ಸಾಮಾನ್ಯವಾಗಿ ಸೆಲೆಬ್ರೆಟಿಗಳ (Celebrity) ಮದುವೆ (Wedding) ಎಂದರೆ ಭರ್ಜರಿಯಾಗಿ ಮಾಡಲಾಗುತ್ತದೆ. ಮದುವೆಯ ನಂತರ ಸಹ ಹನಿಮೂನ್ (Honeymoon) ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿ ಇರುತ್ತಾರೆ. ಅವರ ಕೆಲಸದಿಂದ ಕೆಲ ದಿನಗಳ ಬಿಡುವು ಪಡೆಯುತ್ತಾರೆ. ಆದರೆ ಇಲ್ಲೊಂದು ತಾರಾ ಜೋಡಿ ಮದುವೆಯಾದ ಕೇವಲ 2 ದಿನದಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ (Sagar Puranik) ಮತ್ತು ನಟಿ ದೀಪಾ ಜಗದೀಶ್ (Deepa Jagadeesh) ಮೇ 18 ರಂದು ಧಾರವಾಡದಲ್ಲಿ ಪೋಷಕರು, ಸ್ನೇಹಿತರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ಈ ಜೋಡಿ, ಮದುವೆಯಾದ ಕೇವಲ 2 ದಿನದಲ್ಲಿ ಕೆಲಸಕ್ಕೆ ಮರಳಿದ್ದಾರೆ.
ಸಾಗರ್ ಪುರಾಣಿಕ್ ಪ್ರಕಾರ, “ನಾವು ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ನಾವು ರೆಸಾರ್ಟ್ನಲ್ಲಿ ತೆರೆದ ಪ್ರದೇಶದಲ್ಲಿ ಮದುವೆಯಾದ ಕಾರಣ ಮದುವೆಯ ದಿನ ಮಳೆಯ ಭಯ ಇತ್ತು. ಆದರೆ ತುಸು ತುಂತುರು ಮಳೆ ನಮ್ಮ ಮದುವೆಯ ಸಂಭ್ರಮವನ್ನು ಹೆಚ್ಚು ಮಾಡಿತ್ತು ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸಾಗರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಹ ಕಳೆದ ಎರಡು ದಿನಗಳ ಕಾಲ ಸಾಕಷ್ಟು ಆಚರಣೆಗಳು ನಡೆದಿವೆ. ಆದ್ದರಿಂದ ನಮಗೆ ವಿಶ್ರಾಂತಿ ಇರಲಿಲ್ಲ. ನನ್ನ ಕುಟುಂಬದ ಸದಸ್ಯರಿಗೆ ದೀಪಾ ಪರಿಚಯವಿದ್ದುದರಿಂದ ಆಕೆ ಅವರಿಗೆ ಸಂಪೂರ್ಣವಾಗಿ ಹೊಸಬಳಲ್ಲ. ಉತ್ತರ ಕರ್ನಾಟಕದ ಹಲವು ರಾಜಕಾರಣಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು. ವಾರದ ಮಧ್ಯಭಾಗವಾಗಿದ್ದರಿಂದ ಉದ್ಯಮದವರಿಗೆ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಮದುವೆಯ ಬಗ್ಗೆ ಹೇಳಿದ್ದಾರೆ.
ಇನ್ನು ಮದುವೆಯಾದ ಕೇವಲ 2 ದಿನದಲ್ಲಿ ಕೆಲಸ ಆರಂಭಿಸಿರುವ ಬಗ್ಗೆ ಮಾತನಾಡಿದ ಅವರು “ನಾವಿಬ್ಬರೂ ಜೀವನದಲ್ಲಿ ಕೆಲಸವನ್ನು ಸಮಾನವಾಗಿ ಪರಿಗಣಿಸುತ್ತೇವೆ, ಅದು ಶೀಘ್ರದಲ್ಲೇ ಕೆಲಸವನ್ನು ಪುನರಾರಂಭಿಸಲು ಕಾರಣವಾಗಿದೆ. ದೀಪಾ ಹೈದರಾಬಾದ್ನಲ್ಲಿ ಶೂಟಿಂಗ್ ಆರಂಭಿಸಿದ್ದು, ನಾನು ಕೂಡ ನನ್ನ ಕೆಲಸ ಪ್ರಾರಂಭಿಸಿದ್ದೇನೆ ಎಂದು ಸಾಗರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ಕಾರು ಖರೀದಿಸಿದ ನವರಸ ನಾಯಕ - ಕಷ್ಟದ ದಿನಗಳನ್ನು ನೆನೆದ ಜಗ್ಗೇಶ್
ಈ ಹಿಂದಯೇ ನಟಿ ದೀಪಾ ಜಗದೀಶ್ ಪ್ರೀತಿಸುತ್ತಿರುವ ವಿಚಾರವನ್ನು ಸಾಗರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 'ಮಹಾಸತಿ' ಧಾರಾವಾಹಿಯನ್ನು ಸುನೀಲ್ ಪುರಾಣಿಕ್ ನಿರ್ಮಾಣ ಮಾಡಿದ್ದರು. ಈ ಸೆಟ್ನಲ್ಲಿ ಸಾಗರ್ ಮತ್ತು ದೀಪಾ ಮೊದಲು ಭೇಟಿಯಾಗಿದ್ದರಂತೆ.
ಕನ್ನಡ ಕಿರುತೆರೆಯಲ್ಲಿ ಬಹಳ ಹೆಸರು ಮಾಡಿರುವ ನಟ ಸುನಿಲ್ ಪುರಾಣಿಕ್ ಅವರ ಮಗ ಸಾಗರ್. ಅಪ್ಪನಂತೆ ಸಾಗರ್ ಅವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ. ಸಾಗರ್ ಪುರಾಣಿಕ್ ಅವರು ನಿರ್ದೇಶಕ. ಅವರ ಮೊದಲ ನಿರ್ದೇಶನದ ಸಿನಿಮಾ ಡೊಳ್ಳು ಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಲಭಿಸಿದೆ.
ಸದ್ಯಕ್ಕೆ ದೀಪಾ ಜಗದೀಶ್ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ಸೆಟ್ನಲ್ಲಿ ತೊಂದರೆ ಆಗಿತ್ತು ಎಂದು ತೊರೆದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಕೂಡ ಕಾವ್ಯಾಂಜಲಿ ಧಾರಾವಾಹಿ ಅಂತ್ಯವಾಗಲಿದೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಸಿಂಪಲ್ ಸುಂದರಿ - ಫ್ಯಾಮಿಲಿ ಜೊತೆ ಶ್ವೇತಾ ಫುಲ್ ಎಂಜಾಯ್
`ಕೆಮಿಸ್ಟ್ರಿ ಆಫ್ ಕರಿಯಪ್ಪ‘ ಸಿನಿಮಾದ ನಿರ್ದೇಶಕ ಕುಮಾರ್ ಎಲ್ ಅವರು `ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಈ ಸಿನಿಮಾದಲ್ಲಿ ದೀಪಾ ಜಗದೀಶ್ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ