Sadak 2: ಸಡಕ್​ 2 ಚಿತ್ರತಂಡದ ಮೇಲೆ ಹಾಡನ್ನು ನಕಲು ಮಾಡಿದ ಆರೋಪ ಹೊರಿಸಿದ ಪಾಕಿಸ್ತಾನಿ ಗಾಯಕ..!

ಈಗಲೂ ಸಹ ನೆಟ್ಟಿಗರು ಬಾಯ್ಕಾಟ್​ ಸಡಕ್​ 2 ಹಾಗೂ ಅನ್​ಇನ್​ಸ್ಟಾಲ್​ ಹಾಟ್​ಸ್ಟಾರ್​ ಎಂದು ಮತ್ತೆ ಟ್ರೆಂಡ್​ ಮಾಡುತ್ತಿದ್ದಾರೆ. ಹೀಗಿರುವಾಗಲೇ ಪಾಕಿಸ್ತಾನಿ ಗಾಯಕರೊಬ್ಬರು ಈ ಸಿನಿಮಾದ 'ಇಷ್ಕ್​ ಕಮಾಲ್...'​ ಹಾಡು ಪಾಕಿಸ್ತಾನದಲ್ಲಿ 2011ರಲ್ಲೇ ರಿಲೀಸ್ ಆಗಿರುವ ಹಾಡಿನ ಕಾಪಿ ಎಂದು ಆರೋಪಿಸಿದ್ದಾರೆ.

'ಸಡಕ್​ 2' ಸಿನಿಮಾದಲ್ಲಿ ಸಂಜಯ್​ ದತ್​ ಹಾಗೂ ಆಲಿಯಾ ಭಟ್​

'ಸಡಕ್​ 2' ಸಿನಿಮಾದಲ್ಲಿ ಸಂಜಯ್​ ದತ್​ ಹಾಗೂ ಆಲಿಯಾ ಭಟ್​

  • Share this:
ಮಹೇಶ್​ ಭಟ್​ ನಿರ್ದೇಶನದ 'ಸಡಕ್​ 2 ' ಸಿನಿಮಾಗೆ ಟೈಮೇ ಸರಿಯಿಲ್ಲ ಅನಿಸುತ್ತೆ. ಒಂದರ ಮೇಲೆ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಆದಾಗಲೂ ಈ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ಮಾಡಲಾಗಿತ್ತು. ಜೊತೆಗೆ ಆಲಿಯಾ ಹಾಗೂ ಮಹೇಶ್​ ಭಟ್​ ಅವರನ್ನು ಟ್ರೋಲ್​ ಮಾಡಲಾಗಿತ್ತು. 

ಈಗ ನಿನ್ನೆ ರಿಲೀಸ್ ಆಗಿರುವ ಈ ಸಿನಿಮಾದ ಟ್ರೇಲರ್​ಗೆ ಲೈಕ್ಸ್​ಗಿಂತ ಹೆಚ್ಚಾಗಿ ಡಿಸ್​ಲೈಕ್ಸ್​ ಸಿಕ್ಕಿದೆ. ಆದರೆ ಚಿತ್ರತಂಡಕ್ಕೆ ಒಂದು ನೆಮ್ಮದಿಯ ವಿಷಯವೆಂದರೆ, 'ಸಡಕ್​ 2' ಸಿನಿಮಾದ ಟ್ರೇಲರ್ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ.



ಈಗಲೂ ಸಹ ನೆಟ್ಟಿಗರು 'ಬಾಯ್ಕಾಟ್​ ಸಡಕ್​ 2' ಹಾಗೂ 'ಅನ್​ಇನ್​ಸ್ಟಾಲ್​ ಹಾಟ್​ಸ್ಟಾರ್'​ ಎಂದು ಮತ್ತೆ ಟ್ರೆಂಡ್​ ಮಾಡುತ್ತಿದ್ದಾರೆ. ಹೀಗಿರುವಾಗಲೇ ಪಾಕಿಸ್ತಾನಿ ಗಾಯಕರೊಬ್ಬರು ಈ ಸಿನಿಮಾದ 'ಇಷ್ಕ್​ ಕಮಾಲ್...'​ ಹಾಡು ಪಾಕಿಸ್ತಾನದಲ್ಲಿ 2011ರಲ್ಲೇ ರಿಲೀಸ್ ಆಗಿರುವ ಹಾಡಿನ ಕಾಪಿ ಎಂದು ಆರೋಪಿಸಿದ್ದಾರೆ.

@foxstarhindi 



2011ರ ಸೆ.8 ರಂದು 'ರಬ್ಬಾ ಹೋ...' ಎಂಬ ಹಾಡು ಪಾಕಿಸ್ತಾನದಲ್ಲಿ ರಿಲೀಸ್​ ಆಗಿದೆ. ಈ ಹಾಡಿನ ಜೊತೆಗೆ ಮ್ಯೂಸಿಕ್​ ಅನ್ನೂ 'ಸಡಕ್​ 2' ಚಿತ್ರತಂಡ ಕಾಪಿ ಮಾಡಿದೆ ಎಂದು ಪಾಕಿಸ್ತಾನಿ ಗಾಯಕ ಶೆಜಾನ್​ ಸಲೀಂ ಅವರು ಆರೋಪಿಸುತ್ತಾ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Sadak 2 Trailer: ಲೈಕ್ಸ್​ಗಿಂತ ಹೆಚ್ಚು ಡಿಸ್​ಲೈಕ್ಸ್​ ಪಡೆದ ವಿಡಿಯೋವಾಗಿ ಹೊರಹೊಮ್ಮಿದ ಸಡಕ್​ 2 ಟ್ರೇಲರ್​..!

ಸಲೀಂ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಎರಡೂ ಹಾಡುಗಳನ್ನು ತೋರಿಸಿದ್ದು, ಪಾಕಿಸ್ತಾನದಲ್ಲಿ ರಿಲೀಸ್​ ಆಗಿರುವ ಹಾಡಿನ ವಿಡಿಯೋ ಹಾಗೂ ದಿನಾಂಕವನ್ನೂ ತೋರಿಸುತ್ತಾ ನಕಲು ಮಾಡಿರುವ ಆರೋಪ ಹೊರಿಸಿದ್ದಾರೆ.



11 ವರ್ಷಗಳ ಹಿಂದೆ ತನ್ನ ಸ್ನೇಹಿತ ಜೈದ್​ ಖಾನ್​ ಅವರ ರಬ್ಬಾ ಹೋ ಹಾಡನ್ನು ತಾನೇ ನಿರ್ಮಿಸಿದ್ದಾಗಿಯೂ ಸಲೀಂ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್​ ದತ್​, ಪೂಜಾ ಭಟ್​, ಆದಿತ್ಯ ರಾಯ್​ ಕಪೂರ್ ಹಾಗೂ ಆಲಿಯಾ ಭಟ್​ ನಟಿಸಿದ್ದಾರೆ.
Published by:Anitha E
First published: