news18-kannada Updated:July 6, 2020, 11:52 AM IST
ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಅವರನ್ನು ಕೈ ಹಿಡಿದಿದ್ದು ಮಲಯಾಳಂನ ಪ್ರೇಮಂ ಚಿತ್ರ. ಹೀಗಾಗಿ ಅವರು ಮಲಯಾಳಿ ನಟಿ ಎಂದೇ ಕರೆಯಲ್ಪಟ್ಟಿದ್ದರು. ಈ ವಿಚಾರವಾಗಿ ಸಾಯಿ ಪಲ್ಲವಿ ಮತ್ತೆ ತಾಳ್ಮೆ ಕಳೆದುಕೊಂಡಿದ್ದಾರೆ. ಆ್ಯಂಕರ್ ಒಬ್ಬರಿಗೆ ಲೈವ್ನಲ್ಲೇ ನೇರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಾಯಿ ಪಲ್ಲವಿ ಮೂಲತಃ ತಮಿಳುನಾಡಿನ ಕೋಠಗಿರಿಯವರು. ಆರಂಭದಲ್ಲಿ ತಮಿಳಿನ ಎರಡು ಚಿತ್ರಗಳಲ್ಲಿ ಸಣ್ಣ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ನಂತರ ಅವರಿಗೆ ನಿವೀನ್ ಪೌಳಿ ಅಭಿನಯದ ‘ಪ್ರೇಮಂ’ ಸಿನಿಮಾ ಆಫರ್ ಬಂದಿತ್ತು. ಈ ಚಿತ್ರ ಹಿಟ್ ಆದ ಬೆನ್ನಲ್ಲೇ ಅವರ ಅದೃಷ್ಟ ಬದಲಾಗಿತ್ತು.ನಂತರ ‘ಫಿದಾ’ದಂಥ ಹಿಟ್ ಚಿತ್ರಗಳನ್ನು ಅವರು ನೀಡಿದ್ದರು.
ಸಾಯಿ ಪಲ್ಲವಿ ತಮಿಳುನಾಡಿನವರಾದರೂ ಅವರು ಮಲ್ಲು ಗರ್ಲ್ ಎಂದೇ ಫೇಮಸ್ ಆಗಿ ಬಿಟ್ಟಿದ್ದರು. ಈ ಬಗ್ಗೆ ಅನೇಕ ಬಾರಿ ಬೇಸರ ಹೊರ ಹಾಕಿದ್ದ ಅವರು, ನಾನು ಕೇರಳದವಳಲ್ಲ, ತಮಿಳುನಾಡಿನವನು ಎಂದು ಸ್ಪಷ್ಟನೆ ನೀಡಿದ್ದರು. ಆದಾಗ್ಯೂ ಇತ್ತೀಚಿಗೆ ಖಾಸಗಿ ಚಾನೆಲ್ನ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಸಂದರ್ಭದಲ್ಲಿ ಆ್ಯಂಕರ್ ಮಲ್ಲು ಗರ್ಲ್ ಎಂದ ವಿಚಾರಕ್ಕೆ ಸಾಯಿ ಪಲ್ಲವಿ ಕೋಪಗೊಂಡಿದ್ದಾರೆ.
ಇದನ್ನೂ ಓದಿ: ಜ್ಯೂಸ್ನಲ್ಲಿ ಮತ್ತು ಬರುವ ಮಾತ್ರೆ ಹಾಕಿ ಸ್ಯಾಂಡಲ್ವುಡ್ ನಟಿ ಮೇಲೆ ಅತ್ಯಾಚಾರ!
ನಾನು ತಮಿಳುನಾಡಿನವನು. ನನಗೆ ಮಲ್ಲು ಗರ್ಲ್ ಎಂದು ಕರೆಯಬೇಡಿ. ನೀವು ಪದೇ ಪದೇ ಇದೇ ತಪ್ಪನ್ನು ಮಾಡುತ್ತಿದ್ದೀರಿ. ಸುಖಾ ಸುಮ್ಮನೆ ನನಗೆ ಸಿಟ್ಟು ತರಿಸಬೇಡಿ ಎಂದು ಕೂಗಾಡಿದ್ದಾರೆ. ನಂತರ ಆ್ಯಂಕರ್ ಕ್ಷಮೆ ಕೇಳಿ ಸಾಯಿ ಪಲ್ಲವಿ ಅವರನ್ನು ಸಮಾಧಾನ ಮಾಡಿದ್ದಾರೆ.
Published by:
Rajesh Duggumane
First published:
July 6, 2020, 11:52 AM IST