day 1 Collections: ಸಾಯಿ ಪಲ್ಲವಿ, ರಾಣಾ ಮ್ಯಾಜಿಕ್ ವರ್ಕೌಟ್​ ಆಗಿದೆಯಾ? ಮೊದಲ ದಿನದ ಕಲೆಕ್ಷನ್ ಇಷ್ಟಂತೆ!

ಇದಲ್ಲದೇ ಅವರು ಮುಂದುವರೆದು,  ‘ಹಸುವನ್ನು ವಾಹನದಲ್ಲಿ ಓರ್ವ ವ್ಯಕ್ತಿ ಕರೆದೊಯ್ಯುತ್ತಿದ್ದ. ಆತ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಹತ್ಯೆ ಮಾಡಲಾಗಿತ್ತು. ಆ ವ್ಯಕ್ತಿಯನ್ನು ಹತ್ಯೆ ಮಾಡಿದ ಬಳಿಕ  ‘ಜೈ ಶ್ರೀರಾಮ್’ ಎಂದು ಕೂಗಲಾಗಿತ್ತು. ಧಾರ್ಮಿಕವಾಗಿ ನೋಡುವುದಾದರೆ ಈ ಎರಡೂ ಘಟನೆಗಳು ಒಂದೇ ಅಲ್ಲವೇ? ವ್ಯತ್ಯಾಸ ಎಲ್ಲಿದೆ?’’ ನಾವು ಮೊದಲು ಒಳ್ಳೆಯ ಮನುಷ್ಯರಾಗಬೇಕು‘ ಎಂದು ಸಾಯಿ ಪಲ್ಲವಿ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Published by:shrikrishna bhat
First published: